Actress Ramya: ಇಂಡಿಯಾ ಪಾಕಿಸ್ತಾನ ಪಂದ್ಯ ಕಂಡು ಬೇಸರ ಹೊರಹಾಕಿದ ನಟಿ ರಮ್ಯಾ, ಅಷ್ಟಕ್ಕೂ ಆಗಿದ್ದೇನು…?
ಕ್ರಿಕೆಟ್ ಪಂದ್ಯ ಮುಗಿದ ನಂತರ ಬೇಸರ ವ್ಯಕ್ತ ಪಡಿಸಿದ ನಟಿ ರಮ್ಯಾ, ಅಂಥದೇನಾಯಿತು ಸ್ಟೇಡಿಯಂನಲ್ಲಿ...?
Actress Ramya Post About India Pakistan Match: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Actress Ramya) ಅವರು ನಿನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ನೋಡಲು ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಗೆ (Narendra Modi Stadium) ಬಂದಿದ್ದರು. ಬಹಳ ಕುತೂಹಲಕಾರಿ ಪಂದ್ಯವನ್ನು ವೀಕ್ಷಿಸಿದ ನಟಿ ಭಾರತ ತಂಡ ಗೆಲುವನ್ನು ಸಾಧಿಸಿದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ತನ್ನ ಅಭಿಮಾನಿಗಳ ಜೊತೆ ಸೆಲ್ಫಿ ಗೆ ಪೋಸ್ ಕೊಟ್ಟು ಸಂಭ್ರಮಿಸಿದರು .ಅಚ್ಚರಿಯ ವಿಚಾರ ಏನೆಂದರೆ, ಕ್ರೀಡಾಂಗಣದ ಹೊರಭಾಗದಲ್ಲಿನ ಸ್ವಚ್ಛತೆ ಬಗ್ಗೆ ನಟಿ ರಮ್ಯಾ ಟೀಕಿಸಿದ್ದಾರೆ. ಈ ಕುರಿತ್ತು ನಟಿ ರಮ್ಯಾ ಪೋಸ್ಟ್ ಮಾಡಿದ್ದು ಸದ್ಯ ಪೋಸ್ಟ್ ವೈರಲ್ ಆಗಿದೆ ಎಂದು ಹೇಳಬಹುದು.

ಗುಜರಾತ್ನ ಫೇಮಸ್ ನರೇಂದ್ರ ಮೋದಿ ಸ್ಟೇಡಿಯಂ
ಹಲವಾರು ಸ್ಟೇಡಿಯಂ ಗಳಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೇಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದಿದೆ ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ. ಈ ಸ್ಟೇಡಿಯಂನಲ್ಲಿ ಬರೋಬ್ಬರಿ 1.30 ಲಕ್ಷ ಮಂದಿ ಆಸನರಾಗಿ ಪಂದ್ಯವನ್ನು ವೀಕ್ಷಣೆ ಮಾಡಬಹುದು. ಹೊರಗಿನಿಂದ ಮತ್ತು ಒಳಗಿನಿಂದ ಈ ಸ್ಟೇಡಿಯಂ ನೋಡಲು ಬಹಳ ಸುಂದರವಾಗಿದೆ. ಆದರೆ ಪಂದ್ಯ ನೋಡಲು ಬಂದ ರಮ್ಯಾ ಸ್ಟೇಡಿಯಂ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಏಕೆ ಇಂಡಿಯಾ ಏಕೆ? ಎಲ್ಲಿದೆ ಸ್ವಚ್ಛತೆ?
ನಟಿ ರಮ್ಯಾ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ರಾಜಕೀಯ ವಿಷಯವಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಮೋದಿ ಅವರ ರಾಜ್ಯದಲ್ಲಿಯೇ ಸ್ವಚ್ಛತೆಯ ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪಂದ್ಯ ವೀಕ್ಷಣೆಯ ಹಲವು ಫೋಟೋಗಳನ್ನು ರಮ್ಯಾ ಶೇರ್ ಮಾಡಿದ್ದಾರೆ.
View this post on Instagram
ಆ ಫೋಟೋಗಳ ನಡುವೆ ಒಂದು ಕಿರು ವಿಡಿಯೋ ತುಣುಕನ್ನೂ ಹಂಚಿಕೊಂಡಿದ್ದಾರೆ. “ಇದೊಂದು ಅದ್ಭುತವಾದ ಪಂದ್ಯ. ನಾವು ಗೆದ್ದೆವು. ಆಹಾರದ ವಿಚಾರದಲ್ಲಿ ಅಹಮದಾಬಾದ್ ಎಂದಿನಂತೆ ನಮ್ಮನ್ನು ನಿರಾಸೆ ಮಾಡಲಿಲ್ಲ. ಆದರೆ, ಆ ವಿಡಿಯೋ ನೋಡಿ ನನ್ನ ಮನಸ್ಸಿಗೆ ನೋವಾಯ್ತು. ಏಕೆ ಇಂಡಿಯಾ ಏಕೆ? ಎಲ್ಲಿದೆ ಸ್ವಚ್ಛತೆ? ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಪಂದ್ಯದ ಬಳಿಕ ಕ್ರೀಡಾಂಗಣದ ಹೊರಭಾಗದಲ್ಲಿ ಎಲ್ಲಿ ನೋಡಿದರೂ ಕಸವೋ ಕಸ. ಆ ಕಸದ ವಿಡಿಯೋವನ್ನು ರಮ್ಯಾ ಶೇರ್ ಮಾಡಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ನಟಿಯ ಈ ಪೋಸ್ಟ್ಗೆ ಬಗೆಬಗೆ ಕಾಮೆಂಟ್ಗಳು ಹರಿದು ಬಂದಿವೆ. ನೋಡುಗರು ನಟಿಯ ಮಾತಿಗೆ ಬೆಂಬಲ ಸೂಚಿಸಿದ್ದಾರೆ.
ನಟಿ ರಮ್ಯಾ ಪೋಸ್ಟ್ ಗೆ ಜನರ ಪ್ರತಿಕ್ರಿಯೆ
ಈ ವಿಡಿಯೋ ನೋಡಿ ನಮ್ಮ ಜನರ ಯೋಗ್ಯತೆ ಏನೆಂದು ಗೊತ್ತಾಯ್ತು ಎಂದು ಕೆಲವರು ಹೇಳಿದರೆ, ಸ್ವಚ್ಛತೆ ಬಗ್ಗೆ ಭಾರತೀಯರಿಗೆ ವಿವರಿಸುವ ಅಗತ್ಯ ಇಲ್ಲ. ಜನಕ್ಕೆ ತಾವು ತಪ್ಪು ಮಾಡುತ್ತಿದ್ದೇವೆಂದು ಗೊತ್ತಿದ್ದೂ ತಪ್ಪು ಮಾಡುತ್ತಾರೆ ಎಂದೂ ಕಾಮೆಂಟ್ ಮೂಲಕ ಅನಿಸಿಕೆ ಹೇಳಿಕೊಂಡಿದ್ದಾರೆ. ಹಾಗು ಇನ್ನು ಕೆಲವರು ರಮ್ಯಾ ಳಿಗೆ ಟಾಂಗ್ ಕೊಟ್ಟಿದ್ದಾರೆ.