Gautami Jadhav: ಧಾರವಾಹಿ ಬೆನ್ನಲ್ಲೇ ಹೊಸ ಉದ್ಯಮ ಆರಂಭಿಸಿದ ಸತ್ಯ, ಈಗ ಸತ್ಯ ನಟಿ ಮಾತ್ರ ಅಲ್ಲ ಉದ್ಯಮಿ ಕೂಡ.
ನಟಿ ಆಗಿರುವ ಸತ್ಯ ಅಲಿಯಾಸ್ ಗೌತಮಿ ಜಾದವ್ ಇನ್ನು ಮುಂದೆ ಉದ್ಯಮಿ.
Actress Gouthami Jadav New Business: ಸತ್ಯ ಧಾರಾವಾಹಿಯ (Satya Serial) ಮೂಲಕ ಮನೆಮಾತಾಗಿರುವ ‘ಸತ್ಯ’ ಪಾತ್ರದಾರಿ ಗೌತಮಿ ಜಾದವ್ (Gaouthami Jadav) ಅವರು ಈಗ ನಟಿ ಜೊತೆಗೆ ಉದ್ಯಮಿ ಎಂದು ಕರೆಸಿಕೊಳ್ಳಲಿದ್ದಾರೆ.
ಕನ್ನಡದ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ ‘ಸತ್ಯ’ ಧಾರಾವಾಹಿಯ ಮೂಲಕ ಪರಿಚಿತರಾದ ಇವರು ಧಾರಾವಾಹಿಯಲ್ಲಿ ಟಾಮ್ ಬಾಯ್ ರೀತಿಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಧಾರಾವಾಹಿ ಪಡೆದಿರುವ ಪಾಪ್ಯುಲಾರಿಟಿಯೇ ಸಾಕ್ಷಿ. ಉತ್ತಮ ನಟನೆ,ಲುಕ್ ಹಾಗು ಸ್ಟೈಲ್ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸತ್ಯ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ
ನಟನೆಯಲ್ಲಿ ಇನ್ನೂ ಆಕ್ಟೀವ್ ಆಗಿರುವ ನಟಿ ಗೌತಮಿ ಜಾಧವ್ ಸದ್ಯಕ್ಕೆ ‘ಸತ್ಯ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಟಾಮ್ ಬಾಯ್ ಪಾತ್ರದ ಮೂಲಕ ಒಬ್ಬ ಸ್ಟ್ರಾಂಗ್ ಡೇರಿಂಗ್ ಬ್ರೇವ್ ಲೇಡಿ ಆಗಿ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ. ಈ ರೀತಿಯ ಪಾತ್ರಗಳು ಧಾರಾವಾಹಿಗಳಲ್ಲಿ ತೀರಾ ಕಮ್ಮಿ.
ಸ್ತ್ರೀ ಪ್ರಧಾನ ಕಥೆಗಳನ್ನೇ ಇಟ್ಟುಕೊಳ್ಳುವ ಧಾರವಾಹಿಗಳು ಸ್ತ್ರೀಯನ್ನು ಯಾವಾಗಲೂ ಬೇರೆ ಬೇರೆ ರೀತಿಯಲ್ಲಿ ತಾಳ್ಮೆ ಪ್ರೀತಿ ಸಹಿಷ್ಣುತೆ ಇತ್ಯಾದಿ ಅಂಶಗಳನ್ನು ಹೆಚ್ಚು ಮನದಲ್ಲಿಟ್ಟುಕೊಂಡು ಪ್ರದರ್ಶಿಸುತ್ತಾ ಹೋಗುತ್ತದೆಯೇ ಹೊರತು ಆಕೆಯ ಗಟ್ಟಿತನವನ್ನು ಎಷ್ಟೋ ಬಾರಿ ತೋರಿಸುವುದಿಲ್ಲ. ಅಂಥದರಲ್ಲಿ ಸತ್ಯ ಧಾರಾವಾಹಿ ಈ ಎಲ್ಲಾ ವಿಚಾರಗಳಿಂದ ವಿಭಿನ್ನವಾಗಿದ್ದು ಮಹಿಳಾ ಸಬಲೀಕರಣದತ್ತ ಮುಖ ಮಾಡಿದೆ. ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್‌ಗೆ ಬಹಳಷ್ಟು ಫೇಮನ್ನು ಕೊಟ್ಟಿದೆ ಎಂದರೆ ತಪ್ಪಾಗಲ್ಲ.
ನಟನೆ ಜೊತೆಗೆ ಹೊಸ ಬ್ಯುಸಿನೆಸ್ ಆರಂಭಿಸಿದ ನಟಿ ಗೌತಮಿ ಜಾಧವ್
ಇದೀಗ ಗೌತಮಿ ಜಾಧವ್ ಅಲಿಯಾಸ್ ಸತ್ಯ ಅವರು ನಟನೆ ಅಷ್ಟೇ ಅಲ್ಲದೇ ಹೊಸ ಬ್ಯುಸಿನೆಸ್ ಒಂದನ್ನು ಆರಂಭಿಸಿದ್ದಾರೆ. ಆರೋಗ್ಯಕರ ಜೀವನ ಶೈಲಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವ ನಟಿ ಗೌತಮಿ ಜಾಧವ್ ತಲೆಗೆ ಹಚ್ಚುವ ಎಣ್ಣೆಯನ್ನು ಹೊರತರುವ ಮೂಲಕ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.
ತನ್ನ ಹೊಸ ಉದ್ಯಮದ ಬಗ್ಗೆ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕವೂ ಪೋಸ್ಟ್ ಮಾಡಿಕೊಂಡಿರುವ ನಟಿ ಗೌತಮಿ ಜಾಧವ್ ತಮ್ಮ ಹೊಸ ತೈಲದ ಬಗ್ಗೆ ಮಾಹಿತಿಯನ್ನು ನೀಡಿದ್ದಲ್ಲದೇ ಅದರ ಉಪಯೋಗಗಳನ್ನು ಚೆನ್ನಾಗಿ ವಿವರಿಸಿದ್ದಾರೆ.
View this post on Instagram
ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ
ಆರೋಗ್ಯ, ಬಾಹ್ಯ ಸೌಂದರ್ಯ, ತಲೆ ಕೂದಲಿನ ಸದೃಢತೆ ಇತ್ಯಾದಿ ಅಂಶಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಕೂದಲು ಉದುರುವಿಕೆ ಇಂದು ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಈ ಕುರಿತು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.
ಹೀಗಿರುವಾಗ ಈ ರೀತಿ ಒಂದು ಹೊಸ ತೈಲವನ್ನು ಹೊರ ತರುವುದರ ಮೂಲಕ ನಟಿ ಗೌತಮಿ ಜಾಧವ್ ಗ್ರಾಹಕರಿಗೆ, ತಮ್ಮ ಅಭಿಮಾನಿಗಳಿಗೆ ಜೊತೆಜೊತೆಗೆ ಸರ್ವೇಸಾಮಾನ್ಯರಿಗೆ ತಮ್ಮ ಕೂದಲನ್ನು ಸದೃಢಗೊಳಿಸಿಕೊಳ್ಳಲು ಒಂದೊಳ್ಳೆಯ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಹೇಳಬಹುದು. ಸದ್ಯಕ್ಕೆ ಈ ತೈಲ ಲಾಂಚ್ ಆಗಿದ್ದು, ಇನ್ನು ಇದರ ಉಪಯೋಗಗಳು ಹಾಗೂ ನಿಜವಾದ ಪರಿಣಾಮವನ್ನು ಬಳಸಿ ಬಳಕೆದಾರರು ಹೇಳಬೇಕಿದೆ ಅಷ್ಟೇ.