Actress Leelavathi: ಲೀಲಾವತಿ ಅಮ್ಮನ ಬಗ್ಗೆ ಶಿವಣ್ಣ ಹೇಳಿದ ಮಾತು ಕೇಳಿ ಕಣ್ಣೀರು ಹಾಕಿದ ವಿನೋದ್ ರಾಜ್, ಶಿವಣ್ಣ ನಿಜಕ್ಕೂ ಗ್ರೇಟ್.

ಲೀಲಾವತಿ ನನ್ನ ತಾಯಿ ಇದ್ದ ಹಾಗೆ ಎಂದು ಹೇಳಿದ ಶಿವಣ್ಣ.

Actor Shivaraj Kumar About Actress Leelavathi: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರು (leelavathi) ಬಹಳ ದಿನಗಳಿಂದ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದಾರೆ. ಈ ನಟಿ ಕನ್ನಡ ಮಾತ್ರ ವಲ್ಲದೇ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದಾರೆ.

ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ದ ಸಾಲಿನಲ್ಲಿ ಲೀಲಾವತಿಗೆ ನೀಡಲಾಗಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಆದರೆ ಈಗ ಹಾಸಿಗೆ ಹಿಡಿದ ನಟಿಯನ್ನು ನೋಡಲು ಹಲವು ನಟ ನಟಿಯರು ಬರುತ್ತಿದ್ದಾರೆ.

Actor Shivaraj Kumar Latest News
Image Credit: News 18

ರಾಜ್ ಕುಟುಂಬದ ಬಗ್ಗೆ ಗೌರವ ಹೊಂದಿದ ನಟಿ

ಕನ್ನಡ ಚಿತ್ರರಂಗದ ನಟಿ ಲೀಲಾವತಿ ಹಾಗು ಡಾ. ರಾಜ್ ಕುಮಾರ್ ಕುರಿತು ಹಲವು ಉಹಾಪೋಹಗಳಿದ್ದು ಇಂದಿಗೂ ಕೂಡ ರಾಜ್ ಕುಟುಂಬದವರಾಗಲಿ, ಲೀಲಾವತಿ ಕುಟುಂಬದವರಾಗಲಿ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತಾನಾಡಿಲ್ಲ. ಅಷ್ಟೇ ಅಲ್ಲದೆ ಯಾವತ್ತಿಗೂ ಲೀಲಾವತಿ ಹೇಳುವುದಿಷ್ಟೇ ದೊಡ್ಮನೆಯ ದೊಡ್ಡ ಜನ ಎಂದೆ ಕರೆಯುತ್ತಿದ್ರು. ಹಲವು ವರ್ಷಗಳ ಹಿಂದೆ ನಟಿ ಲೀಲಾವತಿ ಅವರು ಪಾರ್ವತಮ್ಮ ಮೇಲೆ ನನಗೆ ಯಾವುದೇ ದ್ವೇಷವಿಲ್ಲ ಎಂದು ಹೇಳಿದ್ರು. ಲೀಲಾವತಿ ಅವರ ಅನಾರೋಗ್ಯದ ಕುರಿತಾಗಿ ಅವರ ಮನೆಗೆ ರಾಜಕುಮಾರ್ ಹಿರಿಯ ಪುತ್ರ ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ.

ಲೀಲಾವತಿ ಅಮ್ಮ ನನಗೂ ತಾಯಿ ಇದ್ದಂತೆ

ಲೀಲಾವತಿ ಅವರನ್ನು ನೋಡಲು ಶಿವರಾಜ್ ಕುಮಾರ್ ತನ್ನ ಪತ್ನಿ ಗೀತಾ ಜೊತೆ ವಿನೋದ್ ರಾಜ್ ಮನೆಗೆ ಬಂದಿದ್ದರು. ಲೀಲಾವತಿಯವರನ್ನು ಮಾತನಾಡಿಸಿ ನಾನು ಶಿವು ಬಂದಿದೀನಿ ಅಂದರು. ಶಿವಣ್ಣ, ಲೀಲಾವತಿ ಹಾಗೂ ವಿನೋದ್​ ಬಗ್ಗೆ ಪ್ರೀತಿಯ ಮಾತುಗಳಾಗಿದ್ದಾರೆ. ನನ್ನ ವಿನೋದ್ ಎಂದು ಕೈಹಿಡಿದು ಸಮಾಧಾನ ಮಾಡಿ ಧೈರ್ಯ ತುಂಬಿದ್ದಾರೆ.

ಶಿವಣ್ಣ ಲೀಲಾವತಿ ಕೂಡ ನನಗೆ ಅಮ್ಮನಂತೆ ಎಂದಿದ್ದಾರೆ. ವಿನೋದ್ ನೋಡಿದ್ರ ನನ್ನ ತಾಯಿ ನೋಡಿದ ಹಾಗೇ ಆಗುತ್ತೆ ಎಂದು ಶಿವಣ್ಣ ಹೇಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ವಿನೋದ್​ ರಾಜ್​ ಭಾವುಕರಾದ್ರು. ಲೀಲಾವತಿ ಅವ್ರದ್ದು ಒಳ್ಳೆಯ ವ್ಯಕ್ತಿತ್ವ ಅದಕ್ಕೆ ಇಷ್ಟು ಸ್ಟ್ರಾಂಗ್ ಇದ್ದಾರೆ ಎಂದು ಹೇಳಿದ್ರು. ನನ್ನ ವಾಯ್ಸ್ ಕೂಡ ಕಂಡು ಹಿಡಿದಿದ್ದಾರೆ ಎಂದು ಶಿವಣ್ಣ ಹೇಳಿದ್ರು.

ಜನರ ಪ್ರೀತಿ ನನ್ನ ವಿನೋದ್ ಕುಟುಂಬದ ಮೇಲಿದೆ. ಯಾರೇ ಬಂದ್ರು ತಾಯಿ ಮೇಲೆ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ. ನನ್ನ ತಂದೆ-ತಾಯಿ ಬೇರೆ ಅಲ್ಲಾ ವಿನೋದ್ ತಾಯಿ ಬೇರೆ ಅಲ್ಲ. ನನ್ನ ಮಗಳ ಮದುವೆ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ. ನಾವು ಯಾವಾಗಲು ಸಿಗೋದಿಲ್ಲ ಸಿಗಲ್ಲ. ಸಿಕ್ಕಾಗ ಆ ಕ್ಷಣ ನಮ್ಮದು ಎಂದು ಶಿವರಾಜ್​ ಕುಮಾರ್ ಹೇಳಿದ್ರು.

Actor shivanna And Vinod Raj
Image Credit: News 18

ಲೀಲಾವತಿ ಅವರನ್ನು ನೋಡಲು ಬಂದ ನಟ ನಟಿಯರು

ಹಿರಿಯ ಜೀವ ಲೀಲಾವತಿ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಳಿಕ ಅನೇಕ ಸ್ಯಾಂಡಲ್​ವುಡ್ ನಟ ನಟಿಯರು ಕೂಡ ನೆಲಮಂಗಲದ ಬಳಿ ಇರುವ ಮನೆಗೆ ಭೇಟಿ ನೀಡಿದ್ರು. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್​, ನಟ ದರ್ಶನ್ ಕೂಡ ಭೇಟಿ ನೀಡಿ ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ರು. ಕೆಲ ದಿನಗಳ ಹಿಂದೆ ಅರ್ಜುನ್ ಸರ್ಜಾ ಹಾಗೂ ಬಿ ಸರೋಜಾ ದೇವಿ, ಉಮಾಶ್ರೀ, ಶ್ರೀನಾಥ್​ ಸೇರಿದಂತೆ ಅನೇಕರು ಕೂಡ ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ರು. ಹಾಸಿಗೆ ಹಿಡಿದ ಈ ನಟಿಯನ್ನು ನೋಡಿ ಎಲ್ಲರೂ ಕಣ್ಣೀರಾಕಿದರು.

Leave A Reply

Your email address will not be published.