Amruthadhare: ಅಮೃತಧಾರೆ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್, ಲಾಯರ್ ತಂದ ವಿಲ್ ನಲ್ಲಿ ಏನಿದೆ…?
ಮನೆಗೆ ಬಂದ ಲಾಯರ್ ಹೇಳಿದ ವಿಲ್ ಯಾವುದು ಮತ್ತು ಅದು ಯಾರಿಗಾಗಿ...?
Amruthadhaare Kannada Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ (Amruthadhare Serial) ಬಹಳಷ್ಟು ಕುತೂಹಲಕಾರಿ ಸಂಚಿಕೆಯನ್ನು ಹೊಂದಿದೆ. ಗೌತಮ್ ದಿವಾನ್ ಹಾಗು ಭೂಮಿಕಾ ಮದುವೆಯ ನಂತರ ಇಬ್ಬರ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಾಣಬಹುದಾಗಿದೆ. ಗೌತಮ್ಅಜ್ಜಿಯ ಬಹುದೊಡ್ಡ ಅಸೆ ಏನೆಂದರೆ ಗೌತಮ್ ಹಾಗು ಭೂಮಿಕಾ ಇಬ್ಬರು ಚೆನ್ನಾಗಿ ಇರಬೇಕು.
ಗೌತಮ್ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವುದು. ಹಾಗಾಗಿ ಗೌತಮ್ ಅಜ್ಜಿ ಹಠ ಮಾಡಿ ಅವರಿಬ್ಬರನ್ನು ಹೊರಗಡೆ ಸುತ್ತಾಡಲು ಕಳುಹಿಸುತ್ತಾರೆ. ಅಜ್ಜಿಯ ಒತ್ತಾಯಕ್ಕಾಗಿ ಹಾಗು ಅವರ ಸಂತೋಷಕ್ಕಾಗಿ ಇಷ್ಟ ಇಲ್ಲದ ಮನಸ್ಸಿನಲ್ಲಿ ಒಬ್ಬರು ಹೊರಗಡೆ ಹೊರಡುತ್ತಾರೆ.

ಏನು ಪ್ಲಾನ್ ಇಲ್ಲದೆ ಸುತ್ತಾಡಲು ಬಂದ ನವಜೋಡಿ
ಗೌತಮ್ ಹಾಗು ಭೂಮಿಕಾ ಇಬ್ಬರು ಕಾರಿನಲ್ಲಿ ಹೊರಡುತ್ತಾರೆ. ಮಧ್ಯ ದಾರಿಗೆ ಬಂದ ಕೂಡಲೇ ಎಲ್ಲಿ ಹೋಗುವ ಎಂದು ಭೂಮಿಕಾ ನ ಬಳಿ ಗೌತಮ್ ಕೇಳುತ್ತಾರೆ. ಆಗ ಭೂಮಿಕಾ ನನಗೇನು ಗೊತ್ತು ನಿಮಗೆ ಗೊತಿಲ್ವಾ ಎಂದು ಕೇಳುತ್ತಾಳೆ. ನಿಜ ಎಲ್ಲಿಗೆ ಹೋಗಬೇಕು ಗೊತ್ತಾಗುತ್ತಿಲ್ಲ ಎಂದಾಗ ಆನಂದ ನನ್ನ ಕೇಳುವುದಾಗಿ ಗೌತಮ್ ಹೇಳುತ್ತಾನೆ ಆಗ ಬೇಡ ಅವನು ಬೇಡದೆ ಇರೋ ಐಡಿಯಾ ನೇ ಕೊಡೋದು ಎಂದು ಸುಮ್ಮನಾಗುತ್ತಾನೆ.
ಆಗ ಭೂಮಿಕಾ ನನಗೊಂದು ಜಾಗ ಗೊತ್ತು ಹಾಗು ಅಲ್ಲಿ ವಾತಾವರಣ ಚೆನ್ನಾಗಿರುತ್ತೆ ಎಂದು ಒಂದು ಕೆಫೆಗೆ ಕರೆದುಕೊಂಡು ಬರುತ್ತಾಳೆ. ಕೆಫೆಯಲ್ಲಿ ಭೂಮಿಕಾಳಿಗೆ ಇಷ್ಟವಾಗುವ ಪುಸ್ತಕಗಳು ಇರುತ್ತವೆ. ಗೌತಮ್‌ಗೆ ತಿನ್ನಲು ರುಚಿ ರುಚಿಯಾದ ತಿನಿಸುಗಳು ಸಿಗುತ್ತವೆ. ಇಬ್ಬರೂ ಕೂಡ ಒಂದು ಸ್ವಲ್ಪವೂ ಬೇಸರ, ಜಗಳ ಮಾಡಿಕೊಳ್ಳದೇ ಕಾಲ ಕಳೆಯುತ್ತಾರೆ.

ಖುಷಿಯಿಂದ ಕಾಲ ಕಳೆದ ಗೌತಮ್ ಹಾಗು ಭೂಮಿಕಾ
ಭೂಮಿಕಾ ಳಿಗೆ ಅವಳ ಇಷ್ಟ ಪುಸ್ತಕ ಸಿಗುತ್ತದೆ ಅದೇನೆಲ್ಲ ನೋಡಿ ತುಂಬ ಖುಷಿ ಪಡುತ್ತಾಳೆ. ಇತ್ತ ಗೌತಮ್‌ಕೆಫೆಯಲ್ಲಿನ ತಿಂಡಿಗಳು ಇಷ್ಟವಾಗುತ್ತದೆ. ಮಂಚೂರಿಯನ್ ಅಂತೂ ಬಹಳ ರುಚಿಯಾಗಿದೆ ಎಂದು ಎರಡೆರಡು ಪ್ಲೇಟ್ ತರಿಸಿಕೊಂಡು ತಿನ್ನುತ್ತಾನೆ. ಇದ್ದಕ್ಕಿದ್ದ ಹಾಗೆಯೇ ಇಲ್ಲಿ ಶೆಫ್ ಯಾರು ಈಗಲೇ ಬನ್ನಿ ಎಂದು ಜೋರಾಗಿ ಕೂಗುತ್ತಾನೆ.
ಸ್ವತಃ ಮ್ಯಾನೇಜರ್ ಬಂದರೂ ಗೌತಮ್ ಒಪ್ಪುವುದಿಲ್ಲ. ಶೇಫ್ ಬರುವವರೆಗೂ ಗಲಾಟೆ ಮಾಡುತ್ತಾನೆ. ಗೌತಮ್ ನಡೆದುಕೊಂಡ ರೀತಿ ಕಂಡು ಭೂಮಿಕಾಳಿಗೆ ಗಾಬರಿಯಾಗುತ್ತದೆ. ಯಾಕಾದರೂ ಇಲ್ಲಿಗೆ ಕರೆದುಕೊಂಡು ಬಂದೆನೋ ಎಂದು ಆತಂಕ ಪಡುತ್ತಾಳೆ.
ಶೇಫ್ ಬಂದಕೂಡಲೇ ಗೌತಮ್ ಆತನನ್ನು ತಬ್ಬಿಕೊಂಡು ಮಂಚೂರಿಯನ್ ಬಹಳ ಟೇಸ್ಟಿಯಾಗಿದೆ. ನನಗೆ ಬಹಳ ಇಷ್ಟ ಆಯ್ತು ಎಂದು ಹೇಳುತ್ತಾನೆ. ಇಲ್ಲಿ ಕೊಡುವ ಸಂಬಳಕ್ಕಿಂತ ಹೆಚ್ಚು ಕೊಡುತ್ತೇನೆ. ನನ್ನ ಮನೆಗೆ ಬಾ ಎಂದು ಕರೆಯುತ್ತಾನೆ. ಇದನ್ನು ನೋಡಿದ ಭೂಮಿಕಾ ಊಟಕ್ಕೊಸ್ಕರ ಗೌತಮ್ ಏನು ಬೇಕಿದ್ದರೂ ಮಾಡುತ್ತಾನೆ ಎಂಬುದನ್ನು ಬಹಳ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾಳೆ.

ಜೀವನ್ ಮನೆಯಲ್ಲಿ ಮಹಿಮಾಳಿಗೆ ಕಿರಿಕಿರಿ
ಜೀವನ್ ಮನೆಯಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಮಹಿಮಳಿಗೆ ಕಷ್ಟ ಆಗುತ್ತಲೇ ಇರುತ್ತದೆ. ಮಹಿಮಾ ಮನೆಗೆ ಎಸಿ ತರಿಸಿಕೊಂಡರೂ ತಪ್ಪು. ರಾತ್ರಿ ಲೇಟ್ ಆಗಿ ಮನೆಗೆ ಬಂದರೂ ತಪ್ಪು, ಬೆಳಗ್ಗೆ ಲೇಟ್ ಆಗಿಯೂ ಏಳುವಂತಿಲ್ಲ. ಕುಡಿಯುವ ಹಾಗಿಲ್ಲ, ಸಿಗರೇಟ್ ಸೇದುವಂತಿಲ್ಲ. ಪ್ರತಿಯೊಂದು ವಿಚಾರಕ್ಕೂ ಜೀವ ಬೇಡ ಬೇಡ ಎನ್ನುತ್ತಿರುತ್ತಾನೆ. ಇದು ನಮ್ಮ ಮನೆ, ಸಂಪ್ರದಾಯ ಅದು ಇದು ಎಂದು ಏನಾದರೂ ಒಂದು ವಿಚಾರವನ್ನು ಹೇಳುತ್ತಲೇ ಇರುತ್ತಾನೆ.
ಇದರಿಂದ ಮಹಿಮಾಳಿಗೆ ಬಹಳ ಹಿಂಸೆಯಾಗುತ್ತಿರುತ್ತದೆ.ಮಹಿಮಾ ಈಗ ಮನೆಗೆ ಚಿಕನ್ ತರಿಸಿಕೊಂಡಿರುತ್ತಾಳೆ. ಇದಕ್ಕೂ ಮನೆಯಲ್ಲಿ ಚರ್ಚೆಯಾಗುತ್ತದೆ. ಆಗ ಮಂದಾಕಿನಿ ಸೊಸೆಯನ್ನು ವಹಿಸಿಕೊಳ್ಳುತ್ತಾಳೆ. ಆದರೆ, ಜೀವಾ, ಮಹಿಮಾ ಜೊತೆ ಇದೆಲ್ಲಾ ಸರಿಯಿಲ್ಲ ಎಂದು ಮತ್ತೆ ಹೇಳುತ್ತಾನೆ. ಮಹಿಮಾ ನನ್ನ ಬಗ್ಗೆ ಗೊತ್ತಿದ್ದು, ನೀನು ಹೀಗೆಲ್ಲಾ ಮಾಡುತ್ತಿದ್ದೀಯಾ? ಯಾಕೆ ಜೀವ ಫ್ರೀಡಂ ಅನ್ನು ಕಿತ್ತುಕೊಳ್ಳುತ್ತಿದ್ದೀಯಾ? ಎಂದು ಪ್ರಶ್ನಿಸುತ್ತಾಳೆ.

ಗೌತಮ್ ಹೆಸರಲ್ಲಿ ತಾತ ಬರೆದ ವಿಲ್
ಗೌತಮ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ಲಾಯರ್ ಬರುತ್ತಾರೆ. ಗೌತಮ್ ತಾತ ಒಂದು ವಿಲ್ ಅನ್ನು ಬರೆದಿದ್ದರು. ಅದನ್ನು ಗೌತಮ್ ಮದುವೆಯಾದ ಬಳಿಕ ತೆರೆಯಬೇಕು ಅಂತಿದೆ. ಹಾಗಾಗಿ ಬಂದೆವು ಎಂದು ಹೇಳುತ್ತಾರೆ. ಆಗ ಅಜ್ಜಿ ಗೌತಮ್ ಭೂಮಿಕಾ ಮನೆಯಲ್ಲಿ ಇಲ್ಲ ಏನು ವಿಲ್ ಎಂದು ಕೇಳುತ್ತಾರೆ.
ಗೌತಮ್ ಹಾಗೂ ಭೂಮಿಕಾ ಮನೆಯಲ್ಲಿ ಇಲ್ಲದ ಕಾರಣ, ವಿಲ್‌ನಲ್ಲಿ ಏನಿದೆ ಎಂದು ಹೇಳುವುದಿಲ್ಲ ಎಂದು ವಕೀಲರು ಹೇಳಿ ಹೊರಡುತ್ತಾರೆ . ಇದು ಶಕುಂತಲಾ ಮನಸ್ಸಲ್ಲಿ ನೂರೆಂಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ವಿಲ್‌ನಲ್ಲಿ ಭೂಮಿಕಾಳಿಗೆ ಆಸ್ತಿ ಸಿಗುತ್ತೆ ಎಂದು ಬರೆದಿರಬಹುದೇ? ಎಂದು ಯೋಚಿಸುತ್ತಿದ್ದಾಳೆ. ಹಾಗಾದರೆ ತಾತನ ವಿಲ್ ಏನಿರಬಹುದು ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.