Rakshit Shetty: ಟಾಪ್ ನಟ ರಕ್ಷಿತ್ ಶೆಟ್ಟಿ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು…? ಈಗಿನ ಸಂಭಾವನೆ ಎಷ್ಟು…?
ಟಾಪ್ ನಟ ರಕ್ಷಿತ್ ಶೆಟ್ಟಿ ಅವರು ಮೊದಲು ಪಡೆದ ಸಂಭಾವನೆ ಎಷ್ಟು ಗೊತ್ತಾ...?
Actor Rakshith Shetty Remunaration: ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನತ್ತ ಸಾಗುತ್ತಿರುವ ಟಾಪ್ ನಟರ ಪಟ್ಟಿಯಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಕೂಡ ಅಗ್ರಸ್ಥಾನದಲ್ಲಿದ್ದಾರೆ. ಕೇವಲ ನಟನೆಗೆ ಸೀಮಿತ ಆಗಿರದ ರಕ್ಷಿತ್ ಶೆಟ್ಟಿ ತನ್ನ ಸಿನಿಮಾ ಗಳಿಗೆ ತಾನೇ ನಿರ್ದೇಶಕ ಹಾಗು ನಿರ್ಮಾಪಕರಾಗಿದ್ದಾರೆ. ಈಗಾಗಲೇ ಹಲವು ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಇವರು ಜೀವನದಲ್ಲಿ ತುಂಬಾ ಕಷ್ಟ ಕಂಡವರಾಗಿದ್ದಾರೆ. ಈಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಈ ನಟ ತನ್ನ ಅಪ್ಪನ ಜೊತೆ ಕೆಲಸ ಮಾಡಿ ಪೊಕೆಟ್ ಮನಿ ಪಡೆಯುತ್ತಿದ್ದರಂತೆ.

ರಕ್ಷಿತ್ ಶೆಟ್ಟಿಯವರ ಕಷ್ಟದ ಜೀವನ
ರಕ್ಷಿತ್ ಶೆಟ್ಟಿಯವರ ತಂದೆ ಕನ್ಸ್ಟ್ರಕ್ಷನ್ ಫೀಲ್ಡ್ನಲ್ಲಿದ್ದವರು. ಬಹಳ ಕಡಿಮೆ ವಯಸ್ಸಿಗೆ ಕಾರು ಓಡಿಸುವುದು ಕಲಿತಿದ್ದ Rakshit Shetty, ಅಪ್ಪ ಕೆಲಸ ಮಾಡಿಸುತ್ತಿದ್ದ ಜಾಗಕ್ಕೆ ಸೀಮೆಂಟ್ ಮೂಟೆಗಳನ್ನು ಕೊಂಡುಯ್ಯುವ ಕೆಲಸ ಮಾಡುತ್ತಿದ್ದರಂತೆ. ಅವರೇ ಮೂಟೆಗಳನ್ನು ಹೊತ್ತು ವಾಹನಕ್ಕೆ ಹಾಕಿ, ಸೈಟ್ಗೆ ಹೋಗಿ ಇಳಿಸುತ್ತಿದ್ದರಂತೆ.
ಆಗೆಲ್ಲ ರಕ್ಷಿತ್ರ ತಂದೆ ಅವರಿಗೆ ಪ್ರತಿ ಮೂಟೆ ಸಿಮೆಂಟಿಗೆ ಎರಡು ರೂಪಾಯಿ ಹಣ ಹಾಗೂ ವಾಹನ ಓಡಿಸಿಕೊಂಡು ಬಂದಿದ್ದಕ್ಕೆ 10 ರೂಪಾಯಿ ಒಮ್ಮೊಮ್ಮೆ 20 ರೂಪಾಯಿ ಹಣ ನೀಡುತ್ತಿದ್ದರಂತೆ. ಅದೇ ಅವರ ಪಾಕೆಟ್ ಮನಿಯೂ ಆಗಿತ್ತಂತೆ. ನಂತರ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಸೇರಿದ್ದು, ಇವರ ಮೊದಲ ಐಟಿ ಜಾಬ್ ಗೆ ಮೊದಲ ತಿಂಗಳು ಸಿಕ್ಕ ಸಂಬಳ 12 ಸಾವಿರವಂತೆ. ಆದರೆ ಈಗ ರಕ್ಷಿತ್ ಶೆಟ್ಟಿ ಡೇಟ್ಸ್ ಸಿಗುವುದೇ ಕಷ್ಟ, ಸಿನಿಮಾ ಒಂದಕ್ಕೆ ಕೋಟ್ಯಂತರ ಸಂಭಾವನೆಯನ್ನು ರಕ್ಷಿತ್ ಪಡೆಯುತ್ತಿದ್ದಾರೆ.

ಸೋಲಿನ ನಂತರ ಗೆಲುವನ್ನು ಕಂಡ ರಕ್ಷಿತ್ ಶೆಟ್ಟಿ
Rakshit Shetty ಮೊದಲು ನಟಿಸಿದ ಸಿನಿಮಾ ‘ನಮ್ ಏರಿಯಾಲ್ ಒಂದ್ ದಿನ’ ಆ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿಕಾಣಿಸಿಕೊಂಡ ರಕ್ಷಿತ್ ಶೆಟ್ಟಿ ಅದಾದ ಬಳಿಕ ‘ತುಘಲಕ್’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಫ್ಲಾಪ್ ಆಯ್ತು. ಅದಾದ ಬಳಿಕ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಸೂಪರ್ ಹಿಟ್ ಆಯ್ತು. ಅದರ ಬಳಿಕ ರಕ್ಷಿತ್ ಶೆಟ್ಟಿ ತಿರುಗಿ ನೋಡಿದ್ದೇ ಇಲ್ಲ.
ಒಂದರ ಮೇಲೊಂದು ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಅವರೇ ಹೇಳಿರುವಂತೆ, ಸಿನಿಮಾ ನನಗೆ ಎಲ್ಲವೂ, ಹೇಗೆಂದರೆ ಹಾಗೆ ಸಿನಿಮಾ ಮಾಡುವುದು ನನಗೆ ಇಷ್ಟವಿಲ್ಲ, ಮುಂದೊಮ್ಮೆ ನಾನೇ ನನ್ನ ಪಯಣ ಹಿಂದಿರುಗಿ ನೋಡಿದಾಗ ಕೆಲವಾದರೂ ಒಳ್ಳೆಯ ಸಿನಿಮಾಗಳು ಕಾಣಬೇಕು ಎಂದಿದ್ದರು Rakshit Shetty. ಸ್ವತಃ ನಿರ್ದೇಶಕರೂ ಆಗಿರುವ ರಕ್ಷಿತ್ ಶೆಟ್ಟಿ, ಇನ್ನುಮುಂದೆ ನಟನೆಗಿಂತಲೂ ನಿರ್ದೇಶನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೇನೆ ಎಂದು ಸಹ ಹೇಳಿದ್ದಾರೆ. ಇನ್ನುಮುಂದೆ ಕೂಡ ಅವರ ಸಿನಿಮಾ ಜರ್ನಿ ಹೀಗೆ ಸಾಗಲಿ ಅನ್ನುತಾ, ಇನ್ನು ಒಳ್ಳೆಯ ಸಿನಿಮಾಗಳು ಅವರಿಂದ ಬರಲಿ ಎಂದು ಆಶಿಸೋಣ.