Aishwarya Arjun: ಅರ್ಜುನ್ ಸರ್ಜಾ ಪುತ್ರಿಯ ನಿಶ್ಚಿತಾರ್ಥದ ಉಂಗುರದ ಬೆಲೆ ಎಷ್ಟು ಗೊತ್ತಾ…? ದುಬಾರಿ ಉಂಗುರ.

ಅರ್ಜುನ್ ಸರ್ಜಾ ಪುತ್ರಿಯ ನಿಶ್ಚಿತಾರ್ಥದ ರಿಂಗ್ ಬೆಲೆ ಎಷ್ಟು...?

Aishwarya Arjun Engagement Ring Price: ಬಹುಭಾಷಾ ನಟ ಅರ್ಜುನ ಸರ್ಜಾ (Arjun Sarja) ಅವರ ಮೊದಲ ಪುತ್ರಿ ಐಶ್ವರ್ಯ(Aishwarya) ಅವರು ತಮಿಳು ನಟ ತಂಬಿ ರಾಮಯ್ಯ ಅವರ ಪುತ್ರ, ನಟ ಉಮಾಪತಿ ಅವರೊಂದಿಗೆ ಅರ್ಜುನ್ ಸರ್ಜಾ ಕಟ್ಟಿಸಿರುವ ಆಂಜನೇಯ ಮಂದಿರದಲ್ಲಿ ಬಹಳ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಐಶ್ವರ್ಯಾ ಮತ್ತು ಉಮಾಪತಿ ಜೋಡಿ ಮನೆಯವರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಜೋಡಿ ಬಹಳ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ದಿನಾಂಕವನ್ನು ಈ ಎರಡು ಕುಟುಂಬದವರು ಇನ್ನು ತಿಳಿಸಿಲ್ಲ .

Aishwarya Arjun Engagement Ring
Image Credit: Pinkvilla

ಬಹಳ ಅದ್ದೂರಿಯಾಗಿ ನೆರವೇರಿದ ನಿಶ್ಚಿತಾರ್ಥ

ಅರ್ಜುನ್ ಸರ್ಜಾ ಅವರ ಮಗಳ ನಿಶ್ಚಿತಾರ್ಥಕ್ಕೆ ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ನಿಶ್ಚಿತಾರ್ಥದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಿಶ್ಚಿತಾರ್ಥವನ್ನು ಕವರ್ ಮಾಡಿದ ಕ್ಯಾಮೆರಾಮನ್ ಅದ್ವಿಕ್ ಸುದರ್ಶನನ್, ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥದ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ವಿವರಗಳನ್ನು ನೀಡಿದ್ದಾರೆ. ಮಗಳ ನಿಶ್ಚಿತಾರ್ಥದ ದಿನದಂದು ತಂದೆಯಾಗಿ ಅರ್ಜುನ್ ಸರ್ ತುಂಬಾ ಖುಷಿಯಾಗಿದ್ದು. ನಿಶ್ಚಿತಾರ್ಥಕ್ಕೆ ತಯಾರಿ ನಡೆಸಲು ಬೆಂಗಳೂರಿನಿಂದ ಇವೆಂಟ್ ಮ್ಯಾನೇಜ್‌ಮೆಂಟ್ ತಂಡವನ್ನು ಕರೆಸಲಾಗಿತ್ತು ಎಂದು ಅದ್ವಿಕ್ ಹೇಳಿದ್ದಾರೆ.

Aishwarya Arjun Engagement Ring Price
Image Credit: Koimoi

ದುಬಾರಿ ಉಂಗುರ ತೊಡಿಸಿದ ಐಶ್ವರ್ಯ

ನಿಶ್ಚಿತಾರ್ಥದಲ್ಲಿ ಎಲ್ಲರ ಕಣ್ಣು ಬೀಳುವುದು ಅವರು ತೊಡಿಸುವ ಉಂಗುರದ ಮೇಲೆಯೇ. ಇದೇ ವೇಳೆ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ಧರಿಸಿರುವ ಉಂಗುರದ ಬಗ್ಗೆಯೂ ಅದ್ವಿಕ್ ಮಾತನಾಡಿದ್ದಾರೆ. ಐಶ್ವರ್ಯ ಅವರು ತಮ್ಮ ಭಾವಿ ಪತಿಗೆ ನೀಡಿರುವ ಉಂಗುರ 5 ಕ್ಯಾರೆಟ್ ರಕ್ತ ಮಾಣಿಕ್ಯ ಉಂಗುರವಾಗಿದ್ದು. ಇದನ್ನು ಬರ್ಮಾದಿಂದ ತರಿಸಲಾಗಿದೆಯೆಂತೆ. ಜೊತೆಗೆ ಈ ಉಂಗುರದ ಬೆಲೆ 20 ಲಕ್ಷಕ್ಕೂ ಹೆಚ್ಚು ಎಂದು ವರದಿಯಾಗಿದೆ ಎಂದು ಸಂದರ್ಶನದಲ್ಲಿ ಕ್ಯಾಮೆರಾಮನ್ ಅದ್ವಿಕ್ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.