Android phones: ಆಂಡ್ರಾಯ್ಡ್ ಫೋನ್ ಬಳಸುವವರು ತಪ್ಪದೆ ಈ ಕೆಲಸ ಮಾಡಿ, ಸರ್ಕಾರದಿಂದ ಎಚ್ಚರಿಕೆ.

ಆಂಡ್ರಾಯ್ಡ್ ಫೋನ್ ಬಳಸುವವರಿಗೆ ಸರ್ಕಾರದಿಂದ ಎಚ್ಚರಿಕೆ.

Android Update: ಭಾರತದಲ್ಲಿ ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರುವ ಆಂಡ್ರಾಯ್ಡ್‌ ಫೋನ್‌ ಗಳಲ್ಲಿ (Android Phone) ಹೆಚ್ಚಿನ ಅಪಾಯದ ದೋಷಗಳನ್ನು ಸರ್ಕಾರ ಪತ್ತೆ ಮಾಡಿದೆ. ಹಾಗೆಯೇ ಪತ್ತೆ ಮಾಡಲಾದ ಆಂಡ್ರಾಯ್ಡ್‌ ಅಪಾಯಗಳು ಭಾರತದಲ್ಲಿನ ಲಕ್ಷಾಂತರ ಬಳಕೆದಾರರ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿಸಲಾಗಿದೆ. ಹಾಗಿದ್ರೆ, ಏನಿದು ಅಪಾಯ?, ಆಂಡ್ರಾಯ್ಡ್‌ ಬಳಕೆದಾರರು ಏನು ಮಾಡಬೇಕು, ಭಾರತದಲ್ಲಿ ಆಂಡ್ರಾಯ್ಡ್‌ ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿಯೇ ಇದೆ.

ಈ ನಡುವೆ ಪ್ರಮುಖ ಕಂಪನಿಗಳು ವಿವಿಧ ಸುಧಾರಿತ ಫೀಚರ್ಸ್‌ ನೊಂದಿಗೆ ಹೊಸ ಹೊಸ ಫೋನ್‌ ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಇವುಗಳನ್ನು ಖರೀದಿ ಮಾಡುವವರ ಸಂಖ್ಯೆ ಸಹ ಹೆಚ್ಚುತ್ತಲೇ ಇದೆ.ಆದರೆ, ಈ ನಡುವೆ ಶಾಕಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.

android phones update
Image Credit: Androidauthority

ದೇಶದಲ್ಲಿ ಭದ್ರತಾ ಎಚ್ಚರಿಕಾ ಕ್ರಮ
ERT-In ಭಾರತದಲ್ಲಿನ ಆಂಡ್ರಾಯ್ಡ್‌ ಫೋನ್ ಬಳಕೆದಾರರಿಗೆ ಈ ದೊಡ್ಡ ಭದ್ರತಾ ಅಪಾಯದ ಎಚ್ಚರಿಕೆಯನ್ನು ನೀಡಲಾಗಿದ್ದು, ಈ ದೋಷಗಳು ಕಡಿಮೆಯಾಗದಿದ್ದರೆ ದಾಳಿಕೋರರು ಫೋನ್‌ಗೆ ಸುಲಭ ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ. ಈ ಸಂಬಂಧ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿಗಳನ್ನು ಉಲ್ಲೇಖ ಮಾಡಿದೆ. ಇದರೊಂದಿಗೆ ಪ್ಲೇ ಸ್ಟೋರ್ ಮೂಲಕ ನೇರವಾಗಿ ಆಪ್‌ಗಳನ್ನು ನವೀಕರಿಸುವುದೊಂದೇ ಪರಿಹಾರವಾಗಿದೆ ಎಂದು ಹೇಳಲಾಗಿದೆ.

ಇನ್ನು ಆಂಡ್ರಾಯ್ಡ್ 11, ಆಂಡ್ರಾಯ್ಡ್ 12 ಮತ್ತು ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ ಗಳನ್ನು ಹೊಂದಿರುವ ಬಳಕೆದಾರರ ಮೇಲೆ ಈ ದೋಷಗಳು ಹೆಚ್ಚಾಗಿ ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ. ಜೊತೆಗೆ ಈ ಅಪಾಯದ ಪ್ರಮಾಣವು ದೊಡ್ಡದಾಗಿರಬಹುದು ಎಂದೂ ಸಹ ಹೇಳಲಾಗುತ್ತಿದೆ.

Android phones latest news update
Image Credit: Irishtimes

CERT ಎಚ್ಚರಿಕೆಯ ಸಂದೇಶ
ಆಂಡ್ರಾಯ್ಡ್‌ನಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿದೆ, ಇದು ಆಕ್ರಮಣಕಾರರಿಗೆ ಉನ್ನತ ಸವಲತ್ತುಗಳನ್ನು ಪಡೆಯಲು, ಸೂಕ್ಷ್ಮ ಮಾಹಿತಿಯನ್ನು ಪಡೆಯಲು, ರಿಮೋಟ್ ಕೋಡ್ ಅನ್ನು ಕಾರ್ಯಗತಗೊಳಿಸಲು ಅಥವಾ ಸೇವಾ ಪರಿಸ್ಥಿತಿಗಳ ನಿರಾಕರಣೆಗೆ ಕಾರಣವಾಗಬಹುದು’ ಎಂದು ತಿಳಿಸಲಾಗಿದೆ.

ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್, ಕ್ವಾಲ್ಕಾಮ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಘಟಕಗಳಲ್ಲಿನ ದೋಷಗಳಿಂದಾಗಿ ಆಂಡ್ರಾಯ್ಡ್‌ನಲ್ಲಿ ಬಹು ದೋಷಗಳು ಈಗ ಸ್ಕ್ಯಾಮರ್‌ಗಳಿಗೆ ಸುಲಭ ಹಾದಿ ಮಾಡಿಕೊಡಲಿವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ದುರ್ಬಲತೆಗಳನ್ನೇ ಬಳಕೆ ಮಾಡಿಕೊಂಡು ಆಕ್ರಮಣಕಾರರು ತಮಗೆ ಬೇಕಾದದ್ದನ್ನು ಈಡೇರಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.

Android phones latest news update
Image Credit: Datalyst

ಯಾರಿಗೆಲ್ಲಾ ಈ ಸಮಸ್ಯೆ ಇದೆ ?
ಮೊದಲೇ ತಿಳಿಸಿದಂತೆ ಆಂಡ್ರಾಯ್ಡ್ 11, ಆಂಡ್ರಾಯ್ಡ್ 12 ಮತ್ತು ಆಂಡ್ರಾಯ್ಡ್ 13 ಓಎಸ್‌ ಹೊಂದಿರುವ ಎಲ್ಲಾ ಫೋನ್‌ಬಳಕೆದಾರರು ಈ ಸಮಸ್ಯೆಗಳಿಂದ ಹೊರತಲ್ಲ. ಹೀಗಾಗಿ ಈ ಅಪಾಯವು ಭಾರತದಲ್ಲಿನ ಮಿಲಿಯನ್‌ ಗಟ್ಟಲೆ ಬಳಕೆದಾರರ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ. ಸ್ಟ್ಯಾಟಿಸ್ಟಾ ಪ್ರಕಾರ ಆಂಡ್ರಾಯ್ಡ್ 2022 ರಲ್ಲಿ ಭಾರತದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮಾರುಕಟ್ಟೆಯಲ್ಲಿ ಶೇಕಡಾ 95.26 ರಷ್ಟು ಪಾಲನ್ನು ಹೊಂದಿತ್ತು.

ಇದರಿಂದ ಪಾರಾಗುವ ವಿಧಾನ
ಫೋನ್ ಅನ್ನು ಅಪ್ಡೇಟ್ ಮಾಡುದರ ಮೂಲಕ ಭದ್ರವಾಗಿರಿಸಿಕೊಳ್ಳಬಹುದು. ಅಂದರೆ ಫೋನ್‌ನಲ್ಲಿರುವ ಎಲ್ಲಾ ಆಪ್‌ಗಳು ಇತ್ತೀಚಿನ ಆವೃತ್ತಿಯಲ್ಲಿ ರನ್‌ ಆಗಬೇಕು. ಯಾವುದೇ ಬಾಕಿ ಉಳಿದಿರುವ ಓಎಸ್ ನವೀಕರಣಗಳು ಇದ್ದಲ್ಲಿ ಅದನ್ನು ಈಗಲೇ ಪರಿಶೀಲಿಸಿ. ಲಭ್ಯವಿರುವ ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸುವ ಹಂತಗಳು ವಿಭಿನ್ನ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸ್ವಲ್ಪ ಬದಲಾಗಬಹುದು.

Leave A Reply

Your email address will not be published.