Yash Remuneration: ರಾವಣ ಪಾತ್ರ ಮಾಡಲು ನಟ ಯಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ…? ದುಬಾರಿ ಸಂಭಾವನೆ.

ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಾರಿ ನಟ ಯಶ್, ಈ ಪಾತ್ರಕ್ಕೆ ನಟ ಯಶ್ ಪಡೆಯುವ ಸಂಭಾವನೆ ಎಷ್ಟು...?

Actor Yash Remuneration for Ravana Character: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ (Yash) ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ದೇಶ ವಿದೇಶದಲ್ಲಿ ತನ್ನ ಛಾಪನ್ನು ಮೂಡಿಸಿದ ಈ ನಟನ ಜೀವನದಲ್ಲಿ KGF ಸಿನಿಮಾ ಒಂದು ಮೈಲುಗಲ್ಲಾಗಿದೆ ಎನ್ನಬಹುದು.

ಇವರ ಅನೇಕ ಸಿನಿಮಾಗಳು ಹಿಟ್ ತಂದು ಕೊಟ್ಟರು KGF ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಯಶ್ ಅವರ ಜೀವನ ಶೈಲಿಯನ್ನೇ ಬದಲಾಯಿಸಿತು. ಯಶ್ ಈಗ ಬಾಲಿವುಡ್‌ನ ​ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ .ಅಷ್ಟೇ ಅಲ್ಲದೇ ರಾಕಿಂಗ್ ಸ್ಟಾರ್ ಯಶ್​, ಮುಂಬೈನಲ್ಲಿ ಲುಕ್​ ಟೆಸ್ಟ್​ ಕೊಟ್ಟು ಬಂದಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.  

Actor Yash Latest Update
Image Credit: Ottplay

ರಾವಣನ ಪಾತ್ರದಲ್ಲಿ ರಾಕಿಭಾಯ್

ದಂಗಲ್ ಚಿತ್ರದ ಮೂಲಕ ನಿತೀಶ್ ತಿವಾರಿ ತಾವು ಕಥೆ ಹೇಳುವ ರೀತಿ ಸಂಪೂರ್ಣ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪೌರಾಣಿಕ ‘ರಾಮಾಯಣ’ ಸಿನಿಮಾ ಕೆಲಸದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರು ಬ್ಯುಸಿಯಾಗಿದ್ದು, ಯಶ್ ಈ ಚಿತ್ರದಲ್ಲಿ ‘ರಾವಣ’ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಿದೆ . ಆದರೆ ಈ ಬಗ್ಗೆ ಪ್ರೊಡಕ್ಷನ್ ಹೌಸ್ ಆಗಲಿ ಅಥವಾ ನಟನಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಯಶ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಮುಂದಿನ ವರ್ಷ ಜುಲೈನಲ್ಲಿ ಈ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರಂತೆ.

ಹಲವು ಹಿಟ್ ನಟ ನಟಿಯರನ್ನು ಹೊಂದಿರುವ ಸಿನಿಮಾ ಇದಾಗಲಿದೆ

ರಾಮಾಯಣ’ ಸಿನಿಮಾವನ್ನು ಮಧು ಮಂಟೆನಾ ನಿರ್ಮಿಸಲಿದ್ದಾರೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಬಹಳ ದಿನಗಳಿಂದ ನಡೆಯುತ್ತಿದ್ದು, ಒಂದೊಂದೆ ಅಪ್ಡೇಟ್​ಗಳು ಹೊರಬೀಳ್ತಿವೆ. ಪಾತ್ರಗಳ ಆಯ್ಕೆ ಕೂಡ ಫೈನಲ್ ಆಗಿದೆ ಎನ್ನಲಾಗಿದೆ . ಈ ಚಿತ್ರದಲ್ಲಿ ಶ್ರೀರಾಮನ ಪಾತ್ರಕ್ಕೆ ರಣಬೀರ್ ಫಿಕ್ಸ್ ಆಗಿದ್ದು, ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹೆಸರು ಕೇಳಿ ಬಂದಿತ್ತು.

ಸೀತಾದೇವಿ ಪಾತ್ರದಲ್ಲಿ ಸೌತ್ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಅಧಿಕೃತ ಘೋಷಣೆಯಾಗದಿದ್ದರೂ, ಈಗಾಗಲೇ ಸಾಯಿ ಪಲ್ಲವಿಯನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ. ಹಾಗು ರಾವಣನ ಪಾತ್ರಕ್ಕೆ ಯಶ್ ಆಯ್ಕೆ ಆಗಿದ್ದರೆ ಎನ್ನಲಾಗಿದೆ.

Actor Yash Remuneration for Ravana Character
Image Credit: Ottplay

ರಾವಣನ ಪಾತ್ರಕ್ಕೆ ಯಶ್ ಪಡೆಯುವ ಸಂಭಾವನೆ

ಈಗಾಗಲೇ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುವ ಬಗ್ಗೆ ಯಶ್‌ ಅವರ ಜೊತೆ ಚಿತ್ರತಂಡ ಚರ್ಚೆ ಮಾಡಿದೆಯಂತೆ. ಜೊತೆಗೆ ಯಶ್​ ರಾವಣನ ಪಾತ್ರ ಮಾಡಲು ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಟ ಯಶ್​ ನಿತೇಶ್ ತಿವಾರಿ ಅವರ ರಾಮಯಣ ಸಿನಿಮಾದಲ್ಲಿ ನಟಿಸಲು 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.

ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಇದಾಗಿದ್ದು ಯಶ್ ಪಡೆಯುವ ಸಂಭಾವನೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ​ಹಾಗು 2024ರ ಫೆಬ್ರವರಿಯಿಂದ ಚಿತ್ರದ ಶೂಟಿಂಗ್ ಪ್ರಾರಂಭಿಸಲಾಗುವುದು ಎಂದು ನ್ಯಾಷನಲ್ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

Leave A Reply

Your email address will not be published.