Pooja Gandhi: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಕೂಡಿಬಂತು ಕಂಕಣ ಭಾಗ್ಯ, ಹುಡುಗ ಯಾರು ಗೊತ್ತಾ…?

ನಟಿ ಪೂಜಾ ಗಾಂಧಿ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತಾ? ಕನ್ನಡ ಕುಟುಂಬದ ಸೊಸೆ ಆಗಲಿದ್ದಾರೆ ಈ ನಟಿ.

Actress Pooja Gandhi Marriage : ಮುಂಗಾರು ಮಳೆ ಚೆಲುವೆ ನಟಿ ಪೂಜಾ ಗಾಂಧಿ (Pooja Gandhi) ಕನ್ನಡ ಅಭಿಮಾನಿಗಳ ನೆಚ್ಚಿನ ನಟಿ ಆಗಿದ್ದಾರೆ. ಇತೀಚಿಗಂತೂ ಪೂಜಾ ಗಾಂಧಿ ಅವರ ಕನ್ನಡಕ್ಕೆ ಎಲ್ಲಾ ಅಭಿಮಾನಿಗಳು ಫಿದಾ ಆಗಿದ್ದಾರೆ. ಕನ್ನಡವೇ ಮಾತನಾಡಲು ಬಾರದ ಈ ನಟಿ ಈಗ ಇಷ್ಟು ಚೆನ್ನಾಗಿ, ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿರುವುದು ಪ್ರತಿಯೊಬ್ಬರಿಗೂ ಬಹಳ ಖುಷಿ ತಂದಿದೆ.

ಅಷ್ಟೇ ಅಲ್ಲದೆ ಈ ನಟಿ ಈಗ ಕನ್ನಡದ ಹುಡುಗನನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೂಜಾ ಗಾಂಧಿ ಗೆ 2012ರಲ್ಲಿ ಉದ್ಯಮಿ ಆನಂದ್ ಗೌಡ ಜೊತೆ ನಿಶ್ಚಿತಾರ್ಥವಾಗಿ ನಂತರ ಮುರಿದು ಬಿದ್ದಿತ್ತು. ಈಗ ಬಹಳ ವರ್ಷಗಳ ನಂತರ ಮತ್ತೆ ಪೂಜಾ ಗಾಂಧಿ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಿದೆ.

Actress Pooja Gandhi Marriage
Image Credit: Bollywoodshaadis

ಮದುವೆ ಆಗಲಿದ್ದಾರೆ ನಟಿ ಪೂಜಾ ಗಾಂಧಿ

ಮುಂಗಾರು ಮಳೆ ಸಿನಿಮಾದ ಮೂಲಕ ಸಿನಿಮಾ ಜರ್ನಿ ಪ್ರಾರಂಭಿಸಿದ ನಟಿ ಪೂಜಾ ಗಾಂಧಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪೂಜಾ ಗಾಂಧಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನ ಜೊತೆ ವಿವಾಹ ಜೀವನಕ್ಕೆ ಕಾಲಿಡಲು ನಟಿ ಸಜ್ಜಾಗಿದ್ದು, ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲೀಕನ ಜತೆ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ನಟಿಯ ಮದುವೆ ನಡೆಯಲಿದೆ ಎಂಬ ಮಾಹಿತಿ ಇದೆ. ಬೆಂಗಳೂರಿನ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್, ಪೂಜಾ ಗಾಂಧಿ ಅವರನ್ನು ವರಿಸಲಿದ್ದಾರೆ ಎಂದು ತಿಳಿದುಬಂದಿದೆ.

Actress Pooja Gandhi Latest News
Image Credit: Filmibeat

ಕನ್ನಡ ಸ್ಪಷ್ಟವಾಗಿ ಮಾತನಾಡಲು ಇವರೇ ಕಾರಣವಂತೆ

ಕನ್ನಡವನ್ನು ಕಲಿತು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿರೋ ಮುಂಗಾರು ಮಳೆ ಬೆಡಗಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಮದುವೆಗೆ ರೆಡಿ ಆಗಿದ್ದಾರೆ. ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿರುವುದಾಗಿ ಮಾಹಿತಿ ಇದೆ. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಕರ್ನಾಟಕದ ಸೊಸೆ ಆಗಲು ಪೂಜಾ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ ಕುಟುಂಬಸ್ಥರು, ಬಂದು-ಮಿತ್ರರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲು ನಟಿ ನಿಶ್ಚಯಿಸಿದ್ದಾರೆ. ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಇವರ ಮದುವೆ ನಡೆಯಲಿದೆ ಎನ್ನಲಾಗಿದೆ .

Leave A Reply

Your email address will not be published.