Aishwarya Rai: ಮದುವೆಯ ದಿನ ನಟಿ ಐಶ್ವರ್ಯ ರೈ ಧರಿಸಿದ್ದ ಸೀರೆಯ ಬೆಲೆ ಎಷ್ಟು ಗೊತ್ತಾ…? ತುಂಬಾ ದುಬಾರಿ ಸೀರೆ.
ಖ್ಯಾತ ನಟಿ ಐಶ್ವರ್ಯ ರೈ ಅವರು ಮದುವೆಗೆ ಉಟ್ಟಿದ ಸೀರೆಯ ಬೆಲೆ ಕೇಳಿದರೆ ನಂಬಲು ಅಸಾಧ್ಯ.
Aishwarya Rai Wedding Saree: ಭಾರತೀಯ ಚಿತ್ರರಂಗದ ಬಹು ಹೆಮ್ಮೆಯ ನಟಿ ಐಶ್ವರ್ಯ ರೈ (Aishwarya Rai) ಯಾರಿಗೆ ಗೊತ್ತಿಲ್ಲ ಹೇಳಿ. ಈ ನಟಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿ ಆಗಿದ್ದರು , ಬಣ್ಣದ ಲೋಕದಲ್ಲಿ ಅವರಿಗೆ ಎರಡೂವರೆ ದಶಕಕ್ಕೂ ಹೆಚ್ಚು ಅನುಭವ ಇದೆ. ಈ ಪಯಣದಲ್ಲಿ ಅವರು ಸಾಕಷ್ಟು ಯಶಸ್ಸು ಕಂಡರು.
ಇನ್ನು ಕೂಡ ತನ್ನ ನಟನೆಯ ಮೂಲಕ ಅಭಿಮಾನಿಗಳ ಬಳಗವನ್ನು ಹೊಂದಿದವರಾಗಿದ್ದಾರೆ. ಐಶ್ವರ್ಯ ರೈ ಅವರು ಕೋಟಿ ಕೋಟಿ ಸಂಭಾವನೆ ಪಡೆಯುವ ನಟಿ ಆಗಿದ್ದಾರೆ. ಇವರು ಶ್ರೀಮಂತಿಕೆಯ ಮತ್ತು ಸುಂದರವಾದ ಜೀವನವನ್ನು ಪತಿ ಅಭಿಷೇಕ್ ಬಚ್ಚನ್ ಹಾಗು ಪುತ್ರಿ ಆರಾಧ್ಯ ಜೊತೆ ಕಳೆಯುತ್ತಿದ್ದಾರೆ .

ಐಷಾರಾಮಿ ಜೀವನ ಹೊಂದಿರುವ ನಟಿ ಐಶ್ವರ್ಯ ರೈ
ಆರಂಭದಲ್ಲಿ ಐಶ್ವರ್ಯಾ ರೈ ಅವರು 1994ರಲ್ಲಿ ಮಿಸ್ ಇಂಡಿಯಾ ಕಿರೀಟ ಗೆದ್ದರು. 1997ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಬಹುಬೇಡಿಕೆಯ ನಟಿ ಆಗಿದ್ದು ಕೋಟಿ ಕೋಟಿ ಸಂಪಾದನೆ ಮಾಡಲು ಆರಂಭಿಸಿದರು. ಮುಂಬೈನಲ್ಲಿ 21 ಕೋಟಿ ರೂ. ಬೆಲೆಬಾಳುವ ಬಂಗಲೆಯನ್ನು ಅವರು ಹೊಂದಿದ್ದಾರೆ.
7 ಕೋಟಿ ರೂ. ಬೆಲೆಯ ರೋಲ್ಸ್ ರಾಯ್ಸ್ ಕಾರಿಗೂ ಅವರು ಒಡತಿ ಹಾಗು ಜಾಗತಿಕ ಮಟ್ಟದ ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಅದರಿಂದಲೂ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತಿದೆ.ಒಂದು ಮೂಲದ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ 770 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗಿದೆ.
ಬಹಳ ದುಬಾರಿ ಸೀರೆಯಲ್ಲಿ ಮಿಂಚಿದ ನಟಿ ಐಶ್ವರ್ಯ ರೈ
ಐಶ್ವರ್ಯ ರೈ ಅವರು ತನ್ನ ಮದುವೆ ದಿನ ತುಂಬ ದುಬಾರಿ ಆದ ಸೀರೆಯನ್ನು ಉಟ್ಟಿದ್ದರು. ಇವರು ಬಹು ಬೇಡಿಕೆಯ ನಟಿಯಾಗಿದ್ದು, ಸಂಭಾವನೆ ಕೂಡ ಅಷ್ಟೇ ಇತ್ತು ಹಾಗಾಗಿ ಅವರು ಬಹಳ ಅದ್ದೂರಿ ಆಗಿ ವಿವಾಹ ವನ್ನು ಮಾಡಿಕೊಂಡಿದ್ದರು. ಸೆಲೆಬ್ರೆಟಿಗಳ ಮದುವೆ ಅಂದ ಮೇಲೆ ಸೀರೆ ಒಡವೆಗಳು ಸ್ವಲ್ಪ ಮಟ್ಟಿಗೆ ಜಾಸ್ತಿಯೇ ದುಬಾರಿ ಆಗಿರುವುದು ಸಹಜ ಅದೇ ಕಾರಣಕ್ಕಾಗಿ ಅವರ ಮದುವೆ ಸೀರೆ ಬಗ್ಗೆ ಇಂಥ ಇಂತಹ ಹಬ್ಬಿದ್ದು. ಬಾಲಿವುಡ್ನ ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರ ಜೊತೆ ಐಶ್ವರ್ಯಾ ರೈ ಅವರು 2007ರಲ್ಲಿ ಹಸೆಮಣೆ ಏರಿದರು. ಅದಾಗಿ 16 ವರ್ಷ ಕಳೆದರೂ ಕೂಡ ಆ ಗ್ರ್ಯಾಂಡ್ ವಿವಾಹದ ವಿವರಗಳ ಬಗ್ಗೆ ಗಾಸಿಪ್ ಓಡಾಡುತ್ತಲೇ ಇವೆ.

75 ಲಕ್ಷ ರೂಪಾಯಿ ಬೆಲೆ ಬಾಳುವ ಸೀರೆ
ಈಗಾಗಲೇ ವರದಿ ಆಗಿರುವಂತೆ, ಐಶ್ವರ್ಯಾ ರೈ ಅವರು ತಮ್ಮ ಮದುವೆ ದಿನ ಧರಿಸಿದ್ದ ಸೀರೆಯ ಬೆಲೆ ಬರೋಬ್ಬರಿ 75 ಲಕ್ಷ ರೂಪಾಯಿ. ಬಂಗಾರದ ಎಳೆಗಳ ಕಸೂತಿಯಿಂದ ಈ ಸೀರೆ ಮಿರಿಮಿರಿ ಮಿಂಚುತ್ತಿತ್ತು ಅಂತ ಕೂಡ ಸುದ್ದಿ ಆಗಿತ್ತು. ಈ ಬಗ್ಗೆ ಅಧಿಕೃತವಾಗಿ ಅವರ ಕುಟುಂಬದವರು ಯಾರೂ ಮಾತನಾಡಿಲ್ಲ. ಹಾಗಿದ್ದರೂ ಕೂಡ ಆ ಗಾಸಿಪ್ ಈಗಲೂ ಚಾಲ್ತಿಯಲ್ಲಿದೆ.ಈ ಪರಿ ಶ್ರೀಮಂತಿಕೆ ಇರುವ ಅವರು 75 ಲಕ್ಷ ರೂಪಾಯಿ ಬೆಲೆಯ ಸೀರೆ ಧರಿಸಿದ್ದರಲ್ಲಿ ಅಚ್ಚರಿ ಏನಿಲ್ಲ ಎಂದುಕೊಳ್ಳುತ್ತಾರೆ ಅಭಿಮಾನಿಗಳು.
ಮದುವೆಯ ದಿನ ಐಶ್ವರ್ಯಾ ರೈ ಧರಿಸಿದ್ದ ಸೀರೆಯನ್ನು ನೀತಾ ಲುಲ್ಲ ವಿನ್ಯಾಸ ಮಾಡಿದ್ದರು. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಹಸೆಮಣೆ ಏರುವಾಗ ಐಶ್ವರ್ಯಾ ರೈ ಅವರು ಧರಿಸಿದ್ದು ಕಾಂಜಿವರಂ ಸೀರೆ. ಎಷ್ಟೇ ಅದ್ದೂರಿಯಾಗಿ ಇದ್ದರೂ ಕೂಡ ಆ ಸೀರೆಯ ಬೆಲೆ 75 ಲಕ್ಷ ರೂಪಾಯಿ ಆಗಿರಲು ಸಾಧ್ಯವಿಲ್ಲ ಎಂದು ನೀತಾ ಲುಲ್ಲ ಹೇಳಿದ್ದರು. ಹಾಗಿದ್ದರೂ ಕೂಡ ಆ ಸೀರೆಯ ಬೆಲೆ ಎಷ್ಟು ಎಂಬುದನ್ನು ಅವರು ರಿವೀಲ್ ಮಾಡಿಲ್ಲ ಎನ್ನಲಾಗಿದೆ.