Ramya Marriage: 41 ವರ್ಷವಾದರೂ ನಟಿ ರಮ್ಯಾ ಯಾಕಿನ್ನೂ ಮದುವೆ ಆಗಿಲ್ಲ, ಮದುವೆ ಆಗದೆ ಇರಲು ಕಾರಣ ಏನು…?

ನಟಿ ರಮ್ಯಾ, ಯಾಕೆ ಇನ್ನು ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ, ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ನಟಿ ಹೇಳಿದ್ದೇನು?

Actress Ramya Marriage Latest Update: ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ಹೆಸರು ಮಾಡಿ, ಹೆಸರಿಲ್ಲದಂತೆ ಕಣ್ಮರೆಯಾಗಿರುದನ್ನು ನಾವು ಕಾಣುತ್ತೇವೆ. ಆದ್ರೆ ಕೆಲವೇ ನಟಿಯರು ಮಾತ್ರ ಸಿನಿಮಾದಿಂದ ದೂರ ಇದ್ದರು ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯಾಗಿ ಉಳಿದಿರುತ್ತಾರೆ.

ಅಂತಹ ನಟಿಯರ ಪಟ್ಟಿಯಲ್ಲಿ ಮೋಹಕ ತಾರೆ ರಮ್ಯಾ (Ramya) ಕೂಡ ಹೌದು. ಅಭಿ ಸಿನಿಮಾದ ಮೂಲಕ ಸಿನಿಮಾರಂಗ ಪ್ರವೇಶ ಪಡೆದ ಈ ನಟಿ ಮೊಟ್ಟ ಮೊದಲ ಸಿನಿಮಾದಲ್ಲೇ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿ ಹಿಟ್ ಆದರು. ತದನಂತರ ಹಲವು ನಟರ ಜೋಡಿ ಆಗಿ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಈ ನಟಿ ಕೇವಲ ಕನ್ನಡ ಮಾತ್ರವಲ್ಲದೇ ತಮಿಳುನಲ್ಲಿ ಕೂಡ ಹಲವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Actress Ramya Marriage Latest Update
Image Credit: Times Of India

ನಟಿ ರಮ್ಯಾ ಅವರ ಬಗ್ಗೆ ಮಾಹಿತಿ

ನಟಿ ರಮ್ಯಾ ಅವರು ನವೆಂಬರ್ 29 , 1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಈ ನಟಿಯ ಮೂಲ ಹೆಸರು ದಿವ್ಯ ಸ್ಪಂದನ ಆಗಿದ್ದು, ಚಿತ್ರರಂಗಕ್ಕೆ ಬಂದ ನಂತರ ಇವರನ್ನು ರಮ್ಯಾ ಎಂದು ಗುರುತಿಸಲಾಗಿದೆ. 2003 ರಲ್ಲಿ ಅಭಿ ಸಿನಿಮಾಕ್ಕೆ ಆಯ್ಕೆ ಆಗಿ ಪುನೀತ್ ರಾಜ್ ಕುಮಾರ ಜೊತೆ ನಟಿಸಿದ್ದಾರೆ. ಅಭಿ ಸಿನಿಮಾದಿಂದ ಪ್ರಾರಂಭವಾದ ಇವರ ಸಿನಿಮಾ ಜರ್ನಿ ಇಂದಿಗೂ ಕೂಡ ಸಾಗುತ್ತಿದೆ. ರಮ್ಯಾ ಅವರಿಗೆ ಈಗ 41 ವರ್ಷ ವಯಸ್ಸಾಗಿದ್ದು ಇನ್ನು ಈ ನಟಿ ಯಾಕೆ ಮದುವೆ ಆಗಿಲ್ಲ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.

ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಟಿ ರಮ್ಯಾ

ನಟಿ ರಮ್ಯಾ ಅವರು ಮಂಡ್ಯ ದಲ್ಲಿ ಚುನಾವಣೆಯಲ್ಲಿ ಭಾವಹಿಸಿ ಗೆಲುವನ್ನು ಕಂಡಿದ್ದರು. ಮಂಡ್ಯ ಸಂಸದೆ ಆಗಿ ಹಲವು ಕೆಲಸಗಳನ್ನು ಮಾಡಿದ ಈ ನಟಿ ರಾಜಕೀಯದಲ್ಲಿ ಸಾಧನೆ ಮಾಡಿ ಸೈ ಅನಿಸಿಕೊಂಡ್ರು, ತದನಂತರ ಸಿನಿಮಾ ಹಾಗು ರಾಜಕೀಯದಿಂದ ದೂರ ಉಳಿದ ಈ ನಟಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡ ತೊಡಗಿತು. ಈಗ ಹಲವು ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡ ರಮ್ಯಾ ತನ್ನ ಕ್ಯೂಟ್ ಲುಕ್ ನಿಂದ ಅಭಿಮಾನಿಗಳನ್ನು ಸಳೆಯುತ್ತಿದ್ದಾರೆ.

Actress Ramya Latest News
Image Credit: The News Minute

ಮದುವೆ ಅಥವಾ ಸಂತೋಷ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ

ನಟಿ ರಮ್ಯಾ ಎಲ್ಲಿ ಹೋದರು ಕೇಳುವ ಒಂದೇ ಒಂದು ಪ್ರಶ್ನೆ ಏನಂದ್ರೆ ಯಾವಾಗ ಮದುವೆ? ಹೀಗೆ ಇತೀಚೆಗಷ್ಟೇ ನಟಿ ರಮ್ಯಾ ಕಾಲೇಜು ಕಾರ್ಯಕ್ರಮ ಒಂದಕ್ಕೆ ಹಾಜರಾಗಿದ್ದರು, ಅಲ್ಲಿನ ವಿದ್ಯಾರ್ಥಿಯೊಬ್ಬ ಮೇಡಂ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾಗ, ನಟಿ ರಮ್ಯಾ ಅವರು ಯಾಕೆ ಮದುವೆ ಆಗಬೇಕು ಎಂದು ಕೇಳಿದ್ದಾರೆ.

ಹೌದು ಮದುವೆ ಹಾಗು ಹ್ಯಾಪಿ ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಅದಕ್ಕೆ ನಾನು ಹ್ಯಾಪಿ ಅನ್ನೇ ಆಯ್ಕೆ ಮಾಡಿಕೊಂಡಿದ್ದೇನೆ, ಮದುವೆಯೇ ಜೀವನ ಅಲ್ಲ ಸಂತೋಷವಾಗಿರುವುದು ಮುಖ್ಯ ಎಂದು ಉತ್ತರ ನೀಡಿದ್ದಾರೆ. ಏನೇ ಇರಲಿ ಈಗ ಸಧ್ಯಕ್ಕೆ ನಟಿ ರಮ್ಯಾ ಅವರು ಸಿನಿಮಾ ಕೆಲಸ ಹಾಗು ಸಿನಿಮಾ ನಿರ್ಮಾಪಕರಾಗಿ ಬ್ಯುಸಿ ಆಗಿದ್ದಾರೆ.

Leave A Reply

Your email address will not be published.