Anna Bhagya: ಈ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಬಂದಿದೆಯಾ…? ಈ ರೀತಿಯಲ್ಲಿ ಚೆಕ್ ಮಾಡಿ.
ಅನ್ನಭಾಗ್ಯ ಯೋಜನೆಯಡಿ ಬರಬೇಕಾದ ಹಣ ನಿಮ್ಮ ಖಾತೆಗೆ ಬಂದಿದಿಯೋ , ಇಲ್ಲವೋ ಎಂದು ಈ ರೀತಿಯಾಗಿ ತಿಳಿಯಿರಿ.
Anna Bhagya DBT Status Check: ರಾಜ್ಯ ಸರ್ಕಾರದ 05 ಗ್ಯಾರೆಂಟಿ ಯೋಜನೆಯಲ್ಲಿ ಅನ್ನಭಾಗ್ಯ (Anna Bhagya) ಯೋಜನೆ ಕೂಡ ಒಂದಾಗಿದೆ. ಈ ಯೋಜನೆ ಪ್ರಾರಂಭ ವಾಗಿ 02 ತಿಂಗಳುಗಳಾಗಿವೆ. ಲಕ್ಷಾಂತರ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಸದ್ಯ ಪಡಿತರರ ಖಾತೆಗೆ ಸೆಪ್ಟೆಂಬರ್ ತಿಂಗಳ ಹಣ ವರ್ಗಾವಣೆಯಾಗಿದೆ.ಆದರೆ ಕೆಲ ಕುಟುಂಬಗಳು ಇನ್ನು ಈ ಯೋಜನೆಯಡಿ ಯಾವುದೇ ಸೌಲತ್ತು ಪಡೆದಿಲ್ಲ ಎನ್ನಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯಿಂದ ಹೊರಗುಳಿದ ಕುಟುಂಬಗಳು
ಹಲವು ಕುಟುಂಬಗಳು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಾಗಿ ಹಣ ಪಡೆದಿದ್ದರೆ, ಇನ್ನು ಕೆಲವು ಕುಟುಂಬಗಳಿಗೆ ಈ ಯೋಜನೆಯಡಿ ಯಾವುದೇ ಹಣ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಈ ವಿಷಯವಾಗಿ ಸರ್ಕಾರವು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗು ಪಡಿತರ ಚೀಟಿ ಲಿಂಕ್ ಆಗದೆ ಇರುವುದು ಕಾರಣ ಎಂದಿದ್ದಾರೆ. ಆದ್ರೆ ಎಲ್ಲ ಲಿಂಕ್ ಆದರೂ ಕೂಡ ಕೆಲವರಿಗೆ ಹಣ ಬಂದಿಲ್ಲ ಅಂಥಹ ತಾಂತ್ರಿಕ ದೋಷಗಳನ್ನು ಬಗೆಹರಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಎನ್ನಲಾಗಿದೆ .
ನಿಮ್ಮ ಖಾತೆಗೆ ಅನ್ನಭಾಗ್ಯದ ಅಕ್ಕಿ ಹಣ ಬಂದಿದೆಯೋ ಇಲ್ವೋ ಈ ರೀತಿ ಚೆಕ್ ಮಾಡಿಕೊಳ್ಳಿ
https://ahara.kar.nic.in/status1/status_of_dbt.aspx ಈ ಲಿಂಕ್ ಬಳಸಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆದುಕೊಳ್ಳಬಹುದು. ಚೆಕ್ ಮಾಡುವ ವಿಧಾನ ಹೀಗಿದೆ.

ಆಹಾರ ಇಲಾಖೆಯ ವೆಬ್ ಸೈಟ್ https://ahara.kar.nic.in/ ಲಾಗಿನ್ ಆಗಬೇಕು, ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ, ನಂತರ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡ್ ನ ನಂಬರ್ ಕೇಳುತ್ತದೆ, ಅಂದ್ರೆ ಆರ್ ಸಿ ನಂಬರ್ ಅನ್ನು ನಮೂದಿಸಿ, ನಂತರ ನಿಮ್ಮ ರೇಷನ್ ಕಾರ್ಡ್ ನ ಮೇಲ್ಬಾಗದಲ್ಲಿ ಕಾಣುವ RC ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ,
ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್ಗೆ ಹಣ ಜಮಾ ಆಗಿದ್ಯಾ, ಒಂದೊಮ್ಮೆ ಖಾತೆಗೆ ಹಣ ಬರದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ನಿಮಗೆ ಸಿಗಲಿದೆ. ಈ ರೀತಿಯಾಗಿ ಅನ್ನಭಾಗ್ಯ ಯೋಜನೆಯ ಹಣ ಬಂದಿದಿಯೋ ಇಲ್ಲವೋ, ಹಣ ಬರದೇ ಇರುವುದಕ್ಕೆ ಕಾರಣ ತಿಳಿದುಕೊಳ್ಳಿ .