Silk Smitha: ಸಿಲ್ಕ್ ಸ್ಮಿತಾ ಅರ್ಧ ಕಚ್ಚಿದ ಆಪಲ್ ಅಂದು ಹರಾಜಾಗಿದ್ದು ಎಷ್ಟು ಹಣಕ್ಕೆ ಗೊತ್ತಾ..? ನಿಜಕ್ಕೂ ಆಶ್ಚರ್ಯ.

ದುಬಾರಿ ಮೊತ್ತಕ್ಕೆ ಸೇಲ್ ಆಯಿತು ಅಂದು ಸಿಲ್ಕ್ ಸ್ಮಿತಾ ಅರ್ಧ ಕಚ್ಚಿದ ಆಪಲ್.

Actress Silk Smitha Bitten Apple Price: ಸಿಲ್ಕ್​ ಸ್ಮಿತಾ ದಕ್ಷಿಣ ಭಾರತದ ಚಿತ್ರರಂಗವನ್ನು ಒಂದು ಕಾಲದಲ್ಲಿ ಆಳಿದವರಾಗಿದ್ದು, ಬಹಳ ಫೇಮಸ್ ನಟಿ ಆಗಿದ್ದರು ಸುಮಾರು 80 ದಶಕದಲ್ಲಿ ಸಿಲ್ಕ್​ ಸ್ಮಿತಾ (Silk Smitha) ಬಹುಬೇಡಿಕೆಯ ನಟಿಯಾಗಿದ್ದರು. ಹೆಚ್ಚಾಗಿ ಅವರು ಐಟಂ ಸಾಂಗ್​ಗಳಿಗೆ ಸೊಂಟ ಬಳುಕಿಸುತ್ತಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹೊಳೆಯುವ ಕಣ್ಣುಗಳು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು.ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್​ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು.

silk smitha bitten apple price
Image Credit: Filmibeat

ಸಿಲ್ಕ್​ ಸ್ಮಿತಾ ಕಚ್ಚಿದ ಸೇಬು ಹಣ್ಣನ್ನು ಕದ್ದುಕೊಂಡು ಹೋದ ಅಭಿಮಾನಿ

ಇದೀಗ ಸಿಲ್ಕ್​ ಸ್ಮಿತಾ ಅವರ ಕುರಿತಾದ ಇಂಟೆರೆಸ್ಟಿಂಗ್​ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಸಿನಿಮಾವೊಂದರ ಚಿತ್ರೀಕರಣದ ವೇಳೆ ಸಿಲ್ಕ್ ಸ್ಮಿತಾ ಸೇಬು ಹಣ್ಣನ್ನು ಕಚ್ಚಿ ತನ್ನ ಬಳಿ ಇಟ್ಟುಕೊಂಡಿದ್ದರಂತೆ. ಶೂಟಿಂಗ್ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಸೇಬು ಹಣ್ಣು ಕದ್ದು ಓಡಿಹೋದರಂತೆ. ಅದರ ನಂತರ ಅವರು ಸೇಬು ಹಣ್ಣನ್ನು ಸಿಲ್ಕ್​ ಸ್ಮಿತಾ ಅವರು ಕಚ್ಚಿದ ಹಣ್ಣು ಎಂದು ಹರಾಜು ಹಾಕಿದರಂತೆ.

Actress Silk Smitha latest news update
Image Credit: Indiatimes

ಬಹು ನಿರೀಕ್ಷಿತ ಹರಾಜು

ಅಭಿಮಾನಿಯೊಬ್ಬ 2 ರೂಪಾಯಿಗಿಂತಲೂ ಕಡಿಮೆ ಬೆಲೆಯಿದ್ದ ಸೇಬು ಹಣ್ಣನ್ನು ಆ ಕಾಲದಲ್ಲೇ ಹರಾಜಿನಲ್ಲಿ 350 ರೂಪಾಯಿಗೆ ಖರೀದಿ ಮಾಡಿದರಂತೆ ಎಂದು ಹಿರಿಯ ಪತ್ರಕರ್ತ ಸೆಯ್ಯರ್ ಬಾಲು ಎಂಬುವರು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಆಗಿನ ಕಾಲದಲ್ಲಿ 350 ರೂಪಾಯಿ ಅಂದರೆ ಇಂದು 4 ಸಾವಿರ ರೂಪಾಯಿಗೂ ಅಧಿಕವಾಗಿದೆ. ನಟಿ ಸಿಲ್ಕ್ ಸ್ಮಿತಾ ಜೀವನ ಅಷ್ಟು ಸುಲಭ ಇರಲಿಲ್ಲ ಬಹಳ ಏಳುಬೀಳುಗಳನ್ನು ಕಂಡ ನಟಿ ಇವರು ಎಂದು ಹೇಳಲಾಗಿದೆ.

Leave A Reply

Your email address will not be published.