Shah Rukh Khan: ವಿಶಾಲ ಬಂಗಲೆ ಮತ್ತು ಐಷಾರಾಮಿ ಕಾರುಗಳನ್ನ ಹೊಂದಿರುವ ನಟ ಶಾರುಖ್ ಖಾನ್ ಅವರ ಒಟ್ಟು ಆದಾಯ ಎಷ್ಟು…?

ಒಂದು ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ಶಾರುಖ್ ಖಾನ್ ಅವರ ಒಟ್ಟು ಆದಾಯ ಕೇಳಿದರೆ ಆಶ್ಚರ್ಯ ಆಗುತ್ತದೆ.

Actor Shah Rukh Khan Net Worth: ಭಾರತೀಯ ಹಿಂದಿ ಚಲನಚಿತ್ರೋದ್ಯಮದ ಉತ್ತಮ ನಟ ಶಾರುಖ್ ಖಾನ್ (Shah Rukh Khan) ಅವರು ಹಲವು ಸಿನಿಮಾಗಳನ್ನು ನೀಡಿದ್ದಾರೆ. ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿರುವ ಇವರು ಹಿಟ್ ಸಿನಿಮಾಗಳ ಮೇಲೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಜವಾನ್ ಸಿನಿಮಾ ಅಂತೂ ಅವರ ನಿರೀಕ್ಷೆಗೂ ಮೀರಿದ ಸಿನಿಮಾ ಆಗಿ ಬಾಕ್ಸ್ ಆಫೀಸ್ ಗಲ್ಲ ಪೆಟ್ಟಿಗೆಯನ್ನು ತುಂಬಿಕೊಂಡಿದೆ. ಯಶಸ್ವಿ ಚಿತ್ರಗಳನ್ನು ನೀಡಿದ ಹೆಮ್ಮೆಯ ನಟ ಇವರಾಗಿದ್ದಾರೆ.

Actor Shah Rukh Khan
Image Credit: Livemint

ಹಲವು ಸಿನಿಮಾ ಹಾಗು ಬ್ರ್ಯಾಂಡ್‌ಗಳ ನಾಯಕ
ನೂರಾರು ಸಿನಿಮಾಗಳಲ್ಲಿ ನಟಿಸಿದ ಈ ನಟ ಕಾರುಗಳು, ಕೈಗಡಿಯಾರಗಳು, ಬಟ್ಟೆ ಮತ್ತು ಗ್ರಾಹಕ ಸರಕುಗಳನ್ನು ಒಳಗೊಂಡಂತೆ ವಿವಿಧ ರೀತಿಯ ಉತ್ಪನ್ನಗಳು ಮತ್ತು ಬ್ರ್ಯಾಂಡ್‌ಗಳ ಜಾಹಿರಾತು ನೀಡುತ್ತಾರೆ. ಈ ವ್ಯವಹಾರಗಳಿಂದ ವರ್ಷಕ್ಕೆ ಕೋಟಿಗಟ್ಟಲೇ ಹಣ ಪಡೆಯುತ್ತಾರೆ. ಇವರು ಬಹುಬೇಡಿಕ ನಟರಾಗಿದ್ದು, ಅವರು ತಮ್ಮ ನಟನೆಗೆ ಅಧಿಕ ಸಂಭಾವನೆ ಯನ್ನು ಕೇಳುವ ನಟರಾಗಿದ್ದು, ಅವರು ನಟಿಸಿದ ಚಲನಚಿತ್ರಗಳಿಂದ ಬರುವ ಲಾಭದ ಪಾಲನ್ನು ಸಹ ಪಡೆಯುತ್ತಾರೆ.

ಕೋಟಿ ಕೋಟಿಯ ಒಡೆಯ ನಟ ಶಾರುಖ್ ಖಾನ್
ಶಾರುಖ್ ಖಾನ್ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಮುಂಬೈನಲ್ಲಿ “ಮನ್ನತ್” ಎಂಬ ಹೆಸರಿನ ಐಷಾರಾಮಿ ಮನೆಯನ್ನು ಒಳಗೊಂಡಂತೆ SRK ಭಾರತದಲ್ಲಿ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಇದು ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾಗಿದೆ. ದುಬೈನಲ್ಲಿ “ಜನ್ನತ್” ಎಂಬ ಹೆಸರಿನ ವಿಲ್ಲಾವನ್ನು ಹೊಂದಿದ್ದಾರೆ, ಇದು ಐಷಾರಾಮಿ ಪಾಮ್ ಜುಮೇರಾ ಪ್ರದೇಶದಲ್ಲಿದೆ.

Actor Shah Rukh Khan Net Worth
Image Credit: Siasat

ಅವರು ಪುಣೆಯಲ್ಲಿ, ಅಲಿಬಾಗ್‌ನಲ್ಲಿ ಮತ್ತು ಲಂಡನ್‌ನಲ್ಲಿ ಮನೆ ಹೊಂದಿದ್ದಾರೆಂದು ವರದಿಯಾಗಿದೆ. ಶಾರುಖ್ ಖಾನ್ ಪ್ರತಿ ಚಿತ್ರಕ್ಕೆ ಸುಮಾರು 100-120 ಕೋಟಿ ಚಾರ್ಜ್ ಮಾಡುತ್ತಾರೆ ಎಂದು ವರದಿಯಾಗಿದೆ. ಶಾರುಖ್ ಖಾನ್ 6300 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದು, ಭಾರತದ ಶ್ರೀಮಂತ​ ಹೀರೋಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವರ್ಷಕ್ಕೆ 280 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುತ್ತಾರೆ. ಸಿನಿಮಾ, ಬ್ರ್ಯಾಂಡ್ ಪ್ರಚಾರ ಹಾಗೂ ಹಲವು ಬಿಸ್ನೆಸ್ ವೆಂಚರ್​ಗಳಿಂದ ಶಾರುಖ್‌ ಲಾಭ ಪಡೆಯುತ್ತಾರೆ. ಅವರು ಯಶಸ್ವಿ ನಟನಾ ವೃತ್ತಿಜೀವನದ ಮೂಲಕ ತಮ್ಮ ಸಂಪತ್ತನ್ನು ಗಳಿಸಿದ್ದಾರೆ, ಜೊತೆಗೆ ವಿವಿಧ ವ್ಯಾಪಾರ ಉದ್ಯಮಗಳಲ್ಲಿ ಹೂಡಿಕೆಯ ಮೂಲಕ ಆಸ್ತಿ ಮಾಡಿದ್ದಾರೆ.

Leave A Reply

Your email address will not be published.