Amruthadhare: ಗೌತಮ್ ಮನೆಗೆ ಬಂದ ಭೂಮಿಕಾಗೆ ಎದುರಾಗಿದೆ ಸಂಕಷ್ಟ, ಕಂಡೀಷನ್ ಹಾಕಿದ ಅಜ್ಜಿ.
ಮನೆಗೆ ಬಂದ ಭೂಮಿಕಾ ಮಾತು ಗೌತಮ್ ಗೆ ಕಂಡೀಷನ್ ಹಾಕಿದ ಅಜ್ಜಿ.
Amruthadhare Kannada Serial: ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಗೌತಮ್ ಭೂಮಿಕಾ ಮದುವೆ ನಂತರ ಹೋಟೆಲ್ ನಲ್ಲಿ ಮೊದಲ ರಾತ್ರಿಗೆ ಏರ್ಪಡಿಸಿರುತ್ತಾರೆ. ಗೌತಮ್ ಗೆಳೆಯ ಆನಂದ ಇಬ್ಬರನ್ನು ರೂಮ್ ನಲ್ಲಿ ಬಿಟ್ಟು ಬರಲು ಹರಸಾಹಸ ಪಟ್ಟಿರುತ್ತಾನೆ.
ಭೂಮಿಕಾ ಮತ್ತು ಗೌತಮ್ ಮೊದಲ ರಾತ್ರಿಯನ್ನು ಕಳೆದಿದ್ದಾರೆ. ಮನೆ ತುಂಬಿಸಿಕೊಳ್ಳುವ ಶಾಸ್ತ್ರಕ್ಕೆ ತಯಾರಾಗಿ ಮನೆಗೆ ಹೋಗಿದ್ದಾರೆ. ಭೂಮಿಕಾಳನ್ನು ಆರತಿ ಮಾಡಿ ಸಂಭ್ರಮದಿಂದ ಗೌತಮ್ ಅಜ್ಜಿ ಮನೆ ತುಂಬಿಸಿಕೊಳ್ಳುತ್ತಾರೆ. ಭುಮಿಕಾ ಭಯದಿಂದಲೇ ಸೇರನ್ನು ಒದ್ದು ಒಳಗೆ ಬರುತ್ತಾಳೆ.
ಭೂಮಿಕಾ-ಗೌತಮ್ ಸಮಬಾಳ್ವೆ
ಮನೆಗೆ ಬಂದ ಮೇಲೆ ಶಾಸ್ತ್ರದ ಹೆಸರಲ್ಲಿ ಭೂಮಿಕಾ ಹಾಗೂ ಗೌತಮ್ ಅನ್ನು ಆಟವಾಡಿಸುತ್ತಾರೆ. ಬಿಂದಿಗೆಯಲ್ಲಿ ಉಂಗುರ ಹಾಕಿ ಇಬ್ಬರನ್ನೂ ಹುಡುಕಲು ಹೇಳುತ್ತಾರೆ. ಇಬ್ಬರೂ ಬಹಳ ಸಮಯ ಉಂಗುರ ಹುಡುಕುತ್ತಾರೆ. ಕೊನೆಯಲ್ಲಿ ಇಬ್ಬರೂ ಒಟ್ಟಿಗೆ ಉಂಗುರವನ್ನು ಆಚೆ ತೆಗೆಯುತ್ತಾರೆ.
ಆಗ ಅಜ್ಜಿ ನೀವಿಬ್ಬರೂ ಗೆದ್ದಿದ್ದೀರಾ. ಇಬ್ಬರು ಮನೆಯನ್ನು ಒಟ್ಟಿಗೆ ತೂಗಿಸಿಕೊಂಡು ಹೋಗಿ ಎಂದು ಹೇಳುತ್ತಾಳೆ. ಸಮಬಾಳ್ವೆಯನ್ನು ಮಾಡಿ ಎಂದು ಆಶೀರ್ವದಿಸುತ್ತಾರೆ. ಇನ್ನು ಆನಂದ್, ಗೌತಮ್ ಬಳಿ ಫಸ್ಟ್ ನೈಟ್ ಹೇಗಿತ್ತು ಎಂದು ಕೇಳಿದಾಗ, ಗೌತಮ್ ಕೇಕ್ ಬಗ್ಗೆ ಹೇಳುತ್ತಿರುತ್ತಾನೆ. ಇದರಿಂದ ಆನಂದ್‌ಗೆ ನಿರಾಸೆ ಆಗುತ್ತದೆ.
ಭೂಮಿಕಾಳಿಗೆ ಅಜ್ಜಿಯ ಕ್ಲಾಸ್
ಅಜ್ಜಿ, ಭೂಮಿಕಾಳನ್ನು ಏ ಬಾ ಇಲ್ಲಿ ಎಂದು ಕರೆದು ಗೌತಮ್‌ನನ್ನು ಕರೆಯಲು ಹೇಳುತ್ತಾರೆ. ಭೂಮಿಕಾ, ಗೌತಮ್ ಅವರೇ ಅಜ್ಜಿ ಕರೆಯುತ್ತಿದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಅಜ್ಜಿ ಭೂಮಿಕಾಳನ್ನು ಹೊರಗೆ ಕರೆದು ಬುದ್ದಿ ಹೇಳುತ್ತಾರೆ. ತಾವು ಹೇಳಿದಂತೆ ಕೇಳಬೇಕು ಎಂದು ಹೇಳಿ, ಎರಡು ವ್ರತಗಳನ್ನು ತಪ್ಪದೇ ಪಾಲಿಸು ಎಂದು ಹೇಳುತ್ತಾರೆ.
ಮೊದಲನೆಯದು ಗೌತಮ್‌ನ ಗೌರವ ಕೊಟ್ಟು ಮಾತನಾಡಿಸಬೇಕು. ಎರಡನೇಯದು ಈ ಮನೆಯಲ್ಲಿ ಕೆಲಸ ಮಾಡಲು ಆಳುಗಳಿದ್ದು, ಭೂಮಿಕಾ ನಿತ್ಯ ದೇವರ ದೀಪ ಮಾತ್ರ ಹಚ್ಚಬೇಕು. ಇನ್ಯಾವ ಕೆಲಸವನ್ನು ಮಾಡಬಾರದು ಎಂದು ಹೇಳುತ್ತಾಳೆ. ಅಜ್ಜಿ ಮಾತಿಗೆ ಭೂಮಿಕಾ ಕೂಡ ಹ್ಞೂಂ ಎಂದು ಹೇಳುತ್ತಾಳೆ.
ಜೀವನ್ ಮಾತು ಕೇಳದ ಮಹಿಮಾ
ಇತ್ತ ಮಹಿಮಾ ಫ್ರೆಂಡ್ಸ್ ಜೊತೆಗೆ ಪಾರ್ಟಿ ಮಾಡಲು ಹನಿಮೂನ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಂದಿರುತ್ತಾಳೆ. ಆದರೆ, ಜೀವ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಸಲು ತನ್ನ ಮನೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿರುತ್ತಾನೆ. ಜೀವನ್ ಮನೆಯಲ್ಲೂ ಕೂಡ ಮಹಿಮಾಳನ್ನು ಮನೆ ತುಂಬಿಸಿಕೊಳ್ಳಲು ತುದಿ ಕಾಲಲ್ಲಿ ನಿಂತಿರುತ್ತಾರೆ. ಆದರೆ, ಮಹಿಮಾ ಅಣ್ಣನ ಮನೆಗೆ ಹೋಗೋಣ ಎಂದು ಹಠ ಮಾಡಿ ಕರೆದುಕೊಂಡು ಹೋಗುತ್ತಾಳೆ. ಮಹಿಮಾಳ ಜೊತೆಗೆ ಹೊಂದಿಕೊಂಡು ಹೋಗಬೇಕು ಎಂದು ಜೀವನ್ ಮಹಿಮಾಳ ಆಸೆಗಳಿಗೆಲ್ಲಾ ತಲೆ ತೂಗುತ್ತಿರುತ್ತಾನೆ.
ಒಟ್ಟಿಗೆ ಊಟ ಮಾಡಿದ ಮನೆಯವರು
ಮನೆಯಲ್ಲಿ ಎಲ್ಲರೂ ಮಹಿಮಾಳನ್ನು ನೋಡಿ ಖುಷಿ ಪಡುತ್ತಾರೆ. ಜೀವ ಕೂಡ ಅಕ್ಕ ಭೂಮಿಕಾ ಬಳಿ ಹೋಗಿ ತಬ್ಬಿಕೊಂಡು ಮಾತನಾಡುತ್ತಾರೆ. ಜೀವ ಬಂದಿದ್ದು ಭೂಮಿಕಾಳಿಗೆ ಬಹಳ ಖುಷಿಯಾಗುತ್ತದೆ. ಅಜ್ಜಿ ಅಣ್ಣನ ಮದುವೆ ಬಿಟ್ಟು, ನಡೆಯಬೇಕಿದ್ದ ಶಾಸ್ತ್ರಗಳನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಕ್ಕೆ ಬೈಯುತ್ತಿರುತ್ತಾರೆ. ಎಲ್ಲರೂ ಒಟ್ಟಿಗೆ ಊಟ ಮಾಡೋಣ ಎಂದು ಅಜ್ಜಿ ಹೇಳುತ್ತಾರೆ. ಅಜ್ಜಿ ಸೊಸೆಯನ್ನು ಮನೆಗೆ ತುಂಬಿಸಿಕೊಂಡ ದಿನ ಎಂದು ಮನೆಯಲ್ಲಿ ಸಿಹಿ ಅಡುಗೆಯನ್ನು ಮಾಡಿಸಿರುತ್ತಾರೆ. ಆದರೆ, ಮಹಿಮಾ ನಾನ್ ವೆಜ್ ಬೇಕು ಎಂದು ಕೇಳುತ್ತಾಳೆ. ಅಜ್ಜಿ ಆಗಲೂ ಮಹಿಮಾಳಿಗೆ ಬೈಯುತ್ತಾರೆ.