Salman Khan: ಸಲ್ಮಾನ್ ಕೈಯಲ್ಲಿ ಹೊಸ ಡೈಮಂಡ್ ಸ್ಟಡ್ ರೋಲೆಕ್ಸ್ ವಾಚ್! ಅಬ್ಬಬ್ಬಾ ಇಷ್ಟು ದುಬಾರಿಯಾ?
ದುಬಾರಿ ವಾಚ್ ಧರಿಸಿ ಕ್ಯಾಮರಾ ಮುಂದೆ ಪೋಸ್ ಕೊಟ್ಟ ಬಾಲಿವುಡ್ ನಟ.
Actor Salman Khan Diamond Studded Rolex Watch: ಬಾಲಿವುಡ್ ನಟರಲ್ಲಿ ಸಲ್ಮಾನ್ ಖಾನ್ (Salman Khan) ಅವರ ಸ್ಟೈಲ್, ಲುಕ್ ಎಲ್ಲರಲ್ಲೂ ಮೈ ಜುಮ್ ಅನ್ನಿಸುತ್ತದೆ. ಇವರ ಅಪ್ಪಟ್ಟ ಹೀರೊ ಲುಕ್ ಗೆ ಫಿದಾ ಆಗದೆ ಇರುವವರು ಇರಲು ಸಾಧ್ಯವೇ ಇಲ್ಲ.
ನಟರು ಅಂದ ಮೇಲೆ ಅವರ ಜೀವನ ಶೈಲಿಯೇ ವಿಶೇಷ ಆಗಿರುತ್ತದೆ. ಅವರು ಹಾಕುವ ಬಟ್ಟೆಯಿಂದ ಹಿಡಿದು ಶೋ ತನಕವೂ ಬ್ರಾಂಡ್ ಆಗಿದ್ದು, ಬಹಳ ದುಬಾರಿ ಆಗಿರುತ್ತದೆ. ಹಾಗೆಯೆ ಸಲ್ಮಾನ್ ಖಾನ್ ದೀಪಾವಳಿ ವಿಶೇಷವಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಸುಂದರ ನೋಟದೊಂದಿಗೆ ಕಣ್ಣು ಕುಕ್ಕುವ ವಾಚ್ ಅನ್ನು ಧರಿಸಿದ್ದರು. ಈಗ ಅವರು ಧರಿಸಿದ ವಾಚ್ ಬಗ್ಗೆಯೇ ಬಿಸಿ ಬಿಸಿ ಚರ್ಚೆ ಆಗುತ್ತಿದೆ.
ಡೈಮಂಡ್ ಸ್ಟಡೆಡ್ ರೋಲೆಕ್ಸ್ ವಾಚ್ ಧರಿಸಿ ಮಿಂಚಿದ ನಟ ಸಲ್ಮಾನ್ ಖಾನ್
ಐಷರಾಮಿ ಜೀವನ ನೆಡೆಸುವ ಬಾಲಿವುಡ್ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರಾಗಿದ್ದಾರೆ. ಈ ನಟ ತನ್ನ ತಂಗಿ ಅರ್ಪಿತಾ ಖಾನ್ ಹಾಗೂ ಭಾವ ಆಯುಷ್ ಶರ್ಮಾ ಅವರ ದೀಪಾವಳಿ ಸೆಲೆಬ್ರೇಷನ್ನಲ್ಲಿ ಭಾಗಿಯಾದಾಗ ಸ್ಟೈಲಿಷ್ ಬ್ಲ್ಯಾಕ್ ಶರ್ಟ್ ಧರಿಸಿದ್ದರು. ನಟನ ವಾಚ್ ಎಲ್ಲರ ಗಮನ ಸೆಳೆಯಿತು. ಡೈಮಂಡ್ ಸ್ಟಡೆಡ್ ರೋಲೆಕ್ಸ್ ವಾಚ್ ಧರಿಸಿ ಸುತ್ತಾಡೋ ಸಲ್ಮಾನ್ ಖಾನ್ ಮೇಲೆ ಕ್ಯಾಮೆರಾ ಕಣ್ಣು ಬಿದ್ದಿದೆ. ಅವರ ವಾಚ್ ಕಡೆಗೆ ಕ್ಯಾಮೆರಾ ಜೂಮ್ ಆಗಿದ್ದು ಅದರ ಬೆಲೆಯ ಕುರಿತು ಭಾರೀ ಚರ್ಚೆಗಳು ನಡೆದಿವೆ.
ಕೋಟಿ ಬೆಲೆ ಬಾಳುವ ದುಬಾರಿ ವಾಚ್ ಧರಿಸಿದ್ದ ನಟ ಸಲ್ಮಾನ್ ಖಾನ್
ನಟರ ಕೈಯಲ್ಲಿ ಲಕ್ಷುರಿ ವಾಚ್ ಗಳಿರುವುದು ವಿಶೇಷ ಏನಲ್ಲ. ಆದರೆ ಈ ಬಾರಿ ಸಲ್ಮಾನ್ ಖಾನ್ ಧರಿಸಿದ್ದ ವಾಚ್ ಬೆಲೆ ಕೇಳಿದ್ದಾರೆ ಶಾಕ್ ಆಗದೆ ಇರಲು ಸಾಧ್ಯ ಇಲ್ಲ. ನಟನ ಕೈಯಲ್ಲಿ ಸದ್ಯ ಕಾಣಿಸಿಕೊಂಡಿರೋ ಟೈಮ್ಪೀಸ್ ರೋಲೆಕ್ಸ್ ಸ್ಕೈ ಡ್ವೆಲ್ಲರ್ ಮಟಿಯೋರೈಟ್ ವಾಚ್ ಇದರ ಬೆಲೆ ಬರೋಬ್ಬರಿ 2.9 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ .
ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುವ ನಟ ಸಲ್ಮಾನ್ ಖಾನ್
ನಟಿ ಕತ್ರೀನಾ ಕೈಫ್ ಹಾಗು ಸಲ್ಮಾನ್ ಖಾನ್ ಜೋಡಿಯಾಗಿ ನಟಿಸಿದ ಟೈಗರ್ 3 ರಿಲೀಸ್ ಆಗಿದೆ. ಇದರಲ್ಲಿ ಸಲ್ಮಾನ್ ಖಾನ್ ನಟಿ ಕತ್ರೀನಾ ಕೈಫ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಕಾಂಬಿನೇಷನ್ ಭರ್ಜರಿ ಹಿಟ್ ಆಗಿದ್ದು, ಮನೀಷ್ ಶರ್ಮಾ ನಿರ್ದೇಶನದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡುತ್ತಿದೆ. ಇದು ಟೈಗರ್ ಸಿನಿಮಾಗಳಲ್ಲಿ ಮೂರನೇ ಸಿನಿಮಾ ಆಗಿದೆ. ಆದರೆ ಇದು ಸಲ್ಮಾನ್ ಖಾನ್ಗೆ ನಿರೀಕ್ಷಿತ ಹಿಟ್ ತಂದುಕೊಟ್ಟಿಲ್ಲ. ಸಿನಿಮಾ ಫ್ಲಾಪ್ ಆಗಿಲ್ಲ. ಆದರೆ ದೊಡ್ಡ ಬ್ಲಾಕ್ಬಸ್ಟರ್ ಎನ್ನುವಂತೆಯೂ ಇಲ್ಲ. ಆದ್ರೆ ಈ ಜೋಡಿ ಮಾತ್ರ ಸಕ್ಕತ್ತಾಗಿ ಮಿಂಚಿದ್ದಾರೆ ಎನ್ನಲಾಗಿದೆ.