Actor Vinayakan: ಜೈಲರ್ ಚಿತ್ರದ ಖ್ಯಾತ ನಟ ಅರೆಸ್ಟ್, ಅಷ್ಟಕ್ಕೂ ನಟ ಮಾಡಿದ್ದೇನು ಗೊತ್ತಾ…?
ನಟ ವಿನಾಯಕನ್ ವಿರುದ್ಧ ದೂರು ದಾಖಲು, ಪೊಲೀಸ್ ಠಾಣೆಯಲ್ಲೂ ಗಲಾಟೆ ಮಾಡಿದ ನಟ, ನಡೆದಿದ್ದಾದರೂ ಏನು...?
Actor Vinayakan Arrested: ನಟ ರಜನಿಕಾಂತ್ (Rajinikanth) ಅಭಿನಯದ ಜೈಲರ್ ಸಿನಿಮಾ ಹೆಚ್ಚಿನವರು ನೋಡಿರುತ್ತಾರೆ. ಬಾರಿ ಹಿಟ್ ಕಂಡ ಜೈಲರ್ ಸಿನಿಮಾ ಬಹಳ ಸುದ್ದಿ ಮಾಡಿತು. ಜೈಲರ್ ಸಿನಿಮಾದಲ್ಲಿ ಹಲವು ದಿಗ್ಗಜ ನಟರು ಕಾಣಿಸಿಕೊಂಡಿದ್ದಾರೆ.
ವಿಲನ್ ಪಾತ್ರದಲ್ಲಿ ವಿನಾಯಕನ್ ಅಭಿನಯಿಸಿದ್ದು, ತನ್ನ ಅಭಿನಯದ ಮೂಲಕ ಸಿನಿಮಾ ಪ್ರೇಕ್ಷಕರನ್ನು ಸೆಳೆದಿದ್ದಾರೆ. ವಿನಾಯಕನ್ ಟಿ.ಕೆ ಮಾಲಿವುಡ್ನಲ್ಲಿ ನಟ, ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕಂಪೋಸರ್ ಕೂಡ ಹೌದು. ವಿನಾಯಕನ್ ಅವರು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಾರೆ.
ತನ್ನ ಅಭಿನಯದ ಮೂಲಕ ಮನೆ ಮಾತಾದ ವಿನಾಯಕನ್
ಜೈಲರ್ ಸಿನಿಮಾದಲ್ಲಿ ಒಂಥರ ವಿಚಿತ್ರ ಪಾತ್ರ ನಿರ್ವಹಿಸಿದ ವಿನಾಯಕನ್ ಎಲ್ಲಾರ ನೆಚ್ಚಿಗೆಗೆ ಪಾತ್ರರಾದರು. ಜೈಲರ್ ಸಿನಿಮಾದ ವಿಲನ್ ವರ್ಮಾನನ್ನು ಮರೆಯೋಕಾಗಲ್ಲ.ಈ ಪಾತ್ರವನ್ನು ನಟ ವಿನಾಯಕನ್ ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ವಿನಾಯಕನ್ ನಟನೆಗೆ ಒಳ್ಳೆ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಈ ಸಿನಿಮಾ ಮಾತ್ರವಲ್ಲದೆ ಹಲವು ಸಿನಿಮಾದಲ್ಲಿ ತನ್ನ ಪಾತ್ರವನ್ನು ತುಂಬ ಚೆನ್ನಾಗಿ ನಿಭಾಯಿಸಿದ ನಟ ಇವರಾಗಿದ್ದಾರೆ.
ನಟ ವಿನಾಯಕನ್ ಬಂಧನ
ಜೈಲರ್ ನಟ ವಿನಾಯಕನ್ ಅವರನ್ನು ಅಕ್ಟೋಬರ್ 24ರಂದು ಪೊಲೀಸರು ಬಂಧಿಸಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳಿಂದ ವಿನಾಯಕನ್ ವಿರುದ್ಧ ದೂರು ದಾಖಲಾಗಿದೆ.ಬಂಧನ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನಟ ವಿನಾಯಕನ್ತನ್ನ ಅಪಾರ್ಟ್ಮೆಂಟ್ ನಲ್ಲಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಿಸಲಾಗಿತ್ತು. ದೂರಿನ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ನಟನನ್ನು ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಗೆ ಕರೆದಿದ್ದರು.
ಪೊಲೀಸ್ ಠಾಣೆಯಲ್ಲೂ ಗಲಾಟೆ ಮಾಡಿದ ನಟ
ವಿಚಾರಣೆ ಮಾಡುವ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಕೂಡ ವಿನಾಯಕನ್ ಅವರು ಗಲಾಟೆ ಮಾಡಿದ್ದಾರೆ ಎಂದು ಕೇರಳದ ಪೊಲೀಸ್ ಹಿರಿಯ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಎದುರಿಸಲು ಪೊಲೀಸ್ ಠಾಣೆಗೆ ಬಂದ ವಿನಾಯಗನ್, ಠಾಣೆಯಲ್ಲೂ ತನ್ನ ವರಸೆ ತೆಗೆದಿದ್ದಾರೆ.
ಪೊಲೀಸರ ಮುಂದೆಯೇ ಕೂಗಾಡಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಪೋಲೀಸರ ಮಾತು ಕೇಳದೆ ಕೂಗಾಡಿದ್ದಾರೆ. ನಟ ವಿನಾಯಗನ್ ಬಂಧನದ ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಅಧಿಕಾರಿ ತಿಳಿಸಿದರು.