Sanjay Dutt: ಲಿಯೋ ಚಿತ್ರಕ್ಕೆ ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು ಗೊತ್ತಾ…? ಭರ್ಜರಿ ಸಂಭಾವನೆ.
ನಟ ಸಂಜಯ್ ದತ್ ಅವರು ವಿಲನ್ ಪಾತ್ರಕ್ಕೆ ಪಡೆದ ಸಂಭಾವನೆ ಕೇಳಿದರೆ ಶಾಕ್ ಆಗುವುದು ಖಚಿತ
Actor Sanjay Dutt Remuneration In Leo Movie: ನಟ ಸಂಜಯ್ ದತ್ (Sanjay Dutt) ಅವರು ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ. ಕನ್ನಡದ KGF 2ರಲ್ಲಿ ವಿಲನ್ ಆಗಿ ಕಾಣಿಸಿಕೊಂಡ ಈ ನಟ ಅಧೀರ ಎಂಬ ಪಾತ್ರವನ್ನು ನಿಭಾಯಿಸಿದ್ದು, ಅಧೀರ ಪಾತ್ರದ ಮೂಲಕ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಕೆಜಿಎಫ್ 2’ ಬಳಿಕ ಸಂಜಯ್ ದತ್ ನಟಿಸಿದ 2ನೇ ದಕ್ಷಿಣ ಭಾರತದ ಸಿನಿಮಾ ‘ಲಿಯೋ’ (Leo).
ಈ ಸಿನಿಮಾಗೆ ದೊಡ್ಡ ಮೊತ್ತವನ್ನು ಸಂಭಾವನೆಯ ರೂಪದಲ್ಲಿ ಪಡೆದಿದ್ದಾರೆ ಅನ್ನೋ ಮಾತು ಕಾಲಿವುಡ್‌ನಲ್ಲಿ ಓಡಾಡುತ್ತಿದೆ. ಅಕ್ಟೋಬರ್ 19 ರಂದು ‘ಘೋಸ್ಟ್’ ಹಾಗೂ ‘ಲಿಯೋ’ ಈ ಎರಡು ಸಿನಿಮಾಗಳು ರಿಲೀಜ್ ಆಗಿದ್ದು, ಒಂದೊಂದು ಸಿನಿಮಾಗೂ ಒಂದೊಂದು ರೀತಿಯ ರೆಸ್ಪಾನ್ಸ್ ಸಿಕ್ಕಿದೆ. ‘ಘೋಸ್ಟ್’ ಸಿನಿಮಾಗೆ ಪ್ರೇಕ್ಷಕರು ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದಾರೆ.

ಲಿಯೋ ಸಿನಿಮಾದಲ್ಲಿ ಸಂಜಯ್ ದತ್ ಪಾತ್ರದ ಬಗ್ಗೆ ಮಾಹಿತಿ
ನಟ ವಿಜಯ್ ಅಭಿನಯದ ಲಿಯೋ ಸಿನಿಮಾದಲ್ಲಿ ಸಂಜಯ್ ದತ್ ಅವರು ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹೀರೊ ಆಗಿ ವಿಜಯ್, ವಿಲನ್ ಆಗಿ ಸಂಜಯ್ ದತ್ ಅಭಿಮಾನಿಗಳ ಕಾತುರದ ಸಿನಿಮಾ ಇದಾಗಿತ್ತು. ಸಂಜಯ್ ದತ್ ಆಂಟೋನಿ ದಾಸ್ ಅವತಾರದಲ್ಲಿ ಖಡಕ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಪಾತ್ರ ಪೇಲ್ ಆಗಿದೆ ಎನ್ನಲಾಗಿದೆ.
ಪ್ರೇಕ್ಷಕರಿಂದ ಈ ಸಿನಿಮಾಕ್ಕೆ ಅಷ್ಟೊಂದು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಲೋಕೇಶ್ ಕನಗರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅಲ್ಲದೆ ವಿಜಯ್ ಜೊತೆ ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಬಾಲಿವುಡ್ ನಟ ಸಂಜಯ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲವೂ ಈಗ ಹುಸಿಯಾಗಿದೆ. ಯಾರೇ ಇದ್ದರೂ ತಮಿಳು ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿಲ್ಲ.

ನಿರೀಕ್ಷೆ ಹುಸಿ ಮಾಡಿದ ಲಿಯೋ ಸಿನಿಮಾದ ಕಲೆಕ್ಷನ್
ವಿಜಯ್ ಅಭಿನಯದ ‘ಲಿಯೋ’ ಬಿಡುಗಡೆಗೂ ಮುನ್ನ ಬಹಳ ನಿರೀಕ್ಷೆಯನ್ನು ಹೊಂದಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಟಿಕೆಟ್ ಖರೀದಿ ಮಾಡಿದ್ದು ನೋಡಿದರೆ, ಸಿನಿಮಾ ಬಾಕ್ಸಾಫೀಸ್ ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಮೊದಲ ದಿನ ವರ್ಲ್ಡ್ ವೈಡ್ ಕಲೆಕ್ಷನ್ ಸುಮಾರು 100 ಕೋಟಿ ರೂಪಾಯಿ ದಾಟಬಹುದು ಎಂದು ಹೇಳಲಾಗುತ್ತಿದೆ.
ಲಿಯೋ ಸಿನಿಮಾಕ್ಕೆ ಸಂಜಯ್ ದತ್ ಪಡೆದ ಸಂಭಾವನೆ
ಲಿಯೋ ಚಿತ್ರ ಗೆಲುವಿನ ನಿರೀಕ್ಷೆ ಹುಸಿ ಮಾಡಿದರು, ಸಂಜಯ್ ದತ್ ಪಾತ್ರದ ಬಗ್ಗೆ ಚರ್ಚೆಯಾಗುತ್ತಿಲ್ಲ ಬದಲಾಗಿ ಪಡೆದ ಸಂಭಾವನೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಸಂಜಯ್ ದತ್ ಈ ಸಿನಿಮಾದಲ್ಲಿ ನಟಿಸುವುದಕ್ಕೆ ದೊಡ್ಡ ಮೊತ್ತವನ್ನೇ ಪಡೆದಿದ್ದಾರೆ ಎನ್ನಲಾಗಿದೆ. ‘ಲಿಯೋ’ದ ಆಂಟೋನಿ ದಾಸ್ ಪಾತ್ರದಲ್ಲಿ ನಟಿಸುವುದಕ್ಕೆ ಸಂಜಯ್ ದತ್ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.