Sridevi death: ನಟಿ ಶ್ರೀದೇವಿ ಅವರದ್ದು ಆಕಸ್ಮಿಕ ಸಾವಲ್ಲ, ಹಲವು ವರ್ಷಗಳ ನಂತರ ಕೇಳಿಬಂತು ಬಹುದೊಡ್ಡ ಆರೋಪ.
ನಟಿ ಶ್ರೀದೇವಿ ಸಾವಿನ ಕುರಿತು ಸತ್ಯ ಬಯಲು, ಈ ನಟಿಯ ಸಾವು ಆಕಸ್ಮಿಕವಲ್ಲ.
Boney Kapoor And Sridevi: ಬಾಲಿವುಡ್ ನಟಿ ,ಅತಿಲೋಕ ಸುಂದರಿ ಶ್ರೀದೇವಿ (Sridevi) ಅವರು ಮರಣ ಹೊಂದಿ ಹಲವು ವರ್ಷಗಳೇ ಕಳೆದಿದ್ದೆ. ಇನ್ನು ಕೂಡ ಅವರ ಸಾವಿನ ಕುರಿತು ಕೆಲವು ಅನುಮಾನಗಳು, ಊಹಾಪೋಹಗಳು ಹರಿದಾಡುತ್ತಿದೆ . ಬಹಳ ಆರೋಗ್ಯವಾಗಿದ್ದ ಈ ನಟಿ 2018 ರಂದು ದುಬೈ ನಲ್ಲಿ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ವಿಷಯ ಕೇಳಿ ಹಲವರಿಗೆ ನಂಬಲು ಅಸಾಧ್ಯ ಆಗಿತ್ತು. ಕೆಲವರು ಬೋನಿ ಕಪೂರ್ ವಿರುದ್ಧವೇ ಅನುಮಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ದುಬೈ ಪೊಲೀಸರು ಶ್ರೀದೇವಿ ಸಾವು ಬಾತ್ ಟಬ್ ನಲ್ಲಿ ಮುಳುಗಿದ್ದರಿಂದಲೇ ಆಗಿದೆ ಎಂದು ಮರಣೋತ್ತರ ವರದಿ ನೀಡಿರೋದಾಗಿ ವರದಿಯಾಗಿತ್ತು.

ಬೋನಿ ಕಪೂರ್ ಸಂದರ್ಶನವೊಂದಲ್ಲಿ ಪತ್ನಿ ಸಾವಿನ ಕುರಿತು ಮಾತನಾಡಿದ್ದರು
ಬೋನಿ ಕಪೂರ್ ಪತ್ನಿಯ ಸಾವಿನ ಬಗ್ಗೆ ಒಂದು ತಿಂಗಳ ಹಿಂದಷ್ಟೇ ಮಾತಾಡಿದ್ದರು. “ಶ್ರೀದೇವಿ ಸಾವು ಸಹಜ ಅಲ್ಲ ಆಕಸ್ಮಿಕ” ಎಂದಿದ್ದರು. ” ಶ್ರೀದೇವಿ ತುಂಬಾ ಡಯೆಟ್ ಮಾಡುತ್ತಿದ್ದರು. ಯಾವಾಗಲೂ ಸುಂದರವಾಗಿ ಕಾಣಬೇಕು ಅನ್ನೋದು ಅವರ ಆಸೆಯಾಗಿತ್ತು. ಅವರು ಕುಸಿದು ಬೀಳುವುದು ಹೊಸದೇನು ಆಗಿರಲಿಲ್ಲ. ಈ ಹಿಂದೆ ಚಿತ್ರೀಕರಣದಲ್ಲಿ ಕುಸಿದು ಬಿದ್ದಿದ್ದನ್ನು ನಟ ನಾಗಾರ್ಜುನಾ ಕೂಡ ತಿಳಿಸಿದ್ದರು.”ಬೋನಿ ಕಪೂರ್ ಸಂದರ್ಶನ ಕೊಟ್ಟ ಬೆನ್ನಲ್ಲೇ ಈಗ ಇನ್ನೊಂದು ಆರೋಪ ಮಾಡಲಾಗಿದೆ.
ದೀಪ್ತಿ ಪಿನ್ನಿಟಿ ಅವರ ತನಿಖೆಯಲ್ಲಿ ಸತ್ಯ ಬಯಲು
ಈ ಹಿಂದೆ ಶ್ರೀದೇವಿ ಸಾವು ಆಕಸ್ಮಿಕವಲ್ಲ. ಅಲ್ಲಿ ನಟಿಯ ಕೊಲೆ ಆಗಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ತಕ್ಕಂತೆ ದೀಪ್ತಿ ಪಿನ್ನಿಟಿ ಅವರು ಒಂದು ಮಾಹಿತಿಯನ್ನು ಹೊರ ಹಾಕಿದ್ದಾರೆ. ಈ ದೀಪ್ತಿ ಪಿನ್ನಿಟಿ ಒಬ್ಬ ಉದ್ಯಮಿ. ಆದರೂ, ಸ್ವಯಂ ಪ್ರೇರಿತರಾಗಿ ಸುಶಾಂತ್ ಸಿಂಗ್ ರಜಪೂತ್ ಹಾಗೂ ಶ್ರೀದೇವಿ ಸಾವಿನ ಬಗ್ಗೆ ಖಾಸಗಿಯಾಗಿ ತನಿಖೆ ಮಾಡುತ್ತಿದ್ದಾರೆ.
ತನಗೆ ತನಿಖಾ ಸಂಸ್ಥೆಯೊಂದಿಗೆ ಸಂಪರ್ಕವಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಸಿಬಿಐಗೆ ಹಾರ್ಡ್ ಡ್ರೈ ನೀಡಿದ್ದಾಗಿ ಮಾಹಿತಿ ಹಂಚಿಕೊಂಡಿದ್ದರು. ಈಗ ಮಾಧ್ಯಮಗಳಲ್ಲಿ ಶ್ರೀದೇವಿ ಸಾವಿನ ಬಗ್ಗೆ ಆಗಿರುವ ವರದಿಗೂ ದುಬೈನಲ್ಲಿ ನಡೆದ ಘಟನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿಕೊಂಡಿದ್ದಾರೆ.

ವಿಷ ಕೊಟ್ಟು ನಟಿ ಶ್ರೀದೇವಿಯವರನ್ನು ಕೊಲ್ಲಲಾಗಿದೆ
ದಿ ಲ್ಯಾಬಿರಿಂತ್ ಅನ್ನೋ ಯೂಟ್ಯೂಬ್ ಚಾನೆಲ್ ಕಳೆದ ಕೆಲವು ದಿನಗಳ ಹಿಂದಷ್ಟೇ ದೀಪ್ತಿ ಪಿನ್ನಿಟಿ ಅನ್ನುವವರ ಸಂದರ್ಶನವನ್ನು ಪೋಸ್ಟ್ ಮಾಡಿದೆ ಅದರಲ್ಲಿ ಶ್ರೀದೇವಿಯನ್ನು ಹಾವಿನ ವಿಷದಿಂದ ಸಾಯಿಸಲಾಗಿದೆ ಎಂದು ದೀಪ್ತಿ ಪಿನ್ನಿಟ್ಟಿ ಹೇಳಿಕೆ ಕೊಟ್ಟಿದ್ದರು.ಈ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ದೀಪ್ತಿ ಪಿನ್ನಿಟಿ ತನಿಖೆಯ ಪ್ರಕಾರ ಶ್ರೀದೇವಿ ಸಾವು ಆಕಸ್ಮಿಕವಲ್ಲ. ಅವರನ್ನು ಮಾಮುಷಿ ಅನ್ನೋ ಡೇಂಜರಸ್ ಹಾವಿನ ವಿಷ ಕೊಟ್ಟು ಸಾಯಿಸಿರೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
“ನಾವು ಸಂಪೂರ್ಣ ತನಿಖೆಯನ್ನು ಮಾಡಿದಾಗ ಶ್ರೀದೇವಿಗೆ ಮಾಮುಷಿ ವಿಷವನ್ನು ಕೊಟ್ಟು ಸಾಯಿಸಿರೋದು ಗಮನಕ್ಕೆ ಬಂದಿದೆ. ಶ್ರೀದೇವಿ ಸಾಯುವುದಕ್ಕೆ 130 ಗಂಟೆಗಳ ಹಿಂದೆನೇ ವಿಷವನ್ನು ನೀಡಲಾಗಿದೆ.ಒರಿಜಿನಲ್ ಪೋಸ್ಟ್ ಮಾರ್ಟಮ್ ಪ್ರಕಾರ, ದುಬೈ ಸಮಯ ಸಂಜೆ 6.30ಕ್ಕೆ ಫೆಬ್ರವರಿ 23, 2018ರಂದೇ ಶ್ರೀದೇವಿ ಸಾವನ್ನಪ್ಪಿದ್ದರು.” ಎಂದು ದೀಪ್ತಿ ಹೇಳಿಕೆ ಕೊಟ್ಟಿದ್ದಾರೆ.
ಇಷ್ಟೇ ಅಲ್ಲದೆ, ” ಶ್ರೀದೇವಿ ಸಾಯುವುದಕ್ಕೆ 5 ದಿನ ಮುನ್ನ ಮುಂಬೈನಲ್ಲೇ ಈ ವಿಷವನ್ನು ನೀಡಲಾಗಿತ್ತು. ಇದು ನಿಧಾನವಾಗಿ ಒಂದೊಂದೇ ಅಂಗವನ್ನು ಡ್ಯಾಮೇಜ್ ಮಾಡಿದೆ. ಈ ವಿಷ ಎಲ್ಲಿಂದ ಬಂದಿದೆ? ಯಾರು ಕೊಟ್ಟಿದ್ದಾರೆ? ಅನ್ನೋದು ಗೊತ್ತಿದೆ. ಅದನ್ನು ಆನ್‌ಲೈನ್‌ನಲ್ಲಿ ರಿವೀಲ್ ಮಾಡುವ ಹಾಗಿಲ್ಲ.” ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ದೀಪ್ತಿ ಪಿನ್ನಿಟಿ ಅವರು ನೀಡಿದ ಮಾಹಿತಿ ಸತ್ಯವೋ ಸುಳ್ಳೋ ಅನ್ನುವುದು ಯಾರಿಗೂ ತಿಳಿದಿಲ್ಲ.