Jaya Prada: ಬಹುಭಾಷಾ ನಟಿ ಜಯಪ್ರದಾಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್, ತಪ್ಪಿಗೆ ಶಿಕ್ಷೆ.

ನಟಿ ಜಯಪ್ರದಾ ಅವರಿಗೆ ಶಿಕ್ಷೆ ವಿಧಿಸಿದ ಹೈ ಕೋರ್ಟ್, ಜಾಮೀನು ಪಡೆಯಲು 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ಆದೇಶ.

Actress Jaya Prada Case: ಹಿರಿಯ ಕಲಾವಿದೆ, ಬಹುಭಾಷಾ ನಟಿ ಜಯಪ್ರದಾ (Jaya Prada) ಹೆಚ್ಚಿನವರ ನೆನೆಪಿನಲ್ಲಿ ಇರಬಹುದು. ಇವರು ಕನ್ನಡದಲ್ಲೂ ಹಲವಾರು ಸಿನಿಮಾಗಳಲ್ಲಿ ನಟಿಸಿದವರಾಗಿದ್ದಾರೆ. ಇವರು ಈಗ ಕೇವಲ ನಟಿ ಆಗಿರದೆ ಮಾಜಿ ಸಂಸದೆ ಕೂಡ ಹೌದು. ಆದರೆ ಈಗ ನಟಿ ಜಯಪ್ರದಾ ಒಂದು ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.

Jayaprada Theatre ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ವೇತನದಲ್ಲಿ ಕಡಿತಗಳಿಸಿದ ESI ಮೊತ್ತವನ್ನು ಕಾರ್ಮಿಕ ಸರ್ಕಾರಿ ವಿಮಾ ನಿಗಮಕ್ಕೆ ಪಾವತಿಸದ ಹಿನ್ನೆಲೆಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಹೈಕೋರ್ಟ್​ನಲ್ಲೂ ಜಯಪ್ರದಾಗೆ ಹಿನ್ನಡೆ ಉಂಟಾಗಿದ್ದು, ಜೈಲು ಶಿಕ್ಷೆಯ ಜೊತೆಗೆ ಕಾರ್ಮಿಕರ ಹೆಸರಿಗೆ 20 ಲಕ್ಷ ಹಣವನ್ನು ಠೇವಣಿ ಇಡಬೇಕೆಂದು ತೀರ್ಪು ನೀಡಿದೆ.   

Actress Jaya Prada Latest News
Image Credit: Livelaw

ಥಿಯೇಟರ್​ ಹೊಂದಿದ ನಟಿ ಜಯಪ್ರದಾ

ನಟಿ ಜಯಪ್ರದಾ ಅವರು ಚೆನ್ನೈ ಅಣ್ಣಾ ರಸ್ತೆಯಲ್ಲಿ ರಾಮ್​ ಕುಮಾರ್​ ಮತ್ತು ರಾಜ್​ ಬಾನು ಅವರೊಂದಿಗೆ ಥಿಯೇಟರ್​ ನಡೆಸುತ್ತಿದ್ದರು. ಜಯಪ್ರದಾ ಸಿನಿಮಾ ಥಿಯೇಟರ್‌ನಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಥಿಯೇಟರ್ ಅನ್ನು ರಾಮ್ ಕುಮಾರ್ ಮತ್ತು ರಾಜಾಬಾಬು ಎಂಬುವವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಂದ ಇಎಸ್‌ಐ ಹಣ ವಸೂಲಿ ಮಾಡಿದ್ದರು.

1991 ರಿಂದ 2002ರ ನಡುವೆ 8.17 ಲಕ್ಷ, 2002ರಿಂದ 2005ರ ನಡುವೆ 1. 58 ಲಕ್ಷ ಸಂಗ್ರಹಿಸಿದ್ದರು. ಆದರೆ ಈ ಹಣವನ್ನು ಕಾರ್ಮಿಕರ ESI ಖಾತೆಗೆ ಜಮಾ ಮಾಡದ ಕಾರಣ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಈ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೊದಲಿಗೆ ತಮ್ಮ ESI ನಿಧಿ ಮೊತ್ತವನ್ನು ಪಾವತಿಸಿಲ್ಲ ಎಂದು ತಮಿಳುನಾಡು ರಾಜ್ಯ ವಿಮಾ ನಿಗಮದ ವಿರುದ್ಧ ದೂರು ದಾಖಲಿಸಿದರು. ತದನಂತರದಲ್ಲಿ ಇದೆ ವಿಷಯವಾಗಿ 5 ದೂರು ದಾಖಲಾಗಿದ್ದವು.

Actress Jaya Prada Latest News
Image Credit: Timesofindia

ಹೈಕೋರ್ಟ್ ನಲ್ಲಿ ಕೇಸ್ ಸೋತ ಜಯಪ್ರದಾ

ಕಾರ್ಮಿಕರು ನೀಡಿದ ದೂರಿನ ತನಿಖೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಯಪ್ರದಾ ಸೇರಿದಂತೆ ಮೂವರಿಗೆ ತಲಾ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಕಳೆದ ಆಗಸ್ಟ್ ನಲ್ಲಿ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಜಯಪ್ರದಾ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಪ್ರಿನ್ಸಿಪಲ್ ಸೆಷನ್ಸ್ ಕೋರ್ಟ್ ಸ್ವೀಕರಿಸಿದ್ದು, ಶಿಕ್ಷೆಗೆ ತಡೆ ನೀಡಲು ನಿರಾಕರಿಸಿತ್ತು. ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ.

ಜಾಮೀನು ಪಡೆಯಲು 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ಕೋರ್ಟ್ ಆದೇಶ

ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಆದೇಶವನ್ನು ಹೈಕೋರ್ಟ ರದ್ದುಗೊಳಿಸಲು ನಿರಾಕರಿಸಿದ್ದು,​ಜಯಪ್ರದಾ ಮತ್ತು ಇತರರಿಗೆ 15 ದಿನಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಶರಣಾಗುವಂತೆ ಮತ್ತು ESI ಪಾವತಿಸಲು 20 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಜಯಚಂದ್ರ ಅವರು ಜಯಪ್ರದ ಅವರು 20 ಲಕ್ಷ ರೂಪಾಯಿ ಪಾವತಿಸಿದರೆ ಮಾತ್ರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆದೇಶಿಸಿದ್ದಾರೆ.

Leave A Reply

Your email address will not be published.