Actor Prabhas: ಫಿಕ್ಸ್ ಆಯಿತು ನಟ ಪ್ರಭಾಸ್ ಮದುವೆ, ಮಗನ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ ತಾಯಿ.

ಫಿಕ್ಸ್ ಆಯಿತು ನಟ ಪ್ರಭಾಸ್ ಮದುವೆ, ಕುಟುಂಬದಿಂದ ಬಂದ ಮಾಹಿತಿ.

Actor Prabhas Marriage: ಟಾಲಿವುಡ್‌ ನಟ ಪ್ರಭಾಸ್‌ (Prabhas) ಅವರು ಆಗಾಗ ಅವರ ಮದುವೆ ವಿಷಯವಾಗಿ ಸುದ್ದಿಯಲ್ಲಿರುತ್ತಾರೆ. ಬಾಹುಬಲಿ ಸಿನಿಮಾ ಮೂಲಕ ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ಈ ನಟ ಅನೇಕ ಹಿಟ್ ಸಿನಿಮಾ ನೀಡಿದವರಾಗಿದ್ದರೆ.

ಇವರು ಸದ್ಯಕ್ಕೆ ‘ಕಲ್ಕಿ’ 2898 ಎಡಿ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಭಾರತಕ್ಕೆ ವಾಪಸಾಗಿದ್ದ ಪ್ರಭಾಸ್‌ ಈಗ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈಗ ಅವರ ಬಗ್ಗೆ ಬಿಗ್ ಮಾಹಿತಿಯೊಂದು ಹರಿದಾಡುತ್ತಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ಎನ್ನಲಾಗಿದೆ.

Actor Prabhas Marriage
Image Credit: M9

ಪ್ರಭಾಸ್ ಗೆ ಮದುವೆ ಮಾಡಿಸಿದ ಅಭಿಮಾನಿಗಳು

ಪ್ರಭಾಸ್‌ ಹಾಗು ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಆಗಾಗ ಹರಿದಾಡುತ್ತಿರುತ್ತವೆ. ಸ್ವತಃ ಪ್ರಭಾಸ್ ಅವರೇ ನಾವಿಬ್ಬರೂ ಸ್ನೇಹಿತರಷ್ಟೇ, ನಮ್ಮ ನಡುವೆ ಬೇರೆ ಏನಿಲ್ಲ ಎಂದು ಒಮ್ಮೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರಿಗೂ ಮದುವೆ ಮಾಡಿಸುವವರೆಗೂ ಬಿಡುತ್ತಿಲ್ಲ. ಪ್ರಭಾಸ್‌ ಹಾಗೂ ಅನುಷ್ಕಾ ಶೆಟ್ಟಿಗೆ ಮದುವೆ ಆಗಿ ಮಕ್ಕಳಾಗಿರುವಂತೆ ಅಭಿಮಾನಿಗಳು ಎಐ ಜನರೇಟೆಡ್‌ ಫೋಟೋಗಳನ್ನು ಸೃಷ್ಟಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಆದರೆ ಪ್ರಭಾಸ್‌ ಮಾತ್ರ ಈ ವಿಚಾರದ ಬಗ್ಗೆ ಎಲ್ಲಿಯೂ ನೇರವಾಗಿ ಉತ್ತರಿಸಿಲ್ಲ. ಈ ಫೋಟೋ ವೈರಲ್‌ ಆಗುತ್ತಿದ್ದಂತೆ ಇದೀಗ ಪ್ರಭಾಸ್‌ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರತಿಕ್ರಿಯಿಸಿದ್ದಾರೆ.

ತನ್ನ ಪತಿಯನ್ನು ನೆನೆದ ಶ್ಯಾಮಲಾದೇವಿ

ಪ್ರಭಾಸ್‌ ಅವರ ದೊಡ್ಡಮ್ಮ ಕೃಷ್ಣಂರಾಜು ಪತ್ನಿ ಶ್ಯಾಮಲಾದೇವಿ ಅವರು ಹೈದರಾಬಾದ್‌ನಲ್ಲಿ ಜರುಗಿದ ಅನ್ನಪೂರ್ಣ ದೇವಿ ಉತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ದೇವಿ ದರ್ಶನ ಪಡೆದು ಮಾತನಾಡಿದ ಅವರು, ”ಕೃಷ್ಣಂರಾಜುರವರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ಅವರ ಕೋರಿಕೆಯಂತೆ ಎಲ್ಲವೂ ನಡೆಯುತ್ತಿದೆ. ಅವರು ಎಂದಿಗೂ ತಮ್ಮ ಮನೆಗೆ ಬಂದವರಿಗೆ ಊಟ ನೀಡದೆ ವಾಪಸ್‌ ಕಳಿಸುತ್ತಿರಲಿಲ್ಲ. ಅವರು ಇಂದು ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು” ಎಂದು ಪತಿ ಬಗ್ಗೆ ಮಾತನಾಡಿದರು.

Actor Prabhas Latest News
Image Credit: Bollywoodshaadis

ಮುಂದಿನ ದಸರಾ ಒಳಗೆ ಪ್ರಭಾಸ್‌ ಮದುವೆ

ನಂತರ ಪ್ರಭಾಸ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು ”ಪ್ರಭಾಸ್‌ನಂಥ ಮಗ ನಮಗೆ ದೊರೆತಿರುವುದಕ್ಕೆ ಬಹಳ ಖುಷಿಯಾಗುತ್ತದೆ. ನಾವು ಅವರ ದೊಡ್ಡಪ್ಪ, ದೊಡ್ಡಮ್ಮ ಎಂದು ಕರೆಸಿಕೊಳ್ಳುವುದು ನಮಗೆ ಬಹಳ ಸಂತೋಷ. ಪ್ರಭಾಸ್‌ ನೂರು ಕಾಲ ಸುಖವಾಗಿ ಬಾಳಬೇಕು” ಎಂದು ಶ್ಯಾಮಲಾ ದೇವಿ ಪ್ರಭಾಸ್‌ ಅವರನ್ನು ಹಾರೈಸಿದರು. ಪ್ರಭಾಸ್‌ ಮದುವೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ಯಾಮಲಾ ದೇವಿ.

”ಹುಡುಗಿ ಯಾರು, ಮದುವೆ ದಿನಾಂಕ ಯಾವುದು ಇನ್ನೂ ಗೊತ್ತಿಲ್ಲ. ಆದರೆ ಆದಷ್ಟು ಬೇಗ ಅಭಿಮಾನಿಗಳು ಖುಷಿ ಪಡುವ ದಿನ ಬರಲಿದೆ. ಅವರಿಗೆ ದೇವಿ ಆಶೀರ್ವಾದ ಇದೆ. ಮುಂದಿನ ದಸರಾ ವೇಳೆಗೆ ಪ್ರಭಾಸ್‌ ಮದುವೆ ಆಗಲಿದೆ” ಎಂದು ಮಗನ ಮದುವೆ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಇನ್ನು ಒಂದು ವರ್ಷದಲ್ಲಿ ಪ್ರಭಾಸ್ ಮದುವೆ ಖಚಿತ ಎನ್ನಬಹುದು.

Leave A Reply

Your email address will not be published.