Aishwarya Rai: ಹಲವು ವರ್ಷಗಳ ನಂತರ ಬಯಲಾಯಿತು ಮದುವೆಗೂ ಮುನ್ನ ಐಶ್ವರ್ಯ ರೈ ಜಾತಕದಲ್ಲಿ ಇದ್ದ ದೋಷ, ಏನದು ಗೊತ್ತಾ…?

ಜಾತಕ ದೋಷದಿಂದ ಬಳಲಿದ ನಟಿ ಐಶ್ವರ್ಯ ರೈ, ದೋಷ ಪರಿಹಾರಕ್ಕೆ ಮಾಡಿದ್ದೇನು...?

Aishwarya Rai And Abhishek Bachchan: ನಟಿ ಐಶ್ವರ್ಯ ರೈ (Aishwarya Rai) ಅವರು ನವೆಂಬರ್ 01 ರಂದು ತನ್ನ 50 ನೇ ವರ್ಷದ ಹುಟ್ಟು ಹಬ್ಬವನ್ನು ಬಹಳ ಅದ್ದೂರಿ ಆಗಿ ಆಚರಿಸಿಕೊಂಡಿದ್ದಾರೆ. ಐಶ್ವರ್ಯ ರೈ ತನ್ನ ಪತಿ ಅಭಿಷೇಕ್ ಬಚ್ಚನ್ ಹಾಗು ಪುತ್ರಿ ಆರಾಧ್ಯ ರೊಂದಿಗೆ ಸುಂದರ ಜೀವನ ನಡೆಸುತ್ತಿದ್ದಾರೆ.

ಐಶ್ವರ್ಯ ರೈ ಹಾಗು ಅಭಿಷೇಕ್ ಬಚ್ಚನ್ (Abhishek Bachchan) ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಏಪ್ರಿಲ್ 20 , 2007 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರು ವಿವಾಹ ಆಗಿ 14 ವರ್ಷಗಳೇ ಕಳೆದಿದೆ . ಆದರೆ ಮದುವೆಗೂ ಮುಂಚೆ ನಟಿ ಐಶ್ವರ್ಯ ಅವರು ಒಂದು ಸಮಸ್ಯೆಯಿಂದ ಬಳಲುತ್ತಿದ್ದು, ಅವರ ವೈವಾಹಿಕ ಜೀವನದ ಬಗ್ಗೆ ಬಹಳ ಭಯ ಹೊಂದಿದ್ದರು.                                                                                        

Aishwarya Rai and abhishek bachchan
Image Credit: India Today

ಜಾತಕ ದೋಷದಿಂದ ಹೊರ ಬಂದ ನಟಿ ಐಶ್ವರ್ಯ ರೈ
ಅಭಿಷೇಕ್ ಬಚ್ಚನ್ ಅನ್ನು ಪ್ರೀತಿಸಿ, ಕುಟುಂಬದವರನ್ನು ಒಪ್ಪಿಸಿ ಮದುವೆ ಆಗಬೇಕು ಅಂದುಕೊಂಡ ಸಂದರ್ಭದಲ್ಲಿ ನಟಿ ಐಶ್ವರ್ಯ ಅವರ ಜಾತಕದಲ್ಲಿ ಕುಜ ದೋಷ ಪ್ರಾರಂಭ ಆಗಿತ್ತು. ಹಾಗಾಗಿ ಜ್ಯೋತಿಷಿಗಳೂ ಈ ದೋಷದವರು ಮದುವೆ ಆದ್ರೆ ವೈವಾಹಿಕ ಜೀವನ ಸುಖಕರ ಆಗಿರುವುದಿಲ್ಲ ಹಾಗು ಬೇಗನೆ ದೂರ ಆಗುವ ಸಂಭವ ಇರುತ್ತದೆ ಎಂದು ಹೇಳಿದ್ದರು ಈ ಕುರಿತು ನಟಿ ಐಶ್ವರ್ಯ ಹಲವು ಪೂಜೆ ಗಳನ್ನೂ ಕೈಗೊಂಡರು.

ಅರಳಿ ಮರಕ್ಕೆ ಮದುವೆ ಆದ ನಟಿ ಐಶ್ವರ್ಯ ರೈ
ಕುಜ ದೋಷ ಇರುವವರು ಅರಳಿ ಮರಕ್ಕೆ ಮದುವೆ ಆಗಬೇಕು ಎಂದು ಜ್ಯೋತಿಷಿಗಳು ಹೇಳಿದ್ದರಿಂದ ಅಮಿತಾಬ್ ಬಚ್ಚನ್ ಹಾಗು ಅವರ ಎಲ್ಲಾ ಕುಟುಂದವರು ಕಾಶಿಗೆ ಹೋಗಿ ಅಲ್ಲಿ ಐಶ್ವರ್ಯ ರೈ ಅವರು ಅರಳಿ ಮರಕ್ಕೆ ವಿವಾಹ ಆಗುವ ಎಲ್ಲಾ ಶಾಸ್ತಗಳನ್ನು ಪೂರೈಸಿ ಬಂದಿದ್ದರು. ಇದನ್ನು ಕುಂಭ ವಿವಾಹ ಎಂದು ಕೂಡ ಕರೆಯಲಾಗುತ್ತದೆ.

Aishwarya Rai Family
Image Credit: Siasat

ಈ ರೀತಿ ಮಾಡುವುದರಿಂದ ಈ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಕೂಡ ಇದೆ. ಇದೆಲ್ಲ ಶಾಸ್ತ್ರ ಮುಗಿದ ನಂತರವೇ ಐಶ್ವರ್ಯ ರೈ ಹಾಗು ಅಭಿಷೇಕ್ ಬಚ್ಚನ್ ವಿವಾಹ ಆಗಿದ್ದರು. 14 ವರ್ಷ ಪೂರೈಸಿದ ಇವರ ವೈವಾಹಿಕ ಜೀವನ ಇನ್ನು ಮುಂದು ಚೆನ್ನಾಗಿರಲಿ ಎಂದು ಹಾರೈಸೋಣ ಹಾಗು ಐಶ್ವರ್ಯ ರೈ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸೋಣ.

Leave A Reply

Your email address will not be published.