Airtel Plan: 5 GB ಡೇಟಾ ಮತ್ತು ಅನಿಯಮಿತ ಕರೆ ಜೊತೆಗೆ ಉಚಿತ OTT , Airtel ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಪ್ಲ್ಯಾನ್.
ಏರ್ಟೆಲ್ನ ಈ ಮೂರೂ ವಿಭಿನ್ನ ಪ್ಲಾನ್ ಗಳು ಗ್ರಾಹಕರಿಗೆ ಬಹಳ ಅನುಕೂಕರವಾಗಲಿದೆ.
Airtel Annual Recharge Plans: ಏರ್ಟೆಲ್ (Airtel) ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಾಭದಾಯಕ ಆಫರ್ ಅನ್ನು ಬಿಡುಗಡೆ ಮಾಡುತ್ತಾ ಇರುತ್ತದೆ. ಹಾಗೆಯೆ ಏರ್ಟೆಲ್ ಈಗ 3 ಉತ್ತಮ ವಾರ್ಷಿಕ Recharge Plan ಭಾರಿ ಪ್ರಯೋಜನಗಳೊಂದಿಗೆ ಹೊಂದಿದೆ. ಪದೇ ಪದೇ ರಿಚಾರ್ಜ್ ಮಾಡದೇ ಸಂಪೂರ್ಣ ವರ್ಷದ ಮೌಲ್ಯದ ಮಾನ್ಯತೆಯನ್ನು ಒಟ್ಟಿಗೆ ಪಡೆಯಬಹುದು.
ಇದರೊಂದಿಗೆ ಏರ್ಟೆಲ್ ಬಳಕೆದಾರರು 365 ದಿನಗಳಿಗೆ ಅನ್ಲಿಮಿಟೆಡ್ ಕರೆಯೊಂದಿಗೆ ಡೇಟಾ ಮತ್ತು OTT ಸೇವೇಗಳನ್ನು ಸಹ ಪಡೆಯಬಹುದು. ಈ ಎಲ್ಲಾ 1799, 2999 ಮತ್ತು 3359 ರೂಗಳ ಯೋಜನೆಗಳು ಪರಸ್ಪರ ಸಂಪೂರ್ಣವಾಗಿ ವಿಭಿನ್ನವಾಗಿವೆ. ಈ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಯೋಜನೆಯು ರೂ 1799 ಯೋಜನೆಯಾಗಿದ್ದಾರೆ ಅತ್ಯಂತ ದುಬಾರಿ ಯೋಜನೆ ರೂ 3359 ಯೋಜನೆಯಾಗಿದೆ.

Airtel ರೂ.1799 ಪ್ರಿಪೇಯ್ಡ್ ಪ್ಲಾನ್ ವಿವರ
365 ದಿನಗಳ ಮಾನ್ಯತೆಯೊಂದಿಗೆ ಈ ಏರ್ಟೆಲ್ ರೀಚಾರ್ಜ್ ಯೋಜನೆಯು ಅನಿಯಮಿತ ಕರೆಯೊಂದಿಗೆ ಬರುತ್ತದೆ. 3600 SMS ಗಳ ಕೋಟಾ ಮತ್ತು 24GB ಇಂಟರ್ನೆಟ್ ಡೇಟಾವನ್ನು ನೀಡುತ್ತದೆ. ಡೇಟಾ ಖಾಲಿಯಾದ ಮೇಲೆ 50 ಪೈಸೆ/MB ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚುವರಿಯಾಗಿ ಏರ್ಟೆಲ್ 30 ದಿನಗಳ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆ, ಫಾಸ್ಟ್ಯಾಗ್ ನಲ್ಲಿ ರೂ 100 ಮೌಲ್ಯದ ಕ್ಯಾಶ್ಬ್ಯಾಕ್, ಉಚಿತ ಹಲೋ ಟ್ಯೂನ್ಸ್ ಮತ್ತು ರೂ 1,799 ನೊಂದಿಗೆ ವಿಂಕ್ ಮ್ಯೂಸಿಕ್ ಚಂದಾದಾರಿಕೆಯನ್ನು ನೀಡುತ್ತದೆ.
ರೂ.2999 ಪ್ರಿಪೇಯ್ಡ್ ಪ್ಲಾನ್ ವಿವರ
ಈ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 2GB ಡೇಟಾವನ್ನು ಪಡೆಯುತ್ತಾರೆ ಹಾಗು ಪ್ರತಿದಿನ 100 SMS ಜೊತೆಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯುತ್ತೀರಿ. ಈ ಪ್ಲಾನ್ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ನೀವು Apollo 24|7 Circle, ಉಚಿತ Hellotunes ಮತ್ತು Wynk Music ನ ಪ್ರಯೋಜನವನ್ನು ಪಡೆಯುತ್ತೀರಿ. ಇದರ ಮಾಸಿಕ ವೆಚ್ಚ ಸುಮಾರು 250 ರೂಗಳು ಮಾತ್ರವಾಗಿದೆ.

Airtel ರೂ.3359 ಪ್ರಿಪೇಯ್ಡ್ ಪ್ಲಾನ್ ವಿವರ
ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಏರ್ಟೆಲ್ ರೂ 3359 ಯೋಜನೆಯು 2.5GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಮತ್ತು ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಹೆಚ್ಚುವರಿ ಪ್ರಯೋಜನಗಳಿವೆ. ಅನಿಯಮಿತ 5G ಡೇಟಾ, ಒಂದು ವರ್ಷಕ್ಕೆ ಡಿಸ್ನಿ+ ಹಾಟ್ಸ್ಟಾರ್ ಮೊಬೈಲ್, ಅಪೊಲೊ 24|7 ಸರ್ಕಲ್ ಮೂರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದೆ. ಫಾಸ್ಟ್ಟ್ಯಾಗ್ ನೊಂದಿಗೆ ರೂ 100 ಕ್ಯಾಶ್ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ನಂತಹ ಪ್ರಯೋಜನಗಳು ಉಚಿತವಾಗಿದೆ.