Jyothika: ನಟ ಸೂರ್ಯ ಅವರ ಈ ಒಂದು ಗುಣಕ್ಕೆ ಪ್ರೀತಿಯಲ್ಲಿ ಬಿದ್ದ ನಟಿ ಜ್ಯೋತಿಕಾ, ಪ್ರೀತಿ ಹುಟ್ಟಿದ್ದು ಹೇಗೆ ಎಂದು ತಿಳಿಸಿದ ಜ್ಯೋತಿಕಾ.
ನಟಿ ಜ್ಯೋತಿಕಾ ಸೂರ್ಯ ಅವರ ಈ ಗುಣಕ್ಕೆ ಫಿದಾ ಆಗಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ.
Actor Surya And Actress Jyothika: ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ ಜ್ಯೋತಿಕಾ (Jyothika) ಹಾಗು ನಟ ಸೂರ್ಯ (Suriya) ಅವರು ಒಬ್ಬರನೊಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ. ಇವರಿಬ್ಬರೂ 7 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ, ಒಟ್ಟಿಗೆ ನಟಿಸಿದ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಎಲ್ಲಾರ ನೆಚ್ಚಿನ ಜೋಡಿ ಆಗಿದ್ದರು.
ಅದೇ ಸಮಯದಲ್ಲಿ ಸೂರ್ಯ ಅವರು ಮದುವೆಯ ಪ್ರಪೋಸ್ ಮಾಡಿದ್ದು. ಮನೆಯವರ ಒಪ್ಪಿಗೆಯೊಂದಿಗೆ 2006 ಸೆಪ್ಟೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪತಿ ಮತ್ತು ಇಬ್ಬರು ಮಕ್ಕಳ ತಂದೆಯಾಗಿ ಸೂರ್ಯ ತುಂಬಾ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ ಎಂದು ಜ್ಯೋತಿಕಾ ಹೇಳಿಕೊಂಡಿದ್ದಾರೆ.

ಪ್ರೀತಿಸಿ ಮದುವೆ ಆದ ನಟ ಸೂರ್ಯ ಹಾಗು ನಟಿ ಜ್ಯೋತಿಕಾ
ನಟ ಸೂರ್ಯ ಹಾಗು ನಟಿ ಜ್ಯೋತಿಕಾ ದಂಪತಿಗಳು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ, ನಂತರ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿ ಮಾಡಿ ಜೀವನ ಸೆಟ್ಲ್ ಆದ ಮೇಲೆ ವಿವಾಹ ಆಗಿದ್ದಾರೆ. ನಟಿ ಜ್ಯೋತಿಕಾ 45ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು.ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ನಟಿ ಜ್ಯೋತಿಕಾ, ಸೂರ್ಯ ಜೊತೆಗಿನ ಲವ್ ಸ್ಟೋರಿ ಹಾಗೂ ಮದುವೆ ಬಗ್ಗೆ ಮಾತನಾಡಿದರು. ಈಗಾಗಲೇ ಅನೇಕ ಸಂದರ್ಶನಗಳಲ್ಲಿ ಜ್ಯೋತಿಕಾ ಅವರು ಸೂರ್ಯನನ್ನು ತನ್ನ ಪತಿಯಾಗಿ ಯಾಕೆ ಒಪ್ಪಿಕೊಂಡ್ರು ಏಕೆ ಮದುವೆಯಾದ್ರು ಎಂಬುದರ ಬಗ್ಗೆ ಮಾತಾಡಿದ್ದಾರೆ.

ಸೂರ್ಯ ಅವರಲ್ಲಿ ಎಲ್ಲರಿಗೂ ಗೌರವ ನೀಡುವ ಗುಣವಿದೆ
ಸೂರ್ಯ ಮತ್ತು ಜ್ಯೋತಿಕಾ ಮೊದಲ ಬಾರಿಗೆ ‘ಪೂ ವಲ್ಲಂ ಖುಷಿಪರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಭೇಟಿಯಾದ ಮೊದಲಿನಿಂದಲೂ ಸೂರ್ಯ ಬಹಳ ಗೌರವದಿಂದ ಮಾತಾಡುತ್ತಿದ್ದರು. ಅದೇ ಸೂರ್ಯ ನನಗೆ ಇಷ್ಟವಾಗಲು ಮೊದಲ ಕಾರಣ ಎಂದು ನಟಿ ಜ್ಯೋತಿಕಾ ಹೇಳಿದ್ದಾರೆ. ಸೂರ್ಯ ಅವರ ಮೇಲಿನ ಗೌರವವೇ ಅವರು ನನ್ನ ಪತಿಯಾಗಬೇಕು ಎಂಬ ಭಾವನೆ ಮೂಡಲು ಕಾರಣ ಎಂದು ಹೇಳಿದ್ದಾರೆ.
ಸಿನಿಮಾಗಳಲ್ಲಿ ಲವ್ ಸೀನ್ ಮಾಡುವಾಗಲು ಸೂರ್ಯ ನಿರ್ದೇಶಕರು ಹೇಳಿದ್ದನ್ನು ಮಾತ್ರ ಮಾಡುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಅನಗತ್ಯ ಟಚ್ ಮಾಡೋದಿಲ್ಲ. ಸೂರ್ಯ ತನ್ನನ್ನು ಮಾತ್ರವಲ್ಲದೆ ಇತರ ಮಹಿಳೆಯರನ್ನೂ ಸಹ ತುಂಬಾ ಗೌರವದಿಂದ ನಡೆಸಿಕೊಳ್ಳುತ್ತಾರೆ. ಹೆಣ್ಣಿನ ಬಗ್ಗೆ ಅವರಿಗಿರುವ ಗೌರವ ನನಗೆ ತುಂಬಾ ಇಷ್ಟವಾಯ್ತು ಎಂದು ಜ್ಯೋತಿಕಾ ಹೇಳಿದ್ದಾರೆ.