Actress Meena: ಎರಡನೆಯ ಮದುವೆಗೆ ತಯಾರಾದ ನಟಿ ಮೀನಾ, ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಮೀನಾ.

ಎರಡನೆಯ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಮೀನಾ.

Actress Meena Second Marriage: ಬಹುಭಾಷಾ ನಟಿ ಮೀನಾ (Meena) ಜನ ಮೆಚ್ಚಿದ ನಟಿಯಾಗಿದ್ದು, ಆಗಿನ ಕಾಲದಿಂದ ಹಿಡಿದು ಇಂದಿಗೂ ತನ್ನ ಅಭಿಮಾನಿಗಳನ್ನು ಮನರಂಜಿಸುತ್ತಿರುವ ನಟಿ ಇವರಾಗಿದ್ದು. ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾ ನೀಡಿದ ನಟಿ ಆಗಿದ್ದಾರೆ. 

ಇತೀಚಿಗೆ ತನ್ನ ಗಂಡನನ್ನು ಕಳೆದುಕೊಂಡ ಇವರು 2ನೇ ಮದುವೆ ವಿಚಾರವಾಗಿ ಆಗಾಗ ಚರ್ಚೆಯ ವಿಷಯವಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ನಟಿಯ 2ನೇ ಮದುವೆ ಬಗ್ಗೆ ಬಹಳ ಗಾಸಿಪ್ ಗಳು ಕಾಣಬಹುದಾಗಿದೆ .

Actress Meena Second Marriage
Image Credit: Ainlivenews

ಮೀನಾ ಮುಂದಿನ ಭವಿಷ್ಯದ ಬಗ್ಗೆ ಗೆಳತಿ ಹೇಳಿಕೆ

ಮೀನಾ ಮದುವೆ ಆಗುತ್ತಾರೋ ಇಲ್ವೋ ಆ ಎಲ್ಲಾ ವಿಚಾರಗಳ ಬಗ್ಗೆ ಆಕೆ ಗೆಳತಿ ಮಾತನಾಡಿದ್ದಾರೆ. ಬಹುಭಾಷಾ ನಟಿ ಮೀನಾ, ಪತಿ ವಿಧ್ಯಾ ಸಾಗರ್ (Vidya Sagar) ಅನಾರೋಗ್ಯದಿಂದ ನಿಧನರಾಗಿ ಎರಡು ವರ್ಷಗಳು ಉರುಳಿವೆ. ಹೀಗಾಗಿ ಮೀನಾ 2ನೇ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ.

ಮೀನಾ ಹೆಸರು ಹಲವು ನಟರ ಜೊತೆ ಕೇಳಿಬಂತು. ಹಲವು ಗಾಸಿಪ್‌ಗಳು ಶುರುವಾಯಿತು. ಆದರೂ ಮೀನಾ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸದೆ ಸುಮ್ಮನೇ ಇದ್ದಾರೆ. ಆದರೆ ಇದೀಗ ಮೀನಾ ಗೆಳತಿ ಡ್ಯಾನ್ಸ್ ಕೋರಿಯೋಗ್ರಾಫರ್ ಕಲಾ‌, ಮೀನಾಳ ಅಂತರಾಳದಲ್ಲಿ ಏನಿದೆ ಅನ್ನೋ ವಿಚಾರ ಹೇಳಿದ್ದಾರೆ.

ಮದುವೆ ಬಗ್ಗೆ ಮೌನ ಮುರಿದ ನಟಿ ಮೀನಾ

ಮೀನಾಳ ಕಷ್ಟ ಸುಖದಲ್ಲಿ ಜೊತೆಯಾಗಿದ್ದ ಗೆಳತಿ ಕಲಾ, ಇದೀಗ ಮೀನಾಗೆ ಎರಡನೇ ಮದುವೆ ಬಗ್ಗೆ ಯಾವ ಅಭಿಪ್ರಾಯವಿದೆ ಅನ್ನೋದರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳ್ಕೊಂಡಿದ್ದಾರೆ. ಹಲವು ಬಾರಿ ಕಲಾ ಮೀನಾಗೆ ಎರಡನೇ ಮದುವೆ ಬಗ್ಗೆ ಒತ್ತಾಯಿಸಿದ್ದರಂತೆ. ಆದರೆ ಮೀನಾ ಮಾತ್ರ ಯಾವ ಸಂದರ್ಭದಲ್ಲೂ 2ನೇ ಮದುವೆ ಆಗದಿರೋದಕ್ಕೆ ಯೋಚಿಸಿದ್ದಾರೆ. ಮದುವೆ ಬಗ್ಗೆ ಒತ್ತಾಯಿಸುವ ಸ್ನೇಹಿತೆಗೆ, ನನ್ನ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬೇಡ ಎಂದು ಸೂಚಿಸಿದ್ದಾರೆ ಎನ್ನುತ್ತಾರೆ ಆಪ್ತೆ ಕಲಾ.

Actress Meena latest update
Image Credit: Indiaglitz

ನಟಿ ಮೀನಾ ಮರಳಿ ಅಭಿನಯಕ್ಕೆ

ನಟಿ ಮೀನಾ ಮತ್ತೆ ಈಗ ಅಭಿನಯಕ್ಕೆ ಮರಳಿದ್ದಾರೆ. ಹೀಗೆ ಜೀವನಪೂರ್ತಿ ಮಗಳ ಜೊತೆ ಕಳೆದುಬಿಡಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಇಷ್ಟಾದ್ಮೇಲೂ ಎರಡನೇ ಮದುವೆ ಬಗ್ಗೆ ಗಾಸಿಪ್ ಆಗ್ತಿರೋದು ದುರಂತ ಎನ್ನಬಹುದು.

Leave A Reply

Your email address will not be published.