Actress Siri: ಈ ಘಟನೆಯ ಕಾರಣ ನಟಿ ಸಿರಿ ಮದುವೆಯನ್ನ ರಿಜೆಕ್ಟ್ ಮಾಡುತ್ತಿದ್ದಾರೆ, ಅಷ್ಟಕ್ಕೂ ಆ ಘಟನೆ ಏನು…?

ಕಿರುತೆರೆ ನಟಿ ಸಿರಿ ಮದುವೆಯಾಗದೆ ಇರಲು ಕಾರಣ ಈ ಒಂದು ಘಟನೆ.

Actress Siri About Marriage: ಬಿಗ್ ಬಾಸ್ (Bigg Boss) ಮನೆಯಲ್ಲಿ ಹಲವು ಮನಸ್ಥಿತಿಯುಳ್ಳ ಸ್ಪರ್ಧಿಗಳಿದ್ದಾರೆ. ಎಲ್ಲಾರ ಜೀವನದಲ್ಲೂ ಒಂದೊಂದು ಸಮಸ್ಯೆ, ಕಷ್ಟ, ಸುಖಗಳಿವೆ. ಹಾಗೆಯೆ ಈ ಕೆಲ ಎಪಿಸೋಡ್ ನಲ್ಲಿ ಕಿರುತರೆ ನಟಿ ಸಿರಿ ಅವರ ಮನಸ್ಸಿನ ಗೊಂದಲ, ಭಯಗಳನ್ನು ನಾವು ನೋಡಬಹುದಾಗಿದೆ.

ಸ್ವತಃ ಈ ನಟಿಯೇ ತನ್ನ ಕೆಲವು ಕಷ್ಟಗಳ ಬಗ್ಗೆ ತನ್ನ ಸ್ನೇಹಿತರಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ ಕಿರುತರೆಯ ಜನಪ್ರಿಯ ನಟಿ ಆಗಿ ಮಿಂಚಿದ ನಟಿ ಸಿರಿ ಇಷ್ಟು ವರ್ಷಗಳಾದರೂ ಇನ್ನು ಮದುವೆ ಆಗಿಲ್ಲ ಎನ್ನುವ ವಿಷಯವೇ ಹಲವರಿಗೆ ಗೊತ್ತಿರಲಿಲ್ಲ. ಸಿರಿಯವರು ಬಿಗ್ ಬಾಸ್ ಮನೆಯಲ್ಲಿ ಈ ವಿಚಾರ ಹಂಚಿಕೊಂಡಾಗಲೇ ಇವರಿನ್ನು ಮದುವೆ ಆಗಿಲ್ಲ ಅನ್ನುವುದು ಎಲ್ಲರಿಗೂ ತಿಳಿದ್ದಿದ್ದು.

Actress Siri
Image Credit: Publictv

 

ಹಲವು ಧಾರಾಹಿಯಲ್ಲಿ ನಟಿಸಿದ ನಟಿ ಸಿರಿ
ಕನ್ನಡ ಕಿರುತರೆಯಲ್ಲಿ ಹಲವು ಧಾರಾವಾಹಿಯಲ್ಲಿ ಸಿರಿಯವರನ್ನು ನಾವು ಕಾಣಬಹುದಾಗಿದೆ. ಅದರಲ್ಲೂ ರಂಗೋಲಿ ಧಾರಾವಾಹಿ ಇವರಿಗೆ ಇನ್ನಷ್ಟು ಹೆಸರನ್ನು ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹಳ ಸಿಂಪಲ್ ನಟಿ ಇವರಾಗಿದ್ದಾರೆ. ಇಂದಿಗೂ ಕೂಡ ಇವರು ಹಾಗೆ ಇರುವುದನ್ನು ಕಾಣಬಹುದಾಗಿದೆ.

ಇನ್ನು ಮದುವೆ ಆಗದ ನಟಿ
ಕಿರುತರೆ ನಟಿ ಸಿರಿಯವರು ತಾನು ಇನ್ನು ಮದುವೆ ಆಗದೆ ಇರಲು ಕಾರಣವನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ತಾರಾ ಅವರು ಗೆಸ್ಟ್ ಆಗಿ ಬಿಗ್ ಬಾಸ್ ಮನೆಗೆ ಬಂದಾಗ ಸಿರಿಯವರನ್ನು ಮದುವೆ ಬಗ್ಗೆ ವಿಚಾರಿಸಿದ್ದಾಗ ನಾನು ಮದುವೆ ಮಾಡಿಕೊಳ್ಳಲು ಸಿದ್ಧ, ಆದರೆ ಸೂಕ್ತ ವ್ಯಕ್ತಿ ಸಿಕ್ಕಿಲ್ಲ ಎಂದಿದ್ದರು. ಇದೀಗ ಸಿರಿ ಅವರ ಅಕ್ಕ ಈ ವಿಚಾರವಾಗಿ ಮಾತನಾಡಿದ್ದಾರೆ.

Actress Siri Latest News
Image Credit: TV9 Kannada

ಕೆಲವರ ವಯಕ್ತಿಕ ಜೀವನ ಸಿರಿ ಮೇಲೆ ಪರಿಣಾಮ ಬೀರಿದೆ

ಸಿರಿಯವರ ಅಕ್ಕ ಸಿರಿಯವರು ಯಾಕೆ ಮದುವೆ ಆಗಿಲ್ಲ ಎನ್ನುವುದರ ಕುರಿತು ಮಾತನಾಡಿದ್ದಾರೆ. ಬೇರೆಯವರು ನಮ್ಮನ್ನು ಪ್ರಶ್ನೆ ಮಾಡಿದಾಗಲೇ ಮದುವೆ ಮುಖ್ಯ ಅಂತ ಅನಿಸೋಕೆ ಶುರುವಾಗುವುದು. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾಗ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗಲ್ಲ. ಇದೇ ಸಮಯಕ್ಕೆ ಮದುವೆ ಆಗಬೇಕು ಈ ವರ್ಷನೇ ಮದುವೆ ಆಗಬೇಕು ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವೈಯಕ್ತಿಕ ಜೀವನದಲ್ಲಿ ನಾವಿಬ್ಬರು ಸಾಕಷ್ಟು ಕಷ್ಟ ಪಟ್ಟಿದ್ದೇವೆ.

ಇಬ್ಬರೂ ವೈಯಕ್ತಿಕ ಜೀವನದಲ್ಲಿ ನಷ್ಟಗಳನ್ನು ಅನುಭವಿಸಿದ್ದೇವೆ. ಇದೆಲ್ಲ ಸಿರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಸಿರಿ ಒಪ್ಪಿಕೊಳ್ಳುವಂತ ವ್ಯಕ್ತಿ ಇನ್ನೂ ಸಿಕ್ಕಿಲ್ಲ. ಸಿರಿ ಅಕ್ಕ ಆಗಿ ನಾನು ಬೇಗ ಮದುವೆ ಮಾಡಿಕೊಂಡೆ. ಸಿರಿ ನನ್ನ ಜೀವನದಿಂದ ಏನೋ ಕಲಿತಿರಬಹುದು. ಇದೇ ಕಾರಣಕ್ಕೆ ಆಕೆಯ ಮದುವೆಗೆ ತಡ ಮಾಡುತ್ತಿದ್ದಾಳೆ ಎಂದರು. ಸಿರಿ ಕೆಲವರ ಮದುವೆ ಮುರಿದಿರುವುದನ್ನು ನೋಡಿದ್ದಾಳೆ. ನನ್ನ ಜೀವನವೂ ಹೀಗೆಆದರೆ ಏನು ಮಾಡೋದು ಎಂದು ಯೋಚನೆ ಮಾಡಿ ಇನ್ನು ಮದುವೆ ನಿರ್ಧಾರಕ್ಕೆ ಬಂದಿಲ್ಲ ಎಂದರು. ಇನ್ನು ಮುಂದೆ ಸಿರಿಯವರಿಗೆ ಮದುವೆ ವಿಚಾರವಾಗಿ ಆಸಕ್ತಿ ಬರುತ್ತಾ ನೋಡಬೇಕು.

Leave A Reply

Your email address will not be published.