Thalapathy Vijay: ಅಹಂ ಇಲ್ಲದೆ ಸರಳ ಜೀವನ ನಡೆಸುವ ನಟ ವಿಜಯ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ…?

ತಮಿಳು ನಟ ವಿಜಯ್ ಅವರ ಒಟ್ಟು ಆಸ್ತಿ ಕೇಳಿದರೆ ಆಶ್ಚರ್ಯ ಆಗುವುದಂತೂ ಸಹಜ, ಕೋಟಿಯ ಒಡೆಯ ನಟ ವಿಜಯ್.

Actor Thalapathy Vijay Remuneration: ತಮಿಳು ಚಿತ್ರರಂಗದ ನಟ ವಿಜಯ್ (Vijay Thalapathy) ಅವರು ಯಾರಿಗೆ ಗೊತ್ತಿಲ್ಲ ಹೇಳಿ. ವಿಜಯ್ ಅವರ ಸಿನಿಮಾ ಒಂದಕ್ಕಿಂತ ಒಂದು ಅತ್ಯದ್ಭುತವಾಗಿದೆ. ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎ.ಚಂದ್ರಶೇಖರ್ ಅವರ ಮಗನಾಗಿದ್ದು, ತಂದೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರೂ ಸಹ ವಿಜಯ್ ಸಿನಿಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಇವರು 1984ರಲ್ಲಿ ತಂದೆಯ ‘ವೀಟಿ’ ಚಿತ್ರದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ವಿಜಯ್‌ ನಾಯಕ ನಟನಾಗಿ ನಟಿಸಿದ ಅನೇಕ ಆರಂಭಿಕ ಚಲನಚಿತ್ರಗಳು ಸೋಲು ಕಂಡರೂ ಸಹ ಅವರ ನಟನೆ ಏನು ಎಂಬುವುದು 90 ರ ದಶಕದ ಸಿನಿ ಪ್ರೇಕ್ಷಕರಿಗೆ ತಿಳಿದಿದೆ.

Actor Thalapathy Vijay Latest News
Image Credit: Pinkvilla

ನಟ ವಿಜಯ್ ಅವರ ವಯಕ್ತಿಕ ಜೀವನ

ತನ್ನ ಸಿನಿಮಾ ಜರ್ನಿಯನ್ನು ತಂದೆಯ ಸಿನಿಮಾದ ಮೂಲಕ ಪ್ರಾರಂಭಿಸಿದ ವಿಜಯ್ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು ತದನಂತರ ಸಂಗೀತಾ ಎಂಬುವವರನ್ನು 1999 ರಲ್ಲಿ ವಿವಾಹವಾದರು. ಅವರಿಗೆ ಜೇಸನ್ ಸಂಜಯ್ ಎಂಬ ಮಗ ಮತ್ತು ದಿವ್ಯಾ ಸಾಶಾ ಎಂಬ ಮಗಳು ಇದ್ದಾರೆ. 23 ವರ್ಷದ ಜೇಸನ್ ಸಂಜಯ್ ಯುಎಸ್ ನಲ್ಲಿ ಚಲನಚಿತ್ರ ನಿರ್ದೇಶನವನ್ನು ಅಧ್ಯಯನ ಮಾಡಿದ್ದಾರೆ. ಅವರು ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ದಿವ್ಯಾ ಸಾಶಾ ಕೂಡ ಅಮೆರಿಕದಲ್ಲಿ ಓದುತ್ತಿದ್ದಾಳೆ ಎನ್ನಲಾಗಿದೆ.

ನಟ ವಿಜಯ್ ಅವರ ಆರಂಭಿಕ ಸಂಭಾವನೆ

ಆರಂಭದಲ್ಲಿ ಹಲವು ಸಿನಿಮಾಗಳಲ್ಲಿ ಸೋಲನ್ನು ಕಂಡ ವಿಜಯ್ ನಂತರದ ಅವಧಿಯಲ್ಲಿ ತನ್ನ ಅಭಿನಯದ ಮೂಲಕ ಜನರ ಮೆಚ್ಚುಗೆಯನ್ನು ಪಡೆದರು. ಬಾ ಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ವಿಜಯ್ ತಮ್ಮ ಮೊದಲ ಚಿತ್ರಕ್ಕೆ ರೂ. 500 ಸಂಭಾವನೆ ಪಡೆದಿದ್ದರು.

ಆ ಸಿನಿಮಾದಲ್ಲಿ ಅವರು ಮಗುವಿನ ಪಾತ್ರವನ್ನು ನಿರ್ವಹಿಸಿದ್ದರು. ಆಗಿನ ಕಾಲದಲ್ಲಿ ಬಾಲನಟನಾಗಿ 500 ರೂಪಾಯಿ ಸಂಪಾದನೆ ಬಹಳ ದೊಡ್ಡ ಸಂಪಾದನೆಯೇ ಆಗಿತ್ತು. ಕೆಲವು ವರ್ಷಗಳ ಹಿಂದೆ ಚಿತ್ರವೊಂದಕ್ಕೆ 100 ಕೋಟಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ವಿಜಯ್‌ ಕಳೆದ 5 ವರ್ಷಗಳಲ್ಲಿ ಅವರ ಸಂಭಾವನೆ ಹೆಚ್ಚಾಗಿದೆ.

Actor Thalapathy Vijay Remuneration
Image Credit: India

ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ವಿಜಯ

ವಿಜಯ್ ಬಹಳ ಸಿಂಪಲ್ ಹಾಗು ಸರಳ ಸ್ವಭಾವದವರಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ನಟರಾಗಿದ್ದು ಸದ್ಯ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ ಲಿಯೋ ಬಿಡುಗಡೆಗೆ ರೆಡಿಯಾಗಿದೆ ಇದೇ ತಿಂಗಳು 19 ರಂದು ‘ಲಿಯೋ’ ರಿಲೀಸ್‌ ಆಗಲಿದೆ.

ಈ ಚಿತ್ರದಲ್ಲಿ ನಟಿಸಲು ವಿಜಯ್ 120 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾ ನಂತರ ದಳಪತಿ 68ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಪ್ರಸ್ತುತ ನಟ ವಿಜಯ್ ಅವರ ಆಸ್ತಿ ಮೌಲ್ಯ 56 ಮಿಲಿಯನ್, ಅಂದರೆ 445 ಕೋಟಿ ರೂ. ಆಗಿರುತ್ತದೆ. ಕೋಟಿಯ ಒಡೆಯ ವಿಜಯ್ ಅವರ ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿ ಅಭಿಮಾನಿಗಳು ಇರುವುದಂತೂ ಸತ್ಯ.

Leave A Reply

Your email address will not be published.