Additional Salary: ರಾಜ್ಯ ಸರ್ಕಾರೀ ನೌಕರರಿಗೆ ದಸರಾ ಹಬ್ಬದ ಗುಡ್ ನ್ಯೂಸ್, ಹೆಚ್ಚುವರಿ ಸಂಬಳ ಘೋಷಣೆ.
ಹೆಚ್ಚುವರಿ ಕರ್ತವ್ಯ ನಿರ್ವಹಿಸಿದ ಸಾರಿಗೆ ಸಿಬ್ಬಂದಿಯವರಿಗೆ ಬಿಗ್ ಆಫರ್.
Additional Salary For Transport Employees: ಸಾರಿಗೆ ನೌಕರರು (Government Employees) ಹಗಲು ರಾತ್ರಿ ಅನ್ನದೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಎಷ್ಟೇ ಜನಸಂದಣಿ ಇದ್ದರು ಅವರನ್ನು ನಿಭಾಯಿಸಿ ತಮ್ಮ ಕೆಲಸ ಮಾಡುತ್ತಾರೆ.
ರಾಷ್ಟ್ರೀಯ ರಜಾ ದಿನ ಮತ್ತು ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಹೆಚ್ಚುವರಿ ವೇತನ ಪಾವತಿ ವ್ಯವಸ್ಥೆ ಮರು ಜಾರಿಗೆ ರಾಜ್ಯ ಸರ್ಕಾರ ಆದೇಶಿಸುತ್ತಿದೆ ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಾರಿಗೆ ನೌಕರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹಬ್ಬ ಹರಿದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ ನೌಕರರಿಗೆ ಹೆಚ್ಚುವರಿ ವೇತನ ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.
ಹೆಚ್ಚುವರಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳು
ಪ್ರಸ್ತುತ ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಹೀಗಾಗಿ ಜುಲೈ 2023ರಿಂದ ರಾಷ್ಟ್ರೀಯ ರಜಾ ದಿನ ಮತ್ತು ನೌಕರರು ಆಯ್ಕೆ ಮಾಡಿಕೊಂಡ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಕೋವಿಡ್ ಪೂರ್ವದಲ್ಲಿದ್ದಂತೆ ಹೆಚ್ಚುವರಿ ವೇತನವನ್ನು ಪಾವತಿಸುವುದಕ್ಕೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸಿಬ್ಬಂದಿ ಕರ್ತವ್ಯದ ಮೇಲೆ ನಿಯೋಜನೆ ಮಾಡಲು ಸೂಚಿಸಲಾಗಿದೆ.
ಹಬ್ಬದ ದಿನವೂ ಕರ್ತವ್ಯಕ್ಕೆ ಹಾಜರಿ
ಈ ತಿಂಗಳು ಒಂದಾದ ಮೇಲೊಂದು ಹಬ್ಬಗಳು ಬಂದಿದ್ದು ಸಾರಿಗೆ ನೌಕರರಿಗೆ ಎಲ್ಲ ದಿನವೂ ಕರ್ತವ್ಯಕ್ಕೆ ಹಾಜರಾಗಬೇಕಿತ್ತು ಯಾಕೆಂದರೆ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣ ಮಾಡುವುದು ಸಹಜ ಹಾಗಾಗಿ ಹೆಚ್ಚುವರಿ ಕೆಲಸ ಮಾಡುವ ಸಂದರ್ಭ ಬಂದಿದ್ದು ಹಬ್ಬಗಳನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ನೀಡುದರ ಮೂಲಕ ರಾಜ್ಯ ಸರ್ಕಾರ ಹೆಚ್ಚುವರಿ ವೇತನ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.