Rashmika Mandanna: ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸರಳವಾಗಿ ಎಷ್ಟು ಭಾಷೆ ಮಾತನಾಡುತ್ತಾರೆ ಗೊತ್ತಾ…? ನಿಜಕ್ಕೂ ಗ್ರೇಟ್.
ಹಲವು ಭಾಷೆಗಳನ್ನು ಸುಲಭವಾಗಿ ಮಾತಾಡುವ ನಟಿ ರಶ್ಮಿಕಾ ಮಂದಣ್ಣ, ಇವರ ಭಾಷಾ ಅಭಿಮಾನಕ್ಕೆ ಅಭಿಮಾನಿಗಳು ಫಿದಾ.
Actress Rashmika Mandanna Viral Video: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmik Mandanna) ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ಈಗಾಗಲೇ ಅನೇಕ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು.
ಅಲ್ಲಿಯವರೆಗೂ ಸೌತ್‌ಗೆ ಸೀಮಿತವಾಗಿದ್ದ ಚೆಲುವೆಗೆ ಸಧ್ಯ ಬಾಲಿವುಡ್ ನಲ್ಲೂ ಭಾರೀ ಬೇಡಿಕೆ ಇದೆ. ರಶ್ಮಿಕಾ ಮಂದಣ್ಣ ಅವರು ಆಗಾಗ ಕೆಲವು ವಿಚಾರವಾಗಿ ಕಾಂಟ್ರವರ್ಸಿಗೆ ಕಾರಣರಾಗುತ್ತಾರೆ. ಆದರೆ ಈ ಸಲ ಇವರು ನೀಡಿದ ಹೇಳಿಕೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿರುವ ರಶ್ಮಿಕಾ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಅವರ ಮುಂಬರುವ ಬಹುನಿರೀಕ್ಷತ ಸಿನಿಮಾಗಳಲ್ಲಿ ಅನಿಮಲ್ ಚಿತ್ರವೂ ಒಂದು. ರಣಬೀರ್ ಕಪೂರ್ ಅಭಿನಯದ ಈ ಚಿತ್ರ ಡಿಸೆಂಬರ್ 01 ರಂದು ಬಿಡುಗಡೆಯಾಗಲಿದೆ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮತ್ತೊಂದೆಡೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರ ಮುಂದಿನ ವರ್ಷ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಮತ್ತೊಂದೆಡೆ, ರಶ್ಮಿಕಾ ʼಕಾಮನಬಿಲ್ಲುʼ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದ್ವಿಭಾಷಾ ತಯಾರಾಗುತ್ತಿರುವ ಈ ಚಿತ್ರವನ್ನು ಶಾಂತ್ರುಬನ್ ನಿರ್ದೇಶಿಸುತ್ತಿದ್ದು, ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಸ್‌ಆರ್ ಪ್ರಭು ಮತ್ತು ಎಸ್‌ಆರ್ ಪ್ರಕಾಶ್ ಬಾಬು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ.
Our cutu know 6 languages 😊@iamRashmika 👌🔥❤️#RashmikaMandanna ❤️ pic.twitter.com/XqWpVgeNPq
— Rashmika Delhi Fans (@Rashmikadelhifc) October 19, 2023
ಆರು ಭಾಷೆಗಳನ್ನು ಸರಳವಾಗಿ ಮಾತನಾಡಲು ಗೊತ್ತಿರುವ ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಸಕ್ತಿಯನ್ನು ಹೊಂದಿದವರಾಗಿದ್ದು. ಕೆಲವೊಮ್ಮೆ ಲೈವ್ ಬಂದು ತನ್ನ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ನಟಿ ರಶ್ಮಿಕಾಗೆ ಅಭಿಮಾನಿಗಳು ಎಷ್ಟು ಭಾಷೆ ಬರುತ್ತವೆ ಅಂತ ಪ್ರಶ್ನೆ ಮಾಡಿದ್ದರು.
ಅದಕ್ಕೆ ಉತ್ತರಿಸಿರುವ ನ್ಯಾಷುನಲ್ ಕ್ರಶ್ 6 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವುದಾಗಿ ಹೇಳಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಹಾಗು ಈ ನಟಿ ಇಷ್ಟು ಭಾಷೆಗಳನ್ನು ಮಾತನಾಡಬಲ್ಲರ ಎಂದು ಕೆಲವರು ಅನುಮಾನ ಪಟ್ಟಿದ್ದಾರೆ. ಏನೇ ಆದರು 06 ಭಾಷೆಗಳನ್ನು ಮಾತನಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ.