Sanjay Dutt: ಪತ್ನಿ ಮತ್ತು ಮಂತ್ರಿಯನ್ನು ಕೊಂದ ನಟ ಸಂಜಯ್ ದತ್, ಮಾಧ್ಯಮದ ಮುಂದೆ ಸತ್ಯ ಹೇಳಿದ ಸಂಜಯ್ ದತ್.

ಜೀವನದ ರಹಸ್ಯ ಬಿಚ್ಚಿಟ್ಟ ಸಂಜಯ್ ದತ್, ತನ್ನ ಕರ್ಮದ ಫಲ ಅನುಭವಿಸುತ್ತಿದ್ದೇನೆ ಅಂತ ಹೇಳಿದ್ಯಾಕೆ...?

Actor Sanjay Dutt Latest News: ಬಾಲಿವುಡ್‌ ನಟ ಸಂಜಯ್‌ ದತ್‌ (Sanjay Dutt) ಆಗಾಗ ಸುದ್ದಿಯಲ್ಲಿರುತ್ತಾರೆ, ಇವರು ತಮ್ಮ ನಟನೆಯಿಂದ ಎಷ್ಟು ಫೇಮಸ್‌ ಆಗಿದ್ದಾರೋ ವೈಯಕ್ತಿಕ ವಿಚಾರಗಳಿಂದ ಕೂಡ ಅಷ್ಟೇ ಸುದ್ದಿಯಾಗಿದ್ದಾರೆ. ಕೆಲವೊಂದು ಇಂಟರ್‌ವ್ಯೂಗಳಲ್ಲಿ ಸಂಜಯ್‌ ಮದುವೆಗೂ ಮುನ್ನ ತಮಗೆ ಇದ್ದ ಗರ್ಲ್‌ ಫ್ರೆಂಡ್ಸ್‌ ಬಗ್ಗೆ ಕೂಡಾ ಹೇಳಿಕೊಂಡಿದ್ದರು.

ಮೊದಲ ಎರಡು ಮದುವೆಯಿಂದ ಹೊರ ಬಂದಿರುವ ಸಂಜಯ್‌ ದತ್‌ ಈಗ ಮೂರನೇ ಪತ್ನಿ ಮಾನ್ಯತಾ ದತ್‌ ಜೊತೆ ಇದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್‌ ದತ್‌ ಜೈಲುವಾಸ ಕೂಡಾ ಅನುಭವಿಸಿ ಬಂದಿದ್ದಾರೆ.

Sanjay Dutt Latest News
Image Credit: Hindustantimes

ಸಂಜಯ್ ದತ್ ಅವರ ವೈವಾಹಿಕ ಜೀವನ

ಸಂಜಯ್‌ ದತ್‌ 1987ಲ್ಲಿ ರೀಚಾ ಶರ್ಮಾ ಅವರನ್ನು ಮದುವೆ ಆಗಿದ್ದರು. 1996ರಲ್ಲಿ ಆಕೆ ಬ್ರೈನ್‌ ಟ್ಯೂಮರ್‌ನಿಂದ ನಿಧನರಾದರು. ಈ ದಂಪತಿಗೆ ತ್ರಿಶಲಾ ಎಂಬ ಪುತ್ರಿ ಇದ್ದಾರೆ. ನಂತರ 1998ರಲ್ಲಿ ರೆಹಾ ಪಿಳ್ಳೈ ಕೈ ಹಿಡಿದರು, ಆದರೆ ಈ ಜೋಡಿ 10 ವರ್ಷಗಳ ನಂತರ ಡಿವೋರ್ಸ್‌ ಪಡೆದರು.

ಎರಡನೇ ಪತ್ನಿಗೆ ಡಿವೋರ್ಸ್‌ ಕೊಟ್ಟ ವರ್ಷವೇ ಸಂಜಯ್‌ ದತ್‌, ಮಾನ್ಯತಾ ಮದುವೆ ಆದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ಧಾರೆ. ಒಮ್ಮೆ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಸಂಜಯ್‌ ದತ್‌, ತನ್ನ ಹೆಂಡತಿಗೆ ಮಂತ್ರಿಯೊಬ್ಬರೊಂದಿಗೆ ಸಂಬಂಧ ಇತ್ತು. ಅದಕ್ಕೆ ಅವಳನ್ನು ಕೊಂದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದರು.‌

Sanjay Dutt And Manyata
Image Credit: Scoopadda

ಹಿಂದಿನ ಜನ್ಮದ ರಹಸ್ಯ

”ನನ್ನ ಹೆಂಡತಿಗೆ ಮಂತ್ರಿಯೊಬ್ಬರ ಜೊತೆ ಅಫೇರ್‌ ಇತ್ತು, ಇದೇ ಕಾರಣಕ್ಕೆ ನಾನು ಮಂತ್ರಿ ಹಾಗೂ ನನ್ನ ಪತ್ನಿ ಇಬ್ಬರನ್ನೂ ಸಾಯಿಸಿಬಿಟ್ಟೆ, ಅವರನ್ನು ಸಾಯಿಸಿದ ಕರ್ಮ ನನ್ನನ್ನು ಇಂದಿಗೂ ಕಾಡುತ್ತಿದೆ” ಎಂದು ಹೇಳಿದ್ದರು. ಈ ವಿಡಿಯೋ ತುಣುಕು ವೈರಲ್‌ ಆದಾಗ ಜನರು ಶಾಕ್‌ ಆಗಿದ್ದರು. ಇದೇನಪ್ಪಾ ಸಂಜಯ್‌ ದತ್‌ ಮೊದಲ ಪತ್ನಿ ನಿಧನರಾಗಿದ್ದು ಬ್ರೈನ್‌ ಟ್ಯೂಮರ್‌ನಿಂದ ತಾನೇ, ಆದರೆ ಸಂಜಯ್‌ ದತ್‌ ಈಗ ಈ ರೀತಿ ಏಕೆ ಹೇಳುತ್ತಿದ್ದಾರೆ ಎಂದುಕೊಂಡಿದ್ದರು.

ಅಸಲಿಗೆ ಸಂಜಯ್‌ ದತ್‌ ಹೇಳಿದ್ದು ಹಿಂದಿನ ಜನ್ಮದ ಕಥೆ. ಸಾಮಾನ್ಯವಾಗಿ ಯಾರೇ ಆಗಲಿ, ಏನಾದರೂ ಕಷ್ಟ ಅನುಭವಿಸುತ್ತಿದ್ದರೆ, ಹಿಂದಿನ ಜನ್ಮದ ಕರ್ಮವನ್ನು ಈಗ ಅನುಭವಿಸುತ್ತಿದ್ದೇವೆ ಎಂದು ಹೇಳುವುದು ಸಹಜ. ನಟ ಸಂಜಯ್‌ ದತ್‌ ಕೂಡಾ ಇದೇ ವಿಚಾರದ ಬಗ್ಗೆ ಅಂದು ಮಾತನಾಡಿದ್ದರು. ಮದ್ರಾಸ್‌ ಸಮೀಪದ ಶಿವನಾರಿಗೆ ಒಮ್ಮೆ ಸ್ನೇಹಿತರೊಂದಿಗೆ ಹೋಗಿದ್ದೆ. ಅಲ್ಲಿ ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾರೆ. ಅಲ್ಲಿ ಹೋದಾಗ ಅವರು ನನ್ನ ಹಿಂದಿನ ಜನ್ಮದ ಬಗ್ಗೆ ಹೇಳಿದರು.

Sanjay Dutt Revealed that he wife has affair with minister
Image Credit: Aajtak

ನನ್ನ ಕರ್ಮದಿಂದ ಎಲ್ಲರನ್ನು ಕಳೆದುಕೊಂಡೆ

ಸಂಜಯ್ ದತ್ ಅವರು ಹೇಳಿದ ಪ್ರಕಾರ, ”ನಾನು ಹಿಂದಿನ ಜನ್ಮದಲ್ಲಿ ಅಶೋಕನ ಕಾಲದಲ್ಲಿ ರಾಜನಾಗಿದ್ದೆ. ಆದರೆ ನನ್ನ ಪತ್ನಿ, ಮಂತ್ರಿಯೊಂದಿಗೆ ಅಫೇರ್‌ ಇಟ್ಟುಕೊಂಡಿದ್ದಳು. ಆಕೆ ನನ್ನನ್ನು ಸಾಯಿಸಲು ಪ್ರಯತ್ನಿಸಿದ್ದಳು. ನನಗೆ ವಿಚಾರ ತಿಳಿದು ಅರಮನೆಗೆ ಬಂದು ಪತ್ನಿ, ಮಂತ್ರಿ ಇಬ್ಬರನ್ನೂ ಸಾಯಿಸಿಬಿಟ್ಟೆ. ನಾನು ಆಗ ಶಿವಭಕ್ತನಾಗಿದ್ದು ಕಾಡಿಗೆ ಹೋಗಿ ಹಸಿವಿನಿಂದ ಸತ್ತೆ.

ಆಗ ನಾನು ಒಳ್ಳೆ ಕೆಲಸಗಳನ್ನು ಮಾಡಿದ್ದರಿಂದ ಈ ಜನ್ಮದಲ್ಲಿ ಒಳ್ಳೆ ಕುಟುಂಬದಲ್ಲಿ ಜನಿಸಿದ್ದೇನೆ. ಆದರೆ ಅವರಿಬ್ಬರನ್ನೂ ಕೊಂದಿದ್ದಕ್ಕೆ ಬಹಳ ಕಷ್ಟ ಅನುಭವಿಸುತ್ತಿದ್ದೇನೆ. ಆ ಕರ್ಮದಿಂದಲೇ ಈ ಜನ್ಮದಲ್ಲಿ ತಾಯಿ, ಪತ್ನಿಯನ್ನು ಕಳೆದುಕೊಂಡೆ, ಜೈಲುವಾಸ ಅನುಭವಿಸಿದೆ, ಕ್ಯಾನ್ಸರ್‌ನಿಂದ ಕೂಡ ಬಳಲಿದೆ” ಎಂದು ಸಂಜಯ್‌ ದತ್‌ ಹೇಳಿಕೊಂಡಿದ್ದರು.

Leave A Reply

Your email address will not be published.