Amazon Diwali Offer: ಅಮೆಜಾನ್ ನಲ್ಲಿ ಭರ್ಜರಿ ದೀಪಾವಳಿ ಆಫರ್, 99 ರೂ ಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ವಸ್ತುಗಳು.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ 99 ರೂ ಗಿಂತ ಕಡಿಮೆ ಬೆಲೆಗೆ ಅವಶ್ಯಕ ವಸ್ತುಗಳನ್ನು ಖರೀದಿಸಿ,
Amazon Diwali Offer: ದೀಪಾವಳಿ ಹಬ್ಬದ ಪ್ರಯುಕ್ತ ಇದೀಗ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Great Indian Festival Sale 2023) ನಲ್ಲಿ ಎಲ್ಲಾ ವಸ್ತುಗಳಿಗೂ ವಿಶೇಷ ಆಫರ್ ನೀಡಲಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಆರಂಭ ಆಗಿದ್ದು, ಈ ವರ್ಷದ ಸೇಲ್ ಹಿಂದೆಂದಿಗಿಂತಲೂ ಉತ್ತಮವಾಗಿದೆ.ಈಗಾಗಲೇ ಅಮೆಜಾನ್ ಪ್ರಮುಖ ಇ-ಕಾಮರ್ಸ್ ಸೈಟ್ಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.
ಅದರಲ್ಲೂ ಸ್ಮಾರ್ಟ್ಫೋನ್, ಸ್ಮಾರ್ಟ್ಟಿವಿ (Smartphone, SmartTV) ಸೇರಿದಂತೆ ಅನೇಕ ಸ್ಮಾರ್ಟ್ ಡಿವೈಸ್ಗಳಿಗೆ ಭರ್ಜರಿ ಆಫರ್ಗಳನ್ನು ಘೋಷಣೆ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಗ್ರಾಹಕರಿಗೆ ನಂಬಲಾಗದ ಡಿಸ್ಕೌಂಟ್ (Discount) ಅನ್ನುಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನೀಡಿದ್ದು, ಈ ಸಮಯದಲ್ಲಿ 99 ರೂ. ಅಡಿಯಲ್ಲಿ ನೀವು ಖರೀದಿಸಬಹುದಾದ ಪ್ರೊಡಕ್ಟ್ಗಳ ಲಿಸ್ಟ್ ಇಲ್ಲಿದೆ ನೋಡಿ.

ಲ್ಯಾಪ್ಸ್ಟರ್ 5-ಇನ್-1 ಮಲ್ಟಿ-ಫಂಕ್ಷನ್ ಲ್ಯಾಪ್ಟಾಪ್ ಕ್ಲೀನಿಂಗ್ ಬ್ರಷ್
ಲ್ಯಾಪ್ಸ್ಟರ್ ಮೂಲಕ ಲ್ಯಾಪ್ಟಾಪ್, ಕೀಬೋರ್ಡ್ ಮತ್ತು ಇಯರ್ಫೋನ್ ಗಳನ್ನು ಸ್ವಚ್ಛ ಮಾಡಬಹುದು. ಅಮೆಜಾನ್ನ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ ವಿವರಗಳ ಪ್ರಕಾರ, ಮಲ್ಟಿ-ಫಂಕ್ಷನ್ ಲ್ಯಾಪ್ಟಾಪ್ ಕ್ಲೀನಿಂಗ್ ಬ್ರಷ್ ಅನ್ನು ಕೇವಲ 89 ರೂಗಳಲ್ಲಿ ಲಭ್ಯ ಇದೆ. ಇದರ ಸಾಮಾನ್ಯ ದರ 999 ರೂ.ಗಳಾಗಿದೆ. ಈ ಕ್ಲೀನಿಂಗ್ ಬ್ರಷ್ ಕಿಟ್ನಲ್ಲಿ ಫ್ಲಾಕಿಂಗ್ ಸ್ಪಾಂಜ್, ಹೈ-ಡೆನ್ಸಿಟಿ ಬ್ರಷ್, ಮೆಟಲ್ ಪೆನ್ ಟಿಪ್ ಮತ್ತು ಕೀಕ್ಯಾಪ್ ಪುಲ್ಲರ್, ಡ್ಯುಯಲ್ ಹೆಡ್ ಹಿಡನ್ ಡಿಸೈನ್ ವಸ್ತುಗಳನ್ನು ನೀಡಲಾಗಿದೆ. ಅದರಲ್ಲೂ ಕೀಬೋರ್ಡ್ ಕ್ಲೀನಿಂಗ್ ಕಿಟ್ ಸರಳವಾದ ಕೀ ಪುಲ್ಲರ್ ಅನ್ನು ಸರಳಗೊಳಿಸಿದೆ.
STRIFF ಸ್ಪೈರಲ್ ಕೇಬಲ್ ಪ್ರೊಟೆಕ್ಟರ್ ಕಾರ್ಡ್ ಸೇವರ್
STRIFF ಸ್ಪೈರಲ್ ಕೇಬಲ್ ಪ್ರೊಟೆಕ್ಟರ್ ಕಾರ್ಡ್ ಸೇವರ್ ಅನ್ನು ಫೋನ್ಗಳನ್ನು ಚಾರ್ಜಿಂಗ್ ಮಾಡುವಾಗ ಬಳಕೆ ಮಾಡಬಹುದಾಗಿದೆ. ಬಾಳಿಕೆ ಬರುವ ಫ್ಲೆಕ್ಸಿಬಲ್ ವೈರ್ ವಿಂಡರ್ ಆಯ್ಕೆ ಹೊಂದಿದ್ದು, ಇದನ್ನು ನೀವು 79 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 499 ರೂ.ಗಳಾಗಿದೆ. ಇನ್ನು ಸ್ಪೈರಲ್ ಟ್ಯೂಬ್ ಚಾರ್ಜಿಂಗ್ ಕೇಬಲ್ ಪ್ರೊಟೆಕ್ಟರ್ಗಳನ್ನು ಹೆಚ್ಚು ಹೊಂದಿಕೊಳ್ಳುವ ಸಿಲಿಕೋನ್ನೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಇವುಗಳನ್ನು ಸೆಲ್ ಫೋನ್ಗಳು, ಕಂಪ್ಯೂಟರ್ಗಳು, ಲ್ಯಾಪ್ಟಾಪ್ಗಳು, ಆಪಲ್ ಹಾಗೂ ಆಂಡ್ರಾಯ್ಡ್ ವಾಚ್ಗಳು, ಕೇಬಲ್ಗಳು, ಪಿಸಿಗಳು ಸೇರಿದಂತೆ ಎಲ್ಲಾ ಡಿವೈಸ್ಗಳ ಕೇಬಲ್ಗಳನ್ನು ಸಂಪೂರ್ಣವಾಗಿ ರಕ್ಷಿಸಲು ಹಾಗೂ ಫೋನ್ ಚಾರ್ಜರ್ ಕಾರ್ಡ್ ಪ್ರೊಟೆಕ್ಟರ್ ಮತ್ತು ಫೋನ್ ಚಾರ್ಜರ್ ಸೇವರ್ ಆಗಿಯೂ ಇದನ್ನು ಬಳಕೆ ಮಾಡಬಹುದಾಗಿದೆ.

ELV ವಾಲ್ ಮೌಂಟ್ ಮೊಬೈಲ್ ಹೋಲ್ಡರ್
ಇಂದಿನ ದಿನಗಳಲ್ಲಿ ಫೋನ್ ಹೋಲ್ಡರ್ ಅಗತ್ಯವಾಗಿವೆ. ಇದು ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ಗೆ ಹಾನಿಕಾರಕವಲ್ಲ, ಈ ವಾಲ್ ಫೋನ್ ಹೋಲ್ಡರ್ ಅನ್ನು ಚಾರ್ಜ್ ಮಾಡುವಾಗ ಡಿವೈಸ್ಗಳನ್ನು ಇಡಲು ಅನುಕೂಲವಾಗುವಂತೆ ಗೋಡೆಗೆ ಜೋಡಿಸಲು ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ಗೋಡೆಗೆ ಅಂಟಿಸಿದ ನಂತರ ನಯವಾದ ಮೇಲ್ಮೈಯನ್ನು ಖಚಿತಪಡಿಸಿಕೊಳ್ಳಿ.
ಇದು ಬಲವಾದ ಅಂಟಿಕೊಳ್ಳುವ ಪಟ್ಟಿಗಳೊಂದಿಗೆ ಕಾಣಿಸಿಕೊಂಡಿದ್ದು, ಎಲ್ಲಾ ರೀತಿಯ ಸ್ಮಾರ್ಟ್ ಫೋನ್ ಗಳಿಗೆ ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ಐಫೋನ್, ಮಿನಿ ಟ್ಯಾಬ್ಲೆಟ್ಗೂ ಸೂಕ್ತವಾಗಿದೆ. ಈ ಮೊಬೈಲ್ ಹೋಲ್ಡರ್ಗಳು ಪ್ರಸ್ತುತ 69 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯ ಆಗುತ್ತಿವೆ. ಇದರ ಸಾಮಾನ್ಯ ಬೆಲೆ 299 ರೂ.ಗಳಾಗಿದೆ.