Smartphone Offer: ಅಮೆಜಾನ್ ನಲ್ಲಿ ಈ 5 ದುಬಾರಿ ಮೊಬೈಲ್ ಮೇಲೆ ಭರ್ಜರಿ ಡಿಸ್ಕೌಂಟ್, ದಾಖಲೆಯ ಮಾರಾಟ
ಭರ್ಜರಿ ಡಿಸ್ಕೌಂಟ್ ನೊಂದಿಗೆ ಅಮೆಜಾನ್ ನಲ್ಲಿ ಈ 05 ಮೊಬೈಲ್ ಅನ್ನು ಖರೀದಿಸಿ
Amazon Great Indian Festival Sale 2023: ನಿಮಗೆ ಬಜೆಟ್ ನಲ್ಲಿ ಮೊಬೈಲ್ ಖರೀದಿಸುವ ಪ್ಲಾನ್ ಇದ್ದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ. ಇಂದಿನ ಪೀಳಿಗೆಯವರು ಸ್ಮಾರ್ಟ್ ಫೋನ್ ಆನ್ ಇಷ್ಟ ಪಡುತ್ತಾರೆ ಅದರಂತೆ ಪ್ರೀಮಿಯಂ ಪೋನ್‌ಗಳಿಗೆ (Premium phone) ಹೆಚ್ಚಿನ ಬೇಡಿಕೆ ಇದ್ದು, ಈ ಫೋನ್‌ಗಳನ್ನು ನೀವು ಈಗ ಅಮೆಜಾನ್‌ನಲ್ಲಿ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್
Amazon Great Indian Festival Sale 2023 ದಿನಗಣನೆ ಆರಂಭ ಆಗಿದೆ. ಈ ಬಹು ನಿರೀಕ್ಷಿತ ಮಾರಾಟವನ್ನು ಅಕ್ಟೋಬರ್ 8, 2023 ರಂದು ನಿಗದಿಪಡಿಸಲಾಗಿದ್ದು, ಪ್ರೈಮ್ ಸದಸ್ಯರಿಗೆ ಈ ಮಾರಾಟವು ಅಕ್ಟೋಬರ್ 7 ರಂದು ಮಧ್ಯರಾತ್ರಿ ಆರಂಭ ಆಗಲಿದೆ. ಈ ನಡುವೆ ನೀವು ಈ ಸೇಲ್‌ನಲ್ಲಿ ನೀವು ಅತ್ಯುತ್ತಮ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದರೆ ಇಲ್ಲಿವೆ ನೋಡಿ.
Samsung Galaxy S23 5G
ಸ್ಯಾಮ್‌ಸಂಗ್ ತನ್ನ ಪ್ರಮುಖ ಗ್ಯಾಲಕ್ಸಿ S23 5G ಸ್ಮಾರ್ಟ್‌ಫೋನ್ ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 120Hz ಡೈನಾಮಿಕ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಈ ಫೋನ್ OIS ಮತ್ತು ಡ್ಯುಯಲ್-ಪಿಕ್ಸೆಲ್ PDAF ಜೊತೆಗೆ 50 MP ಸ್ಯಾಮ್‌ಸಂಗ್ S5KGN3 ಪ್ರಾಥಮಿಕ ಕ್ಯಾಮರಾ, 3x ಆಪ್ಟಿಕಲ್ ಜೂಮ್ ಮತ್ತು OIS ಮತ್ತು PDAF ಬೆಂಬಲದೊಂದಿಗೆ 10 MP ಟೆಲಿಫೋಟೋ ಕ್ಯಾಮರಾ ಮತ್ತು 12 MP ಸೋನಿ IMX564 ಅಲ್ಟ್ರಾವೈಡ್ ಶೂಟರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಫೋನ್ ಸದ್ಯಕ್ಕೆ 74,999 ರೂ. ಬೆಲೆ ಹೊಂದಿದೆ.
IQOO Neo 7 Pro 5G
ಪ್ರೀಮಿಯಂ ವಿಭಾಗದಲ್ಲಿ ಈ ಫೋನ್ ಪ್ರಮುಖವಾಗಿದೆ. ಸದ್ಯಕ್ಕೆ ಈ ಫೋನ್ ಅನ್ನು 34,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.ಈ ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಜೊತೆಗೆ FHD+ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೆ ಆಯ್ಕೆ ಇದರಲ್ಲಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯೊಂದಿಗೆ ಈ ಫೋನ್ ಕಾಣಿಸಿಕೊಂಡಿದೆ. ಅಂದರೆ 50-ಮೆಗಾಪಿಕ್ಸೆಲ್ ಶೂಟರ್, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಆಯ್ಕೆ ಇದರಲ್ಲಿದೆ.
Apple iPhone 13
ಈ ಸ್ಮಾರ್ಟ್‌ಫೋನ್ ಅಂತೂ ಆಗಾಗ್ಗೆ ಆಫರ್ ಬೆಲೆಯಲ್ಲಿ ಲಭ್ಯವಾಗುತ್ತಲೇ ಇದೆ. ಈ ನಡುವೆ ಅಮೆಜಾನ್‌ನ ವಿಶೇಷ ಸೇಲ್‌ನಲ್ಲಿ ಇನ್ನೂ ಹೆಚ್ಚಿನ ಆಫರ್ ಪಡೆಯಲಿದೆ ಎನ್ನಲಾಗಿದೆ. ಜೊತೆಗೆ ಈ ಫೋನ್ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 12MP ವೈಡ್ ಮತ್ತು ಅಲ್ಟ್ರಾ ವೈಡ್ ಕ್ಯಾಮೆರಾಗಳೊಂದಿಗೆ ಡ್ಯುಯಲ್-ಕ್ಯಾಮೆರಾ ಆಯ್ಕೆ ಹೊಂದಿದೆ. ಜೊತೆಗೆ A15 ಬಯೋನಿಕ್ ಚಿಪ್‌ನಿಂದ ಕಾರ್ಯನಿರ್ವಹಿಸಲಿದೆ.ಆದರೆ ಈ ಫೋನ್ ಅನ್ನು ಈವರೆಗೂ ಲಿಸ್ಟ್ ಮಾಡಲಾಗಿಲ್ಲ.
Oneplus 11 5G
ಈ ಫೋನ್ 50MP ಮುಖ್ಯ ಕ್ಯಾಮೆರಾ, 48MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 32MP ಟೆಲಿಫೋಟೋ ಲೆನ್ಸ್ ಅನ್ನು ಆಯ್ಕೆಯನ್ನು ಪಡೆದಿದ್ದು,ಸೆಲ್ಫಿಗಾಗಿ 16MP ಕ್ಯಾಮೆರಾದ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಕ್ಯಾಮೆರಾ ಪ್ರಿಯರ ಅತ್ಯುತ್ತಮ ಆಯ್ಕೆಯಾಗಿದೆ. ಇದರೊಂದಿಗೆ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಪ್ಯಾಕ್ ಆಗಿದ್ದು, 100W ಸೂಪರ್‌ವೋಕ್ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಈ ಫೋನ್ ಅನ್ನು 56,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಮೊಟೊರೊಲಾ ರೇಜರ್ 40 ಅಲ್ಟ್ರಾ
ಫೋಲ್ಡಬಲ್ ಫೋನ್ ಆಗಿರುವ ಇದು 12MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಪ್ಯಾಕ್ ಆಗಿದೆ. ಇದರೊಂದಿಗೆ . ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಆಯ್ಕೆ ಪಡೆದಿದ್ದು, 3800mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದೆ. ಉಳಿದಂತೆ ಅಮೆಜಾನ್‌ನಲ್ಲಿ ಈ ಫೋನ್ 89,999 ರೂ.ಗಳಲ್ಲಿ ಕಾಣಿಸಿಕೊಂಡಿದೆ.