Jio vs Airtel: ಒಂದು ತಿಂಗಳಿಗೆ ಯಾವ ರಿಚಾರ್ಜ್ ಬೆಸ್ಟ್, ಜಿಯೋ ಮತ್ತು ಏರ್ಟೆಲ್ ಗ್ರಾಹಕರಿಗೆ ಇಲ್ಲಿದೆ ಬೆಸ್ಟ್ ರಿಚಾರ್ಜ್.

ಜಿಯೋ ಮತ್ತು ಏರ್ಟೆಲ್ ಗ್ರಾಹಕರಿಗೆ ಕಡಿಮೆ ದರದಲ್ಲಿ ಬಿಗ್ ಆಫರ್.

Airtel And Jio Best Recharge Plan: ಜಿಯೋ ಮತ್ತು ಏರ್‌ಟೆಲ್‌ ಸಿಮ್ ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್. ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಜಿಯೋ (Jio) ಮತ್ತು ಏರ್‌ಟೆಲ್‌ (Airtel) ಸಿಮ್ ಒಂದಕ್ಕೊಂದು ಸ್ಪರ್ಧಿಸಲು ಸಮರ್ಥವಾಗಿವೆ. ಕಳೆದ ತಿಂಗಳಿಂದ 5G ವಿಷಯ ಸಾಕಷ್ಟು ಸುದ್ದಿಯಲ್ಲಿದೆ.

ಅದರಲ್ಲೂ 5G ಪ್ರಾರಂಭದೊಂದಿಗೆ ಜಿಯೋ ಮತ್ತು ಏರ್‌ಟೆಲ್‌ ನಂತಹ ಟೆಲಿಕಾಂ ಕಂಪನಿಗಳು ತಮ್ಮ 5G ಸೇವೆಗಳನ್ನು ಆರಂಭಿಸಿದ್ದು, ಈ ಕಂಪನಿಗಳು ತಮ್ಮ 5G ಸೌಲಭ್ಯಗಳನ್ನು ಭಾರತದ ಅನೇಕ ನಗರಗಳಲ್ಲಿ ಈಗಾಗಲೇ ನೀಡುತ್ತಿವೆ. ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಇತರೆ ಟೆಲಿಕಾಂ ಸಂಸ್ಥೆಗಳಿಗಿಂತ ಭಿನ್ನ ಎನಿಸಿಕೊಂಡಿವೆ. ಈ ನಡುವೆ ಏರ್‌ಟೆಲ್‌ ಹಾಗೂ ಜಿಯೋದಲ್ಲಿ 30 ದಿನಗಳ ಪ್ಲ್ಯಾನ್‌ ಬಹಳ ಜನಪ್ರಿಯತೆ ಪಡೆದುಕೊಂಡಿವೆ.                                   

Airtel And Jio Best Recharge Plan
Image Credit: NDTV                                                                                                                                                                   ಪ್ರತಿದಿನ 1.5GB ಡೇಟಾವನ್ನು ಒದಗಿಸುವ ಏರ್‌ಟೆಲ್ 299 ರೂ.ಗಳ ಪ್ಲ್ಯಾನ್‌

ಏರ್‌ಟೆಲ್ ಪ್ರತಿದಿನ 1.5GB ಡೇಟಾವನ್ನು ಒದಗಿಸುವ ಹಲವಾರು ಪ್ಲ್ಯಾನ್‌ಗಳ ಲಿಸ್ಟ್‌ ಹೊಂದಿದೆ. ಈ ಲಿಸ್ಟ್‌ನಲ್ಲಿರುವ ಅಗ್ಗದ ಯೋಜನೆ ಎಂದರೆ ಅದು 299 ರೂ.ಗಳ ಪ್ಲ್ಯಾನ್‌. ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಇದರಲ್ಲಿ ನೀವು ಅನಿಯಮಿತ ವಾಯ್ಸ್‌ ಕಾಲ್‌ ಮತ್ತು ನಿತ್ಯವೂ 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದು.

ಏರ್‌ಟೆಲ್ 319 ರೂ.ಗಳ ಪ್ಲ್ಯಾನ್‌

ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ನಿತ್ಯವೂ 2GB ಡೇಟಾವನ್ನು ಪಡೆಯಬಹುದಾಗಿದೆ. ಇದು 30 ದಿನಗಳ ಮಾನ್ಯತೆ ಹೊಂದಿದ್ದು, ಇದರೊಂದಿಗೆ, ಬಳಕೆದಾರರು ಅನಿಯಮಿತ ವಾಯ್ಸ್‌ ಕಾಲ್, 100 SMS ಸೌಲಭ್ಯ ಹಾಗೂ ಅಪೊಲೊ 24/7 ಸರ್ಕಲ್‌ನ ಮೂರು ತಿಂಗಳ ಚಂದಾದಾರಿಕೆ ಸಹ ಈ ಪ್ಲ್ಯಾನ್‌ನಲ್ಲಿ ಲಭ್ಯ ಇದೆ.

Jio Best Recharge Plan
Image Credit: 91mobiles

ಏರ್‌ಟೆಲ್ 399 ರೂ.ಗಳ ಪ್ಲ್ಯಾನ್‌                                                                                                                 

ಇನ್ನು ಏರ್‌ಟೆಲ್‌ನ ಮತ್ತೊಂದು ಪ್ಲ್ಯಾನ್‌ ಕಡೆ ಗಮನಹರಿಸುವುದಾದರೆ 399ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು 2.5GB ಡೇಟಾ, ಅನಿಯಮಿತ ವಾಯ್ಸ್‌ ಕಾಲ್‌, 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಸಿಗಲಿದ್ದು, ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. ಇದರೊಂದಿಗೆ ಬಳಕೆದಾರರು ಉಚಿತ ವಿಂಕ್‌ ಮ್ಯೂಸಿಕ್‌, ಹಲೋ ಟ್ಯೂನ್ಸ್, ಮೂರು ತಿಂಗಳ ಅಫೋಲೋ 24/7 ಸರ್ಕಲ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ಮೊಬೈಲ್ ಚಂದಾದಾರಿಕೆ ಸಿಗಲಿದೆ.

ಜಿಯೋ 239ರೂ.ಗಳ ಪ್ಲ್ಯಾನ್‌

ರಿಲಯನ್ಸ್ ಜಿಯೋದ 239ರೂ.ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರು ನಿತ್ಯವೂ 1.5GB ಡೇಟಾವನ್ನು ಬಳಕೆ ಮಾಡಬಹುದಾಗಿದೆ. ಇದು 28 ದಿನಗಳ ಮಾನ್ಯತೆ ಹೊಂದಿದ್ದು, ಸಂಪೂರ್ಣ ಮಾನ್ಯತೆಯ ಅವಧಿಗೆ 42GB ಡೇಟಾವನ್ನು ಈ ಪ್ಲ್ಯಾನ್‌ನಲ್ಲಿ ಸಿಗಲಿದೆ. ಈ ಪ್ಲ್ಯಾನ್‌ನಲ್ಲಿ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗಲಿದೆ. ಇದರೊಂದಿಗೆ ಇಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಮತ್ತು ಜಿಯೋ ಕ್ಲೌಡ್‌ ಗೆ ಪ್ರವೇಶ ಸಹ ಸಿಗಲಿದೆ.

airtel new recharge plan
Image Credit: Medianama

ಜಿಯೋ 299 ರೂ.ಗಳ ಪ್ಲ್ಯಾನ್‌

ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಜಿಯೋ ವಾರ್ಷಿಕೋತ್ಸವ ಹಿನ್ನೆಲೆ 7GB ಹೆಚ್ಚುವರಿ ಡೇಟಾ ಪಡೆದುಕೊಳ್ಳಬಹುದಾಗಿದೆ. ಈ ಪ್ಲ್ಯಾನ್‌ನಲ್ಲಿ ನಿತ್ಯವೂ 2 GB ಡೇಟಾ ಸಿಗಲಿದೆ ಹಾಗೂ ಅನಿಯಮಿತ ಕರೆ ಸೌಲಭ್ಯ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯ ಈ ಪ್ಲ್ಯಾನ್‌ನಲ್ಲಿ ಲಭ್ಯ ಇರಲಿದೆ. ಇದು 28 ದಿನಗಳ ಮಾನ್ಯತೆ ಹೊಂದಿದ್ದು, ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ ಚಂದಾದಾರಿಕೆ ಲಭ್ಯ.

ಜಿಯೋ 399ರೂ.ಗಳ ಪ್ಲ್ಯಾನ್‌

ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆ ಹೊಂದಿದೆ. ಇದರಲ್ಲಿ ಗ್ರಾಹಕರು ಒಟ್ಟಾರೆ 90 GB ಸೌಲಭ್ಯ ಸಿಗಲಿದ್ದು, ಅನಿಯಮಿಯ ಕರೆ ಸೌಲಭ್ಯ ಮತ್ತು 100 ಎಸ್‌ಎಸ್‌ಎಮ್‌ ಪ್ರಯೋಜನ ಸಿಗಲಿದೆ. ಇದರೊಂದಿಗೆ ಜಿಯೋ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.