Amitabh Bachchan: ಅಮಿತಾಭ್ ಬಚ್ಚನ್ ಆಸ್ತಿ ಎಷ್ಟು ಕೋಟಿ ರೂಪಾಯಿ…? ಅವರ ಬಳಿ ಎಷ್ಟು ಕಾರುಗಳಿವೆ ಗೊತ್ತಾ…?
ಅಮಿತಾಭ್ ಬಚ್ಚನ್ ಅವರ ಐಷಾರಾಮಿ ಜೀವನ ಹಾಗು ಅವರ ಕಾರು ಕಲೆಕ್ಷನ್ ಬಗ್ಗೆ ತಿಳಿದರೆ ಶಾಕ್ ಆಗುವುದು ಖಚಿತ
Amitabh Bachchan Net Worth: ಅಮಿತಾಭ್ ಬಚ್ಚನ್ (Amitabh Bachan) ಅವರು ಭಾರತ ಕಂಡ ಮಹಾನ್ ಕಲಾವಿದರಲ್ಲಿ ಒಬ್ಬರು. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರಿಗೆ ಇಂದು (ಅಕ್ಟೋಬರ್ 11) 81ನೇ ವರ್ಷದ ಹುಟ್ಟುಹಬ್ಬ.
ಸೋಶಿಯಲ್ ಮೀಡಿಯಾದಲ್ಲಿ ಅಮಿತಾಭ್ಗೆ ಶುಭಾಶಯಗಳು ಬರುತ್ತಿವೆ. ಈ ನಟನಿಗೆ ದೇವರು ಆರೋಗ್ಯ ಹಾಗೂ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಮಿತಾಭ್ ನಟ ಮಾತ್ರನಲ್ಲ. ಅವರು ನಿರ್ಮಾಪಕ, ಹಿನ್ನೆಲೆ ಗಾಯಕ ಹಾಗೂ ಟೆಲಿವಿಷನ್ ಹೋಸ್ಟ್ ಕೂಡ ಹೌದು. ಅವರು ರಾಜಕೀಯದಲ್ಲೂ ಕೆಲ ಕಾಲ ಇದ್ದರು. ಸಿನಿಮಾದಲ್ಲಿ ಹಲವು ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ಅಮಿತಾಭ್ ಬಚ್ಚನ್ ಆರಂಭಿಕ ಜೀವನದ ಸಾರಾಂಶ
ಖ್ಯಾತ ಕವಿ ಹರಿವಂಶ್ ರೈ ಬಚ್ಚನ್ ಹಾಗೂ ಸಾಮಾಜಿಕ ಕಾರ್ಯಕರ್ತೆ ತೇಜಿ ಬಚ್ಚನ್ ಅವರ ಮಗನಾಗಿ ಅಮಿತಾಭ್ ಬಚ್ಚನ್ 1942 ರಲ್ಲಿ ಅಲಹಾಬಾದ್ನಲ್ಲಿ ಜನಿಸಿದರು. ‘ಭುವನ್ ಸೋಮ’ ಅವರು ನಟಿಸಿದ ಮೊದಲ ಸಿನಿಮಾ ಆಗಿದ್ದು ಈ ಸಿನಿಮಾ 1969 ರಲ್ಲಿ ರಿಲೀಜ್ ಆಗಿತ್ತು. ಆ ಬಳಿಕ ‘ಜಂಜೀರ್’, ‘ರೋಟಿ ಕಪಡಾ ಔರ್ ಮಕಾನ್, ‘ದೀವಾರ್’, ‘ಶೋಲೆ’ ಸಿನಿಮಾಗಳಲ್ಲಿ ನಟಿಸಿ ಅವರು ಆಯಂಗ್ರಿ ಯಂಗ್ ಮ್ಯಾನ್ ಎನ್ನುವ ಖ್ಯಾತಿ ಪಡೆದರು.’
ಅಮರ್ ಅಕ್ಬರ್ ಆಯಂಟೋನಿ’ ‘ಡಾನ್’ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದರು . 90ರ ದಶಕದಲ್ಲಿ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆಯಕ್ಟೀವ್ ಆಗಿರಲಿಲ್ಲ. ಇದೇ ವೇಳೆ ಅವರು ಬಿಸ್ನೆಸ್ನಲ್ಲಿ ನಷ್ಟ ಅನುಭವಿಸಿದರು. ಅವರು ಜೀರೋ ಆದರು. 2000 ನೇ ಇಸವಿಯಲ್ಲಿ ರಿಲೀಸ್ ಆದ ‘ಮೊಹಬ್ಬತೇ’ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು. ವೃತ್ತಿ ಜೀವನದಲ್ಲಿ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಿದರು ಎಂದರೂ ತಪ್ಪಾಗಲಾರದು.

ಅಮಿತಾಭ್ ಬಚ್ಚನ್ ಅವರ ಆದಾಯ
ಅಮಿತಾಭ್ ಬಚ್ಚನ್ಅವರ ಮೊದಲ ಸಂಭಾವನೆ 500 ರೂಪಾಯಿ ಆಗಿತ್ತು. ಈಗ ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಹಣ ಪಡೆಯುತ್ತಾರೆ. ಅಮಿತಾಭ್ ಬಚ್ಚನ್ ಅವರು ಪ್ರತಿ ಚಿತ್ರಕ್ಕೆ 6 ಕೋಟಿ ಪಡೆಯುತ್ತಾರೆ. ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಅವರು 10 ಕೋಟಿ ರೂಪಾಯಿ ಪಡೆದಿದ್ದಾರೆ. ಪೋಷಕ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಅವರಿಗೆ ಬೇಡಿಕೆ ಕುಗ್ಗಿಲ್ಲ. ಬ್ರ್ಯಾಂಡ್ ಪ್ರಚಾರಕ್ಕೆ ಅವರು 5-8 ಕೋಟಿ ರೂಪಾಯಿ ಪಡೆಯುತ್ತಾರೆ. ಅಮಿತಾಭ್ ಬಚ್ಚನ್ ಅವರ ಒಟ್ಟೂ ಆಸ್ತಿ 3,190 ಕೋಟಿ ರೂಪಾಯಿ ಆಗಿರುತ್ತದೆ.
ಐಷಾರಾಮಿ ಮನೆ ಹಾಗು ಕಾರುಗಳನ್ನು ಹೊಂದಿರುವ ನಟ
ಅಮಿತಾಭ್ ಬಚ್ಚನ್ ಅವರು ಮುಂಬೈನ ಜಲ್ಸಾದಲ್ಲಿ ಮನೆ ಹೊಂದಿದ್ದಾರೆ. ಇದನ್ನು ನೋಡಲು ಅಭಿಮಾನಿಗಳು ಆಗಮಿಸುತ್ತಾರೆ. ಪ್ರತಿ ವೀಕೆಂಡ್ ಅವರು ಫ್ಯಾನ್ಸ್ನ ಭೇಟಿ ಆಗುತ್ತಾರೆ. ಈ ಬಂಗಲೆ ಮೌಲ್ಯ 112 ಕೋಟಿ ರೂಪಾಯಿ ಹಾಗು ಜುಹು ಮೊದಲಾದ ಕಡೆಗಳಲ್ಲಿ ಅವರು ಬಂಗಲೆ ಹೊಂದಿದ್ದಾರೆ.

ಹಲವು ಪ್ರಾಪರ್ಟಿ, ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ. ಹಾಗು ರೇಂಜ್ ರೋವರ್, ಬೆಂಟ್ಲಿ, ರೋಲ್ಸ್ ರಾಯ್ಸ್ ಪ್ಯಾಂಟಂ ಮೊದಲಾದ ಕಾರಿನ ಕಲೆಕ್ಷನ್ ಇವರ ಬಳಿ ಇದೆ. ಪ್ರೈವೈಟ್ ಜೆಟ್ ಹೊಂದಿರುವ ಇವರು ಹಲವು ಕಡೆಗಳಲ್ಲಿ ಇದರಲ್ಲೇ ಪ್ರಯಾಣಿಸುತ್ತಾರೆ. ಅಮಿತಾಭ್ ಹೊಂದಿರುವ ಜೆಟ್ನ ಬೆಲೆ 260 ಕೋಟಿ ರೂಪಾಯಿ.