Anushka Shetty: ಮದುವೆಯ ಬಗ್ಗೆ ಮೌನಮುರಿದ ನಟಿ ಅನುಷ್ಕಾ ಶೆಟ್ಟಿ, ಅಷ್ಟಕ್ಕೂ ನಟಿ ಹೇಳಿದ್ದೇನು..?

ಮದುವೆ ಬಗ್ಗೆ ಮನ ಮುಕ್ತವಾಗಿ ಮಾತನಾಡಿದ ನಟಿ ಅನುಷ್ಕಾ ಶೆಟ್ಟಿ.

Actress Anushka Shetty About Marriage: ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿಯವರು (Anushka Shetty) ಅನೇಕ ತಮಿಳು ಮತ್ತು ತೆಲಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ಮಂಗಳೂರಿನವರಾದ ಇವರು ಪರ ಭಾಷಾ ನಟಿಯಾಗಿ ಪರಿಚಿತರಾಗಿದ್ದಾರೆ. ಅನೇಕ ಸಿನಿಮಾದಲ್ಲಿ ನಟಿಸಿದ ಇವರು ಹೆಚ್ಚಿನ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಟಾಪ್ ನಟಿಯರಲ್ಲಿ ಇವರು ಕೊಡ ಒಬ್ಬರಾಗಿದ್ದು, ಇವರ ಅಭಿನಯದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಇಂದೇ ಸೆ.7ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ವೇಳೆ, ಮದುವೆ, ಟ್ರೋಲ್ ಮತ್ತು ಪ್ರಭಾಸ್ ಜೊತೆಗಿನ ಸಿನಿಮಾ ಬಗ್ಗೆ ಅನುಷ್ಕಾ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ.

Actress Anushka Shetty About Marriage
Image Credit: Timesofindia

ಮದುವೆ ಬಗ್ಗೆ ಮೌನ ಮುರಿದ ಅನುಷ್ಕಾ 

‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ತಮ್ಮ ಮದುವೆಯ ವಿಚಾರದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ (Wedding) ಪ್ಲ್ಯಾನ್ ಏನಾದರೂ ಇದ್ಯಾ? ಎನ್ನುವ ನಿರೂಪಕಿಯ ಪ್ರಶ್ನೆಗೆ ಸ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ ಮತ್ತು ಅದರಲ್ಲಿ ನನಗೆ ನಂಬಿಕೆ ಇದೆ, ಆದರೆ ಅದು ಸ್ವಾಭಾವಿಕವಾಗಿ ಆಗಬೇಕು ಮತ್ತು ಬರಿ ಸಮಾಜದ ಒತ್ತಡಕ್ಕೆ ಆಗುವುದಲ್ಲ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾನು ಹೆಚ್ಚು ಆಕ್ಟಿವ್ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಮೋಷನ್‌ಗೆ ಸಾಮಾಜಿಕ ಜಾಲತಾಣದ ಬಳಕೆ ಮಾಡುತ್ತೇನೆ.

ಎಲ್ಲರಿಗೂ ಅವರದ್ದೇ ಆದ ಸಮಸ್ಯೆ ಇರುತ್ತದೆ. ಮೊದಲು ನಾವು ಮನುಷ್ಯರಾಗಬೇಕು ಎಂದಿದ್ದಾರೆ ಅನುಷ್ಕಾ ಶೆಟ್ಟಿ. ನಿರೂಪಕಿ ಕೇಳಿದ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಸ್ವೀಟ್ ಆಗಿ ಉತ್ತರ ಕೊಟ್ಟು ಮದುವೆ ವಿಚಾರದಿಂದ ಜಾರಿಕೊಂಡಿದ್ದಾರೆ.

Actress Anushka Shetty latest news update
Image Credit: Starsunfolded

ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾವನ್ನು ಮಹೇಶ್ ಬಾಬು ಪಿ ಡೈರೆಕ್ಟರ್ ಮಾಡಿದ್ದು , ನಾಯಕಿಯಾಗಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದಾರೆ, ನಾಯಕನಟನಾಗಿ ಕೇಶವ ದೀಪಕ್ ಹಾಗು ಇನ್ನಿತರ ಹಿಟ್ ನಾಯಕರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Leave A Reply

Your email address will not be published.