Anupama Gowda: ಲಂಗ ದಾವಣಿಯಲ್ಲಿ ಮುದ್ದಾಗಿ ಕಾಣಿಸಿಕೊಂಡ ಅನುಪಮಾ ಗೌಡ, ಫೋಟೋಗಳು ಸಿಕ್ಕಾಪಟ್ಟೆ ವೈರಲ್.
ಲಂಗ ದಾವಣಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಅನುಪಮಾ ಗೌಡರ ಲುಕ್ ಗೆ ಅಭಿಮಾನಿಗಳು ಫಿದಾ.
Actress Anupama Gowda: ನಟಿ, ನಿರೂಪಕಿ ಅನುಪಮಾ ಗೌಡ (Anupama Gowda) ಕಿರುತರೆಯಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ಅನುಪಮಾ ಗೌಡ ಕಿರುತೆರೆಯಲ್ಲಿ ಬಹಳ ಅದ್ಭುತವಾಗಿ ನಟನೆ ಮಾಡಿ ನಿರೂಪಣೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕನ್ನಡದಲ್ಲಿ ನಿರರ್ಘಳವಾಗಿ ಮಾತಾನಡುವ ನಟಿ ನಿರೂಪಣೆಯಲ್ಲಿ ಕೂಡ ಸೈ ಎನಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತ ಇದ್ದು ನೋಡುಗರಿಗೆ ಬಹಳ ಖುಷಿ ಆಗುತ್ತಿದೆ. ಹೌದು ಅನುಪಮಾ ಗೌಡ ಮಾತಿನ ಮೋಡಿಗೆ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ.
ಧಾರಾವಾಹಿ ಮೂಲಕ ತೆರೆ ಮೇಲೆ ಕಾಣಿಸಿಕೊಂಡ ನಟಿ
ಇನ್ನೂ ಅನುಪಮಾ ನಿಜ ಜೀವನದಲ್ಲಿ ಬಹಳಷ್ಟು ಏಳು ಬೀಳುಗಳನ್ನು ಕಂಡ ನಟಿ. ಆಕೆ ಬಹಳ ಕಷ್ಟ ಪಟ್ಟು ತನ್ನ ಜೀವನವನ್ನು ತಾನೇ ಕಟ್ಟಿಕೊಂಡ ನಟಿ ಎಂದು ಹೇಳಿದರೆ ತಪ್ಪಾಗದು. ಇನ್ನೂ ಅಕ್ಕ ಧಾರಾವಾಹಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅನುಪಮಾ.
ಇತ್ತೀಚಿಗಷ್ಟೇ ಕೆಂಪು ಉಡುಗೆಯಲ್ಲಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದರು. ಇದೀಗ ಅನುಪಮಾ ಲಂಗ ದಾವಣಿ ತೊಟ್ಟು ನೋಡುಗರ ಮನ ಸೆಳೆದಿದ್ದಾರೆ. ಲಂಗ ದಾವಣಿ ಹಾಕಿ ಮಿರ ಮಿರ ಮಿಂಚುತ್ತಿರುವಾ ಅನುಪಮಾ ಅಂದ ನೋಡುವುದೆ ಕಣ್ಣಿಗೆ ಒಂದು ರೀತಿಯ ಹಬ್ಬ.
ಅನುಪಮಾ ಗೌಡ ರ ಲುಕ್ ಗೆ ಅಭಿಮಾನಿಗಳು ಫಿದಾ
ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ ಅನುಪಮಾ ಗೌಡ ಲಂಗ ದಾವಣಿ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೇ ದರ್ಶನ ಅಭಿನಯದ ಗಜ ಚಿತ್ರದ, ಏನು ಹೇಳಿ ಅಂದನಾ…. ಸಾಲುತಿಲ್ಲ ವ್ಯಾಕರಣ… ಕಣ್ಣಿನ ಬಾಣನಾ.. ಬೀಸುತ್ತಾಳೆ ನೋಡಣ್ಣ ಎಂಬ ಅದ್ಭುತ ಹಾಡಿನ ಸಾಲುಗಳನ್ನು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಅನುಪಮಾರನ್ನು ಲಂಗ ದಾವಣಿಯಲ್ಲಿ ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿ ಪಟ್ಟಿದ್ದಾರೆ. ಅನುಪಮಾ ಫೋಟೋಗೆ ಕಾಮೆಂಟ್ ಹಾಗೂ ಲೈಕ್ ಗಳು ಹರಿದು ಬರುತ್ತಿವೆ. ಹಲವಾರು ಅಭಿಮಾನಿಗಳು ಗುಳಿಕೆನ್ನೆಯ ಚೆಲುವೆ.. ಸುಂದರಿಯ ಹಾಗೆ ಕಾಣಿಸುತ್ತಾ ಇದ್ದಿರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಇದ್ದಾರೆ. ಅನುಪಮಾ ಗೌಡ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.