Nayanthara Net Worth: ನಟಿ ನಯನತಾರ ಕೋಟಿ ಕೋಟಿಗಳ ಒಡತಿ, ನಟಿ ನಯನತಾರ ಒಟ್ಟು ಆಸ್ತಿ ಮೌಲ್ಯ ಬಹಿರಂಗ.

ನಯನತಾರ ರವರ ಐಷಾರಾಮಿ ಜೀವನ, ಕೋಟಿಯಾ ಒಡತಿ ನಯನತಾರ ಅವರ ಆಸ್ತಿ ಮೌಲ್ಯ ಬಹಿರಂಗ.

South Indian Star Nayanthara Net Worth: ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ ನಯನತಾರ (Nayanthara) ಯಾರಿಗೆ ಗೊತ್ತಿಲ್ಲ ಹೇಳಿ, ಇವರು ಅಯ್ಯಾ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೂ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅವರ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಈಕೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದವರಾಗಿದ್ದಾರೆ.ಕೇವಲ ತಮಿಳಿನಲ್ಲಿ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಕೆಲಸ ಮಾಡಿದ್ದೂ, ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಜವಾನ್ (Jawan) ಚಿತ್ರದ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದರು.                                                                                                             

Actress Nayanthara Latest News
Image Credit: Gqindia

ಹಲವು ನಟರೊಂದಿಗೆ ನಟಿಸಿದ ಚಲುವೆ

ನಯನತಾರ ಅವರು ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಅದೇ ರೀತಿ ನಯನತಾರಾ ಬೇರೆ ಭಾಷೆಯ ಟಾಪ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.ರಜನಿಕಾಂತ್, ವಿಜಯ್, ಅಜಿತ್, ಸೂರ್ಯ, ವಿಕ್ರಮ್, ಧನುಷ್, ಜಯಂ ರವಿ ಶಿವಕಾರ್ತಿಕೇಯನ್ ಮುಂತಾದ ತಮಿಳು ಚಿತ್ರರಂಗದ ಪ್ರಮುಖ ನಟರೊಂದಿಗೆ ನಯನತಾರಾ ನಟಿಸಿದ್ದಾರೆ.

ಈ ನಡುವೆ ನಟಿ ನಯನತಾರ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದರು. ದಂಪತಿಗೆ ವಯಾ ಮತ್ತು ಉಲಗ್ ಎಂಬ 2 ಅವಳಿ ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಮ್ ಪೇಜ್‌ಗೆ ಸೇರ್ಪಡೆಗೊಂಡಿರುವ ನಯನತಾರಾ, ಪತಿ ಮತ್ತು ಮಕ್ಕಳೊಂದಿಗೆ ಇರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ.

South Indian star Nayanthara Net Worth
Image Credit: Lifestyleasia

ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರ

ಇನ್ನು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು, ಸದ್ಯ ನಯನತಾರಾ ದೇಶದ ಶ್ರೀಮಂತ ನಟಿಯರಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ. ಹಾಗಾದರೆ ಇವರ ಆಸ್ತಿಯ ಮೌಲ್ಯ ಎಷ್ಟೀರಬಹುದು ಅಂತೀರಾ ಇಲ್ಲಿದೆ ಉತ್ತರ. ನಯನತಾರಾ ನಿವ್ವಳ ಮೌಲ್ಯ ಸುಮಾರು 200 ಕೋಟಿ ಮತ್ತು ಅವರು ರೂ. 100 ಕೋಟಿಯ ಮನೆಯನ್ನು ಹೊಂದಿದ್ದಾರೆ.

ಪ್ರಸ್ತುತ, ನಯನತಾರಾ ತನ್ನ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಚೆನ್ನೈನಲ್ಲಿ 100 ಕೋಟಿ ರೂಪಾಯಿ ಮೌಲ್ಯದ 4 BHK ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆಯಲ್ಲಿ ಖಾಸಗಿ ಚಿತ್ರಮಂದಿರ, ಸ್ವೀಮ್ಮಿಂಗ್‌ ಫೂಲ್ ಮತ್ತು ಜಿಮ್‌ನಂತಹ ವಿಶೇಷ ಸೌಕರ್ಯಗಳಿವೆ. ಅಲ್ಲದೆ ನಯನತಾರಾ ಅವರು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ತಲಾ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ.

Nayanthara net worth
Image Credit: Lhongtortai

ಸ್ವಂತ ವಿಮಾನ ಹೊಂದಿರುವ ನಯನತಾರ

ನಯನತಾರಾ ಅವರ ಬಳಿ 50 ಕೋಟಿ ಮೌಲ್ಯದ ಖಾಸಗಿ ಜೆಟ್ ಕೂಡ ಇದೆ . ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮತ್ತು ಮಾಧುರಿ ದೀಕ್ಷಿತ್ ಅವರಂತಹ ಬಾಲಿವುಡ್ ನಟಿಯರಲ್ಲದೆ, ನಯನತಾರಾ ತನ್ನದೇ ಆದ ವಿಮಾನವನ್ನು ಹೊಂದಿರುವ ದಕ್ಷಿಣ ಭಾರತದ ಏಕೈಕ ನಟಿ.

ನಯನತಾರಾ ಕೂಡ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅವರು 1.76 ಕೋಟಿ ರೂಪಾಯಿ ಮೌಲ್ಯದ BMW 7 ಸಿರೀಸ್, 1 ಕೋಟಿ ಮೌಲ್ಯದ Mercedes GLS350D ಮತ್ತು BMW 5 ಸರಣಿಯಂತಹ ಹಲವಾರು ಉನ್ನತ ಮಟ್ಟದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ‌

Leave A Reply

Your email address will not be published.