Actress Meghana Raj: ಅಗಲಿದ ಪತಿಯ ಹುಟ್ಟು ಹಬ್ಬಕ್ಕೆ ಬಹಳ ವಿಶೇಷವಾಗಿ ವಿಶ್ ಮಾಡಿದ ಮೇಘನಾ ರಾಜ್, ವೈರಲ್ ಪೋಸ್ಟ್..
ಅಗಲಿದ ಪತಿಯ ಹುಟ್ಟು ಹಬ್ಬಕ್ಕೆ ಬಹಳ ವಿಶೇಷವಾಗಿ ವಿಶ್ ಮಾಡಿದ ಮೇಘನಾ ರಾಜ್.
Actress Meghana Raj Wish Chiranjeevi Sarja Birthday: ಕನ್ನಡ ಚಿತ್ರರಂಗದ ಬಹಳ ಸುಂದರ ಜೋಡಿಗಳಲ್ಲಿ ನಟ ಚಿರಂಜೀವಿ ಸರ್ಜಾ (Chiranjeevi Sarja) ಹಾಗು ಮೇಘನಾ ರಾಜ್ (Meghana Raj) ಜೋಡಿ ಕೂಡ ಒಂದಾಗಿದೆ .ಈ ಜೋಡಿ 10 ವರ್ಷಗಳ ಕಾಲ ಪ್ರೀತಿಸಿ, 2018 ಮೇ 3 ರಂದು ಸಪ್ತಪದಿ ತುಳಿದು ಹೊಸ ಜೀವನವನ್ನು ಆರಂಭಿಸಿದರು. ಈ ಜೋಡಿ ಮದುವೆಗೂ ಮೊದಲೇ ಹಲವು ಸಿನಿಮಾ ಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ತುಂಬಾ ಸಂತೋಷವಾಗಿದ್ದ ಈ ಜೋಡಿಯ ಬದುಕಿನಲ್ಲಿ ಒಂದು ಮರೆಯಲಾರದ ಘಟನೆ ನೆಡೆಯಿತು ಅದುವೇ ಚಿರು ಇನ್ನಿಲ್ಲ ಎನ್ನುವ ಸುದ್ದಿ. ಚಿರು ಅವರು ಹೃದಯಾಘಾತದಿಂದ ಮರಣ ಹೊಂದಿ ಹಲವು ವರ್ಷ ಕಳೆದರು ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಅವರ ಹುಟ್ಟಿದ ದಿನಕ್ಕೆ ಪತ್ನಿ ಮೇಘನಾ ಬಹಳ ವಿಶೇಷವಾಗಿ ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ.
ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ
ಅಕ್ಟೋಬರ್ 6ರಂದು ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆ ಆಗಿತ್ತು. ಇದು ಚಿರು ಅವರ ಕೊನೆಯ ಸಿನಿಮಾವಾಗಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಮ್ ನಾರಾಯಣ್, ವಿಶೇಷ ಸುದ್ದಿಯೊಂದನ್ನು ನೀಡಿದ್ದರು. ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ರು. ರಾಯನ್ ರಾಜ್ ಹುಟ್ಟುವ ಮೊದಲೇ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು. ರಾಯನ್ ಪಾತ್ರವನ್ನು ಹೇಗೆ ಸೇರಿದ್ದಾರೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕಿದೆ.
View this post on Instagram
ಚಿರುಗೆ ಪ್ರೀತಿಯಿಂದ ವಿಶ್ ಮಾಡಿದ ಮೇಘನಾ ರಾಜ್
ಇಂದು ಚಿರಂಜೀವಿ ಸರ್ಜಾ ಅವರ ಹುಟ್ಟಿದ ದಿನವಾಗಿದ್ದು, ತನ್ನ ಪ್ರೀತಿಯ ಪತಿಗೆ ಮೇಘನಾ ರಾಜ್ ಪ್ರೀತಿಯಿಂದ ಸ್ಪೆಷಲ್ ವಿಶ್ ಮಾಡಿದ್ದಾರೆ. ನಾವು ನಿಮ್ಮನ್ನು ಮಾತ್ರ ಸೆಲಬ್ರೇಟ್ ಮಾಡುತ್ತೇವೆ ಹ್ಯಾಪಿ ಬರ್ತ್ ಡೇ ಹಸ್ಬೆಂಡ್ ಎಂದು ಬರೆದುಕೊಂಡಿದ್ದಾರೆ. ಇಬ್ಬರ ಚೆಂದದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಮೇಘನಾ ರಾಜ್ ಪತಿ ಚಿರಂಜೀವಿ ನೆನಪುಗಳ ಬಗ್ಗೆ ಅನೇಕ ಬಾರಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮಗ ರಾಯನ್ ಸರ್ಜಾ ಹುಟ್ಟಿದ ಬಳಿಕ ಮಗನ ಲಾಲನೆ-ಪಾಲನೆಯಲ್ಲೇ ನಟಿ ಬ್ಯುಸಿ ಆಗಿದ್ದಾರೆ. ಜೊತೆಗೆ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.