Smart TV: ಸ್ಮಾರ್ಟ್ ಟಿವಿ ಖರೀದಿಸಲು ಇದು ಬೆಸ್ಟ್ ಟೈಮ್, ಟಿವಿ ಮೇಲೆ ಭರ್ಜರಿ 51% ಡಿಸ್ಕೌಂಟ್.
ಸ್ಮಾರ್ಟ್ ಟಿವಿ ಖರೀದಿಸಬೇಕು ಎಂದುಕೊಳ್ಳುವವರಿಗೆ ಇಲ್ಲಿದೆ ಬಿಗ್ ಆಫರ್, ಅಧಿಕ ಡಿಸ್ಕೌಂಟ್ ನಲ್ಲಿ ನಿಮ್ಮ ನೆಚ್ಚಿನ ಟಿವಿ ಖರೀದಿಸಿ.
Amazon Offer On Smart TV: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ದಸರಾ ಹಬ್ಬಕ್ಕೂ ಮುನ್ನವೇ ಶಾಪಿಂಗ್ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ಲಭ್ಯವಿರುವ ಬಜೆಟ್‌ನಲ್ಲಿ ಹಲವು ಗ್ಯಾಜೆಟ್ಸ್‌ಗಳನ್ನು ಖರೀದಿಸುವುದಕ್ಕೆ ಇದು ಅತ್ಯುತ್ತಮ ಸಮಯವಾಗಿದೆ.
ಈ ಸೇಲ್‌ನಲ್ಲಿ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ನಿರೀಕ್ಷೆಗೂ ಮೀರಿದ ಡಿಸ್ಕೌಂಟ್‌ಗಳನ್ನು ನೀಡಲಾಗ್ತಿದೆ. ಇಲ್ಲಿ ರಿಯಾಯಿತಿಗಳ ಜೊತೆಗೆ, ಗ್ರಾಹಕರು ಹೆಚ್ಚುವರಿ ಬ್ಯಾಂಕ್ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಸ್ಮಾರ್ಟ್‌ಟಿವಿಗಳಿಗೂ ಕೂಡ ಬಿಗ್ ಆಫರ್ ಲಭ್ಯವಾಗ್ತಿದೆ. ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ತಿಳಿಯಿರಿ.

ಒನ್‌ಪ್ಲಸ್ 43 Y1S ಪ್ರೊ
ಅತ್ಯುತ್ತಮ ಸ್ಮಾರ್ಟ್‌ಟಿವಿಗಳಲ್ಲಿ ಒಂದೆನಿಸಿಕೊಂಡಿರುವ ಒನ್‌ಪ್ಲಸ್ 43 Y1S ಪ್ರೊ ಟಿವಿ ಅಮೆಜಾನ್‌ನಲ್ಲಿ ಬಿಗ್ ಆಫರ್ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಟಿವಿಯನ್ನು 39,999ರೂ.ಬದಲಿಗೆ ಕೇವಲ 24,999ರೂ ಗಳಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯ ಮೇಲೆ ಬ್ಯಾಂಕ್ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಅಲ್ಟ್ರಾ HD ಡಿಸ್‌ಪ್ಲೇಯನ್ನು ಹೊಂದಿದ್ದು, ಡಾಲ್ಬಿ ಅಟ್ಮಾಸ್ ಧ್ವನಿಯನ್ನು ಬೆಂಬಲಿಸುತ್ತದೆ.

40% ಡಿಸ್ಕೌಂಟ್ ನಲ್ಲಿ ಹಿಸೆನ್ಸ್ 43A4G
ಜನಪ್ರಿಯ ಸ್ಮಾರ್ಟ್‌ಟಿವಿ ತಯಾರತಕ ಹಿಸೆನ್ಸ್ ಸಂಸ್ಥೆಯ ಹಿಸೆನ್ಸ್ 43A4G ಟಿವಿ ಅಮೆಜಾನ್‌ನಲ್ಲಿ 40% ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ ಸ್ಮಾರ್ಟ್‌ಟಿವಿ 34,990ರೂ ಬದಲಿಗೆ 20,990ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಟಿವಿಯು ಹೆಚ್ಚುವರಿ ಬ್ಯಾಂಕ್ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ಪಡೆದಿದೆ. ಈ ಸ್ಮಾರ್ಟ್‌ಟಿವಿಯು 1,920 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದ್ದು, ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತದೆ.

ಅಧಿಕ ರಿಯಾಯಿತಿಯಲ್ಲಿ ಏಸರ್ 43 ಇಂಚಿನ I-ಸರಣಿ
ಏಸರ್ 43 ಇಂಚಿನ I-ಸರಣಿಯು ಕೂಡ ಅಮೆಜಾನ್ ಸೇಲ್‌ನಲ್ಲಿ ಕೇವಲ 22,999ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯ ಮೇಲೆ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆದುಕೊಳ್ಳಬಹುದು.ಇದರಿಂದ ಸ್ಮಾರ್ಟ್‌ಟಿವಿಯ ಬೆಲೆ ಇನ್ನಷ್ಟು ಕಡಿತವಾಗಲಿದೆ.ಇದು ನೀಲಿ ಬೆಳಕಿನ ಕಡಿತ ತಂತ್ರಜ್ಞಾನವನ್ನು ಸಹ ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯು HDR10+ ಬೆಂಬಲ ಮತ್ತು 4K ಅಲ್ಟ್ರಾ HD ರೆಸಲ್ಯೂಶನ್‌ನೊಂದಿಗೆ ಬರುತ್ತದೆ.

47% ಡಿಸ್ಕೌಂಟ್ ನಲ್ಲಿ ಶಿಯೋಮಿ 43-ಇಂಚಿನ X-ಸರಣಿ
ಮೆಟಲ್ ಬಾಡಿ ಮತ್ತು ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಲಭ್ಯವಾಗುವ ಶಿಯೋಮಿ 43 ಇಂಚಿನ X ಸರಣಿ ಕೂಡ ಅಮೆಜಾನ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿಯು 47% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಟಿವಿಯನ್ನು ನೀವು ಕೇವಲ 22,990ರೂ.ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಯು ಡಾಲ್ಬಿ ಆಡಿಯೋ, ಬ್ಲೂಟೂತ್ 5.0 ಸಂಪರ್ಕವನ್ನು ಬೆಂಬಲಿಸುತ್ತದೆ. ಜೊತೆಗೆ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಹೊಂದಿದೆ. ಇದು ಕ್ವಾಡ್-ಕೋರ್ A55 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

51% ಡಿಸ್ಕೌಂಟ್ ನಲ್ಲಿ ರೆಡ್ಮಿ 43-ಇಂಚಿನ ಫೈರ್ ಟಿವಿ F-ಸರಣಿ
ರೆಡ್ಮಿ 43-ಇಂಚಿನ ಫೈರ್ ಟಿವಿ F-ಸರಣಿಯು ಪ್ರಸ್ತುತ ಅಮೆಜಾನ್‌ನಲ್ಲಿ 51% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಟಿವಿ ನಿಮಗೆ ಮೂಲಬೆಲೆ 42,999ರೂ ಬದಲಿಗೆ 20,999ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಟಿವಿ 4K ಅಲ್ಟ್ರಾ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು 3,840 x 2,160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ. ಜೊತೆಗೆ ಇತರ ಸ್ಮಾರ್ಟ್ ಟಿವಿಗಳಂತೆ, ಇದು ಸಹ ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತದೆ.