Samantha: 2 ವರ್ಷಗಳ ಬಳಿಕ ವಿಚ್ಛೇಧನದ ಬಗ್ಗೆ ಇನ್ನೊಂದು ಹೇಳಿಕೆ ನೀಡಿದ ಸಮಂತಾ, ಇಷ್ಟು ತಡಮಾಡಿದ್ದು ಯಾಕೆ…?

ವಿವಾಹ ವಿಚ್ಛೇದನದ ಕುರಿತು ನಟಿ ಸಮಂತಾ ಮಹತ್ವದ ಹೇಳಿಕೆ, ಪ್ರೀತಿಸಿ ಮದುವೆ ಆದ ಈ ಜೋಡಿ ದೂರ ಆಗಲು ಕಾರಣ ಇದೇನಾ

Actress Samantha Ruth Prabhu About Divorce: ಚಿತ್ರರಂಗದ ನಟ ಹಾಗು ನಟಿಯ ವೈವಾಹಿಕ ಜೀವನ ಮುರಿದು ಬೀಳುವುದು ಸಹಜ ಆಗಿ ಹೋಗಿದೆ. ಅದರಲ್ಲೂ ಕೆಲವು ಜೋಡಿಗಳು ಬೇರೆ ಆಗಿರುವುದು ಅಭಿಮಾನಿಗಳ ಮನಸ್ಸಿಗೆ ತುಂಬ ಸಂಕಟವನ್ನು ಉಂಟು ಮಾಡಿದೆ ಅಂತಹ ಜೋಡಿಗಳಲ್ಲಿ ಟಾಲಿವುಡ್ ನಟಿ ಸಮಂತಾ (Smanatha Ruth Prabhu) ಹಾಗು ನಟ ನಾಗ ಚೈತನ್ಯ (Naga Cjaitanya) ಜೋಡಿ ಕೂಡ ಒಂದಾಗಿದೆ.

ಅಭಿಮಾನಿಗಳ ನೆಚ್ಚಿನ ಜೋಡಿ ಆಗಿದ್ದ ಈ ಜೋಡಿ ಬೇರೆ ಆಗಿರುವುದು ಜನರಿಗೆ ಇನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ. ಅನೇಕ ಸಿನಿಮಾದಲ್ಲಿ ನಟ ನಟಿಯಾಗಿ ಒಟ್ಟಿಗೆ ಅಭಿನಯಿಸಿದ ಈ ಜೋಡಿ ತಮ್ಮ ನಿಜ ಜೀವನದಲ್ಲಿ ಬೇರೆ ಆಗಿರುವುದು ಬೇಸರದ ಸಂಗತಿಯೇ ಆಗಿದೆ.     

Actress Samantha Ruth Prabhu
Image Credit: Times nownews

 

 

ಪ್ರೀತಿಸಿ ಮದುವೆ ಆದ ನಟ ನಾಗ ಚೈತನ್ಯ ಹಾಗು ನಟಿ ಸಮಂತಾ

ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುವಾಗ Actor Naga Chaitanya And Actress Samantha ನಡುವೆ ಪ್ರೀತಿ ಮೂಡಿದ್ದು, ಹಲವಾರು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದರು. ತುಂಬ ಚೆನ್ನಾಗಿದ್ದ ಈ ಜೋಡಿ ನಡುವೆ ಬಿರುಕು ಬಂದಿದ್ದು, ಮದುವೆ ಆಗಿ ಮೂರನೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಆದರೆ ಇವರು ಒಂದಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ತುಂಬ ಬೇಡಿಕೊಂಡಿದ್ದರು ಆದರೂ ಸಹ ಇವರಿಬ್ಬರು ಬೇರೆ ಆಗಿ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿ ಜೀವನ ನೆಡೆಸುತ್ತಿದ್ದಾರೆ.

ನಾಗ ಚೈತನ್ಯ ಹಾಗು ಸಮಂತಾ ವಿಚ್ಛೇದನ ಪಡೆಯಲು ಕಾರಣ

ಈ ಜೋಡಿ ವಿಚ್ಛೇದನ ಪಡೆಯಲು ಕಾರಣ ಮಯೋಸಿಟಿಸ್ ಮತ್ತು ಸಿನಿಮಾ ಫ್ಲಾಪ್ ಎನ್ನಲಾಗುತ್ತಿದೆ. ಹಾರ್ಪರ್ಸ್ ಬಜಾರ್‌ನೊಂದಿಗೆ ಮಾತನಾಡಿದ ನಟಿ, ಸಮಂತಾ ತನ್ನ ಯಶಸ್ಸು ಮತ್ತು ವೈಫಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತೀರಾ ಎಂದು ಕೇಳಲಾಯಿತು.

Actress Samantha Ruth Prabhu And Actor Naga Chaitanya
Image Credit: Indiaglitz

ಆಗ ಸಮಂತಾ ನನ್ನ ಆರೋಗ್ಯ ಮತ್ತು ಕೆಲಸದ ಮೇಲೆ ಪರಿಣಾಮ ಬೀರಿದಾಗ, ಅದು ತ್ರಿವಳಿ ಹೊಡೆತದಂತಿತ್ತು. ಬೂಮ್, ಬೂಮ್, ಬೂಮ್. ಕಳೆದ ಎರಡು ವರ್ಷಗಳಿಂದ ಸಾಕಷ್ಟು ಅನುಭವಿಸಿದ್ದೇನೆ ಎಂದಿದ್ದಾರೆ. ಆ ಸಮಯದಲ್ಲಿ, ನಾನು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದೆ. ಸಂಕಟಗಳು, ಕಷ್ಟಗಳು, ಕೊರತೆಗಳು ಇರುತ್ತವೆ. ಜನರು ಟ್ರೋಲ್ ಮಾಡಲು ಸಾಧ್ಯವಾದರೆ, ನಾನು ಕೂಡ ಅದನ್ನು ಎದುರಿಸಬಹುದು ಎಂದು ತಿಳಿಯಲು ಇದು ನನಗೆ ಶಕ್ತಿಯನ್ನು ನೀಡಿತು ಎಂದಿದ್ದಾರೆ.

Leave A Reply

Your email address will not be published.