Amruthadhare: ಸದಾ ಗೌತಮನ ಹಿಂದೆ ಬಿದ್ದು ಕಾಡುತ್ತಿರುವ ಈ ಮಾನ್ಯ ಯಾರು…? ಮದುವೆಯ ದಿನವೇ ಜೈಲಿನಿಂದ ಹೊರಬಂದ ಮಾನ್ಯ.
ಜೈಲಿನಿಂದ ಹೊರ ಬಂದ ಮಾನ್ಯ, ಅಮೃತಧಾರೆ ಧಾರಾವಾಹಿಯಲ್ಲಿ ಇನ್ನೊಂದು ಟ್ವಿಸ್ಟ್.
Amruthadhare Kannada Serial: ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾಗಿರುವ ಅಮೃತಧಾರೆ (Amruthadhare) ಪ್ರತಿದಿನ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಗೌತಮ್ ಹಾಗು ಭೂಮಿಕಾ ಎಂಬ ಎರಡು ಮನಸ್ಸಿನ ಭಾವನೆಗಳ ಜೊತೆ ಪ್ರಾರಂಭವಾದ ಈ ಧಾರಾವಾಹಿ ಇವರಿಬ್ಬರನ್ನು ಒಂದು ಮಾಡುವ ಹಂತಕ್ಕೆ ಬಂದು ನಿಂತಿದೆ.
ಗೌತಮ್ ಹಾಗು ಭೂಮಿಕಾಳ ಮದುವೆ ಎಪಿಸೋಡ್ ನೆಡೆಯುತ್ತಿದ್ದು, ಮದುವೆ ದಿನ ಚೌಟರಿಗೆ ಭೂಮಿಕಾ ಹಾಗು ಅವಳ ಮನೆಯವರು ಬಂದ ನಂತರ, ಗೌತಮ್ ಹಾಗು ಅವರ ಮನೆಯವರು ಚೌಟರಿಗೆ ಬರುತ್ತಾರೆ.
ಸದಾಶಿವ ಹಾಗೂ ಮಂದಾಕಿನಿಗೆ ಬೇಸರ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗು ಅವರ ಮನೆಯವರು ಚೌಟರಿಗೆ ಬಂದ ಕೂಡಲೇ ಕರೆಂಟ್ ಕಟ್ ಆಗುತ್ತದೆ. ಸುಮಾರು ಹೊತ್ತು ಗಂಡಿನ ಕಡೆಯವರು ಕತ್ತಲೆಯಲ್ಲೇ ಇರಬೇಕಾಗುತ್ತದೆ. ಸೆಕೆಯಿಂದ ಎಲ್ಲರೂ ನರಳುತ್ತಿರುತ್ತಾರೆ. ಸದಾಶಿವ ಹಾಗೂ ಮಂದಾಕಿನಿಗೆ ಈ ಪರಿಸ್ಥಿತಿ ಕಂಡು ಮುಜುಗರವಾಗುತ್ತದೆ.
ಗೌತಮ್ ದಿವಾನ್‌ನಂತಹ ದೊಡ್ಡ ಬಿಸಿನೆಸ್ ಮ್ಯಾನ್‌ಗೆ ಒಳ್ಳೆಯ ಆತಿಥ್ಯ ನೀಡಲು ಆಗುತ್ತಿಲ್ಲವಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಸೆಕೆಯಂದರೆ ಆಗದ ಗೌತಮ್ ದಿವಾನ್ ಸೆಕೆಯಲ್ಲಿ ನರಳುವಂತಾಗಿದೆ. ಕರೆಂಟ್ ಇಲ್ಲದೇ ಸೆಕೆ ಆಗುತ್ತಿದ್ದಕ್ಕೆ ಶಕುಂತಲಾ ಹಾಗೂ ಮನೆಯವರಿಗೆಲ್ಲಾ ತುಂಬಾ ಹಿಂಸೆ ಆಗುತ್ತಿರುತ್ತದೆ. ನಮಗೇ ಇಷ್ಟೆಲ್ಲಾ ಕಷ್ಟ ಆಗುತ್ತಿದೆ. ಇನ್ನು ಮದುವೆಗೆ ಬರುವವರಿಗೆ ಹೇಗೆ ಎಂದು ಗಾಬರಿಯಾಗುತ್ತಾರೆ.
ಗೌತಮ್ ಗೆ ನರಳಾಟ
ಗೌತಮ್‌ಗೆ ಎಸಿ ಇಲ್ಲದೇ ಉಸಿರು ಕಟ್ಟುತ್ತಿರುತ್ತದೆ. ಮಂಟಪದಲ್ಲಿ ಕುಳಿತಾಗ ಗೌತಮ್ ಭೂಮಿಕಾ ಬಳಿ ಎಸಿ ಇಲ್ಲದೇ ಕಷ್ಟ ಆಗುತ್ತಿದೆ ಎಂದು ಹೇಳುತ್ತಾನೆ. ಭೂಮಿಕಾ ತನ್ನ ತಂದೆಯನ್ನು ಕರೆದು ಎಸಿ ಸರಿ ಮಾಡುವಂತೆ ಕೇಳುತ್ತಾಳೆ. ಗೌತಮ್ ಎಸಿ ಇಲ್ಲದೇ, ಕೆಂಪಗಾಗಿರುತ್ತಾನೆ. ಹಾಗು ಎಲ್ಲರಿಗೂ ಕೊಡುವ ವೆಲ್ಕಂ ಜ್ಯೂಸ್ ಕೂಡ ಚೆನ್ನಾಗಿರುವುದಿಲ್ಲ. ಆದರೆ, ಆನಂದ್ ಜ್ಯೂಸ್ ಕುಡಿದು ತುಂಬಾ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಾನೆ. ಆಗ ಎಲ್ಲರೂ ಜ್ಯೂಸ್ ಕುಡಿಯುತ್ತಾರೆ.
ಮದುವೆ ಶಾಸ್ತ್ರವನ್ನೇ ಬದಲು ಮಾಡಿದ ಗೌತಮ್ ದಿವಾನ್
ಕಾಶಿಯಾತ್ರೆ ಶಾಸ್ತ್ರ ಮಾಡುವಾಗ ಗೌತಮ್ ಶಾಸ್ತ್ರವನ್ನೇ ಬದಲು ಮಾಡುತ್ತಾನೆ. ಅಂದರೆ, ತನ್ನ ಪಾದಕ್ಕೆ ಹುಡುಗಿಯ ತಂದೆ ಸದಾಶಿವ ಪಾದ ಪೂಜೆ ಮಾಡುವುದು ಬೇಡ. ತಾನೇ ತನ್ನ ಮಾವನ ಪಾದ ಪೂಜೆ ಮಾಡುವುದಾಗಿ ಹೇಳುತ್ತಾನೆ. ಶಾಸ್ತ್ರಗಳನ್ನು ಮನುಷ್ಯರು ತಮಗೆ ಬೇಕಾದಂತೆ ಮಾಡಿಕೊಂಡಿದ್ದು. ಆದರೆ, ಈಗ ಅದನ್ನು ನಮಗೆ ಬೇಕಾದಂತೆ ಮಾಡಿಕೊಳ್ಳೋಣ ಎಂದು ಹೇಳುತ್ತಾನೆ. ಸದಾಶಿವನ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಾನೆ.
ಗೌತಮ್ ದಿವಾನರ ಬೆನ್ನು ಬಿಡದ ಈ ಮಾನ್ಯ ಯಾರು?
ಇತ್ತ ಮಾನ್ಯ ಬೇಲ್ ಮೇಲೆ ಹೊರಗೆ ಬಂದಿದ್ದಾಳೆ. ಹೇಗಾದರೂ ಮಾಡಿ ಗೌತಮ್ ಭೇಟಿ ಮಾಡಬೇಕು. ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಹೇಗಾದರೂ ಮಾಡಿ ಸತ್ಯವನ್ನು ಹೇಳಬೇಕು ಎಂದು ಲಾಯರ್ ಬಳಿ ಹೇಳುತ್ತಾಳೆ. ಆಗ ಲಾಯರ್ ತುಂಬಾ ಟೈಟ್ ಸೆಕ್ಯೂರಿಟಿ ಇದೆ ಎಂದು ಹೇಳುತ್ತಾರೆ.
ಆಗ ಮಾನ್ಯ ಕೊನೆಪಕ್ಷ ಗೌತಮ್ ಮದುವೆಯಾಗುವ ಹುಡುಗಿಯನ್ನಾದರೂ ಭೇಟಿ ಮಾಡುತ್ತೇನೆ. ಈಗಿರುವ ಅವಕಾಶವನ್ನು ಬಳಸಿಕೊಳ್ಳಲೇಬೇಕು. ಇಲ್ಲದೇ ಹೋದರೆ, ಮುಂದೆ ಬಹಳ ಕಷ್ಟ ಆಗುತ್ತದೆ ಎಂದು ಹೇಳುತ್ತಾಳೆ. ಅಲ್ಲಿಗೆ ಮಾನ್ಯ ಭೂಮಿಕಾಳನ್ನು ಯಾವಾಗ ಎಲ್ಲಿ ಭೇಟಿ ಮಾಡುತ್ತಾಳೆ ಎಂಬ ಕುತೂಹಲ ಮೂಡಿದೆ.