Keerthy Suresh: ಖ್ಯಾತ ನಟಿ ಕೀರ್ತಿ ಸುರೇಶ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ…? ದುಬಾರಿ ಸಂಭಾವನೆ.

ದೇಶದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಕೀರ್ತಿ ಸುರೇಶ್ ಅವರ ಸಂಭಾವನೆ.

Actress Keerthy Suresh Remuneration: ಕಿರು ನಗೆಯ ಸುಂದರಿ ಕೀರ್ತಿ ಸುರೇಶ್ (keerthy Suresh) ಅವರು ಅನೇಕ ಸಿನಿ ಪ್ರಿಯರ ಮನ ಗೆದ್ದ ಚೆಲುವೆ ಆಗಿದ್ದಾರೆ. ಕೀರ್ತಿ ಸುರೇಶ್ ಅವರ ತಂದೆ ಚಲನಚಿತ್ರ ನಿರ್ಮಾಪಕ ಸುರೇಶ್ ಕುಮಾರ್ ಆಗಿದ್ದು, ಕೀರ್ತಿ ಅವರು ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ 2013 ರಲ್ಲಿ, ಪ್ರಿಯದರ್ಶನ್ ಅವರ ಮಲಯಾಳಂ ಸಿನಿಮಾ ಗೀತಾಂಜಲಿಯಲ್ಲಿ ತನ್ನ ಮೊದಲ ಪ್ರಮುಖ ಪಾತ್ರವನ್ನು ಪಡೆದರು.

ಒಂದೆರಡು ಬಾಕ್ಸ್ ಆಫೀಸ್ ಫ್ಲಾಪ್‌ಗಳ ಹೊರತಾಗಿಯೂ, ಕೀರ್ತಿ ಸುರೇಶ್‌ ದಕ್ಷಿಣದಲ್ಲಿ ಹೆಚ್ಚಿನ ಬೇಡಿಕೆಯಿರುವ ನಟಿಯಾಗಿದ್ದಾರೆ. ನಟಿ ಕೀರ್ತಿ ಸುರೇಶ್ ಅವರು ತಮಿಳು, ಮಲಯಾಳಂ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ತಮ್ಮ ನಟನಾ ಕೌಶಲ್ಯದಿಂದ ಜನರ ಮನಗೆದ್ದಿದ್ದಾರೆ. Instagram ನಲ್ಲಿ ಸುಮಾರು 16 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

Actress Keerthy Suresh
Image Credit: Telugu360

ಬಹಳ ಬೇಡಿಕೆ ಪಡೆದ ನಟಿ

ಆರಂಭದಲ್ಲಿ ಕೆಲವು ಸಿನಿಮಾಗಳಲ್ಲಿ ಸೋಲನ್ನು ಕಂಡ ನಟಿ ಕೀರ್ತಿ ಸುರೇಶ್ ನಂತರ ತನ್ನ ನಟನಾ ಕೌಶಲ್ಯದಿಂದ ಬೇಡಿಕೆ ಪಡೆದು ಅನೇಕ ಹಿಟ್ ನಟರೊಂದಿಗೆ ನಟಿಸಿ ಖ್ಯಾತಿಯನ್ನು ಪಡೆದರು. ಇವರ ಹಲವು ಸಿನಿಮಾಗಳು ಹಿಟ್ ಆಗಿದ್ದು ಅಧಿಕ ಬೇಡಿಕೆ ಹೊಂದಿದ ನಟಿ ಇವರಾಗಿದ್ದಾರೆ. ಇಂದಿಗೂ ತನ್ನ ನಗುವಿನಿಂದ ಅಭಿಮಾನಿಗಳ ನಿದ್ದೆ ಕೆಡಿಸಿದ್ದಾರೆ. ಇನ್ನು ಕೆಲವು ಹಿಟ್ ಸಿನಿಮಾಗಳ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ.

ಕೀರ್ತಿ ಸುರೇಶ್ ಕೋಟಿ ಕೋಟಿಯ ಒಡತಿ

ಮಹಾನಟಿ ಎಂದೇ ಖ್ಯಾತರಾಗಿರುವ ನಟಿ ಕೀರ್ತಿ ಸುರೇಶ್‌ ಅವರ ಮಾಸಿಕ ಆದಾಯವು 35 ಲಕ್ಷಕ್ಕಿಂತ ಹೆಚ್ಚಿದ್ದು ವಾರ್ಷಿಕ ಆದಾಯ 4 ಕೋಟಿಗಿಂತ ಹೆಚ್ಚಿದೆ. ಕೀರ್ತಿಯವರ ಆದಾಯವು ಮುಖ್ಯವಾಗಿ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸುವುದರಿಂದ ಬರುತ್ತದೆ. ಅಲ್ಲದೇ ಬ್ರ್ಯಾಂಡ್ ಡೀಲ್‌ಗಳಿಂದ ಬರುತ್ತದೆ. ಕೀರ್ತಿ ಸುರೇಶ್ ಪ್ರತಿ ಚಿತ್ರಕ್ಕೆ ಸುಮಾರು‌ 3 ರಿಂದ 4 ಕೋಟಿ ಚಾರ್ಜ್ ಮಾಡುತ್ತಾರೆ.

Actress Keerthy Suresh Remuneration
Image Credit: Filmibeat

ಇವರು 2023 ರಲ್ಲಿಯೇ ಸುಮಾರು 41 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ನಟಿ ದೇಶಾದ್ಯಂತ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.ಕೀರ್ತಿ ಸುರೇಶ್ ಅವರು ಚೆನ್ನೈನಲ್ಲಿರುವ ತಮ್ಮ ಪೋಷಕರೊಂದಿಗೆ ಅವರ ಅದ್ದೂರಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಜನಪ್ರಿಯತೆಯಿಂದಾಗಿ, Instagram ನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ 25 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಾರೆ.

ದುಬಾರಿ ಕಾರುಗಳನ್ನು ಹೊಂದಿದ ನಟಿ

ಕೀರ್ತಿ ಸುರೇಶ್‌ ಅವರಿಗೆ ಕಾರುಗಳೆಂದರೆ ಬಹಳ ಇಷ್ಟ ಅದರಲ್ಲೂ ಫ್ಯಾನ್ಸಿ ಕಾರುಗಳ ಬಗ್ಗೆ ಕ್ರೇಜ್‌ ಹೊಂದಿದ್ದಾರೆ. 60 ಲಕ್ಷ ಮೌಲ್ಯದ Volvo S90, 1.38 ಕೋಟಿ ಮೌಲ್ಯದ BMW 7 ಸರಣಿ 730Ld, 81 ಲಕ್ಷ ಬೆಲೆಯ Mercedes Benz AMG GLC43, ಟೊಯೋಟಾ ಇನ್ನೋವಾ ಸೇರಿದಂತೆ ಕೆಲವು ಕಾರುಗಳನ್ನು ಹೊಂದಿದ್ದಾರೆ. ಇವರು ಪ್ರತಿ ಸಿನಿಮಾಕ್ಕೂ ಕೋಟಿ 4 ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ

Leave A Reply

Your email address will not be published.