Actress Nayanthara: ಟಾಪ್ ನಟಿ ನಯನತಾರ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ…? ದುಬಾರಿ ಸಂಭಾವನೆ.

ಒಂಚು ಚಿತ್ರಕ್ಕೆ ನಟಿ ನಯನತಾರ ಪಡೆಯುವ ಸಂಭಾವನೆ ಎಷ್ಟು,,,?

Actress Nayanthara Remuneration: ಸೌತ್‌ ಚಿತ್ರರಂಗದ ನಟಿ ನಯನತಾರ (Nayanthara) ತನ್ನ ನಟನೆಯ ಮೂಲಕ ಇನ್ನು ಚಿತ್ರರಂಗದಲ್ಲಿ ಬೇಡಿಕೆಯನ್ನು ಹೊಂದಿದ ನಟಿ ಇವರಾಗಿದ್ದಾರೆ. ಇವರು ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳೇ ಕಳೆದಿದ್ದು, ಇವತ್ತಿಗೂ ಕೂಡ ಹಲವು ಸಿನಿಮಾಗಳ ಮೂಲಕ ಲೇಡಿ ಸೂಪರ್ ಸ್ಟಾರ್ ನಯನತಾರ ಎಂಬ ಬಿರುದನ್ನ ಉಳಿಸಿಕೊಂಡಿದ್ದಾರೆ.

ಬಹುಭಾಷಾ ನಟಿಯಾಗಿರುವ ನಟಿ ನಯನತಾರ ಚಂದ್ರಮುಖಿ, ಗಜನಿ ಸಿನಿಮಾಗಳ ಮೂಲಕ ಸ್ಟಾರ್ ಪಟ್ಟಕ್ಕೆ ಏರಿದವರಾಗಿದ್ದು, ತೆಲಗು ತಮಿಳು, ಮಲಿಯಾಳಮ್ ಮಾತ್ರವಲ್ಲದೆ, ಹಲವಾರು ಸೂಪರ್‌ ಹಿಟ್‌ ಸಿನಿಮಾಗಳ ಮೂಲಕ ಟಾಲಿವುಡ್ ಪ್ರೇಕ್ಷಕರ ಗಮನ ಸೆಳೆದರು. ಜೀವನದಲ್ಲಿ ಎಷ್ಟೇ ವಿವಾದಗಳು ಬಂದರೂ ಆಕೆಯ ವೃತ್ತಿಜೀವನ ಕುಂಠಿತವಾಗಲಿಲ್ಲ.

Actress Nayanthara Remuneration
Image Credit: Koimoi

ಬಾಲಿವುಡ್ ನಲ್ಲಿ ಮಿಂಚಿದ ನಟಿ ನಯನತಾರ

ಬಹುಭಾಷೆಯಲ್ಲಿ ನಟಿಸಿದ ನಯನತಾರ ಇತೀಚಿಗೆ ಬಿಡುಗಡೆ ಆದ ಶಾರುಖ್ ಖಾನ್ (Shah Rukh Khan) ಅಭಿನಯದ ಜವಾನ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ತನ್ನ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದರು.

ಸೌತ್‌ ಸಿನಿರಂಗದ ಜೊತೆಗೆ ಉತ್ತರದಲ್ಲಿಯೂ ತನ್ನನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಜವಾನ್ ಚಿತ್ರ ವಿಶ್ವಾದ್ಯಂತ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ನಯನತಾರ ಅವರ ಬೇಡಿಕೆ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

Actress Nayanthara Latest News
Image Credit: Filmibeat

ಕೋಟಿ ಕೋಟಿ ಸಂಭಾವನೆ ಪಡೆಯುವ ನಟಿ ನಯನತಾರ

ಬಹು ಬೇಡಿಕೆಯ ನಟಿ ನಯನತಾರ ಜವಾನ್ ಸಿನಿಮಾಕ್ಕಾಗಿ 10 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಜವಾನ್ ಚಿತ್ರದ ಯಶಸ್ಸಿನ ನಂತರ ನಯನತಾರಾ ಸಂಭಾವನೆಯನ್ನು ಮತ್ತೆ ಮೂರು ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ಸಿನಿಮಾಗಳಿಗೆ 13 ಕೋಟಿ ರೂಪಾಯಿ ಕೊಟ್ಟರೆ ಸಿನಿಮಾ ಮಾಡುತ್ತೇನೆ ಎನ್ನುತ್ತಿದ್ದಾರೆ.

ನಯನತಾರ ಪಡೆಯುವ ಸಂಭಾವನೆಯೂ ಸ್ಟಾರ್‌ ಹೀರೋಗಳ ಸಂಭಾವನೆಗಿಂತ ಹೆಚ್ಚು ಎನ್ನಬಹುದು. ಸೌತ್ ನಲ್ಲಿ ಹತ್ತು ಕೋಟಿ ತೆಗೆದುಕೊಳ್ಳುವ ನಾಯಕಿಯರು ಸದ್ಯಕ್ಕೆ ಯಾರು ಇಲ್ಲ ಇದೀಗ ಆ ಸ್ಥಾನದಲ್ಲಿ ಬರೀ ನಯನತಾರಾ ಮಾತ್ರ ಇದ್ದಾರೆ. ಸದ್ಯ ನಯನತಾರಾ ತಮ್ಮ 75ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜಯಂ ರವಿಯ ಜೊತೆ ತನಿ ಒರುವನ್ 2 ಮತ್ತು ಕೆಲವು ಚಿತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಮುಂದೆ ಇವರ ಸಂಭಾವನೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳು ಕೂಡ ಇದೆ ಎನ್ನಬಹುದು.

Leave A Reply

Your email address will not be published.