Anna Bhagya: ನಿಮ್ಮ ಖಾತೆಗೆ ಬಂದಿದೆ ಅನ್ನಭಾಗ್ಯ ಯೋಜನೆಯ ಹಣ, ಮೊಬೈಲ್ ನಲ್ಲಿ ಈ ರೀತಿ ಪರಿಶೀಲಿಸಿಕೊಳ್ಳಿ.
ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಈ ರೀತಿಯಾಗಿ ಪರೀಕ್ಷಿಸಿಕೊಳ್ಳಿ.
Anna Bhagya Money Credit: ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಪಡೆದ ದಿನದಿಂದ ಉಚಿತ ಭಾಗ್ಯಗಳ ಅನುಷ್ಠಾನದ ಬಗ್ಗೆ ಚಿಂತನೆ ನಡೆಸುತ್ತಿದೆ. ವಿಧಾನಸಭಾ ಚುನಾವಣಾ ಸಮಯದಲ್ಲಿ ಘೋಷಣೆ ಹೊರಡಿಸಿರುವಂತೆ ರಾಜ್ಯದ ಜನತೆಗೆ ಐದು ಯೋಜನೆಗಳನ್ನು ನೀಡುವಲ್ಲಿ ಸರ್ಕಾರ ಸಫಲವಾಗುತ್ತಿದೆ.
ಈಗಾಗಲೇ ರಾಜ್ಯದಲ್ಲಿ ನಾಲ್ಕು ಯೋಜನೆಗಳ ಅನುಷ್ಠಾನದ ಬಗ್ಗೆ ಘೋಷಣೆ ಹೊರಡಿಸಲಾಗಿದೆ. ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಯೋಯಾಜನೆಗಳ ಲಾಭವನ್ನು ಜನರು ಪಡೆಯುತ್ತಿದ್ದಾರೆ. ಗೃಹ ಲಕ್ಷ್ಮಿಯ 2000 ಹಣ ಆಗಸ್ಟ್ ನ 31 ರಲ್ಲಿ ಖಾತೆಗೆ ಜಮಾ ಆಗುವ ಬಗ್ಗೆ ಕೂಡ ಘೋಷಣೆ ನೀಡಲಾಗಿದೆ. ಇನ್ನು ಉದ್ಯೋಗ ಭತ್ಯೆ ನೀಡುವ ಬಗ್ಗೆ ಸದ್ಯದಲ್ಲೇ ಅಪ್ಡೇಟ್ ಬರಲಿದೆ. ಈಗಾಗಲೇ ಯುವನಿಧಿ ಯೋಜನೆಯ ಅರ್ಹತೆಯ ಬಗ್ಗೆ ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ.

ಅನ್ನ ಭಾಗ್ಯ ಯೋಜನೆಯಡಿ ಸಿಗಲಿದೆ ಉಚಿತ ಅಕ್ಕಿ ಮತ್ತು ಹಣ
ಇನ್ನು ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿ ಪ್ರಾರಂಭಗೊಂಡಾಗ ಮೊದಲು ಅನ್ನ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿತ್ತು. ಆದರೆ ಕೆಲವು ತೊಂದರೆಯಿಂದಾಗಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಶಕ್ತಿ ಯೋಜನೆಯ ಬಳಿಕ ಅನ್ನ ಭಾಗ್ಯ ಯೋಜನೆ ಜಾರಿಯಾಗಿತ್ತು.
ಇನ್ನು ಉಚಿತ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ಅಕ್ಕಿ ಸರಬರಾಜಿನ ಕೊರತೆಯಿಂದಾಗಿ 5 ಕೆಜಿ ಅಕ್ಕಿ ಹಾಗು 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುವುದಾಗಿ ಸರ್ಕಾರ ಘೋಷಣೆ ಹೊರಡಿಸಿದೆ. ಪ್ರತಿ ಕೆಜಿಗೆ 34 ರೂ. ಗಳಂತೆ 170 ರೂ. ನೀಡುವುದಾಗಿ ಘೋಷಣೆ ಹೊರಡಿಸಿತ್ತು.
ಈ ಉಚಿತ ಅಕ್ಕಿಯ ಜೊತೆಗೆ ಹಣದ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಜುಲೈ ನಲ್ಲಿಯೇ ಪಡೆದಿದ್ದರು. ಜುಲೈ ತಿಂಗಳಲ್ಲಿ 5 ಕೆಜಿ ಅಕ್ಕಿಯ ಬದಲಾಗಿ ಫಲಾನುಭವಿಗಳಿಗೆ ಹಣ ತಲುಪಿದೆ. ಆಗಸ್ಟ್ ತಿಂಗಳಿನಲ್ಲಿ ಕೂಡ ಅಕ್ಕಿಯ ಬದಲಾಗಿ ಹಣ ಜಮಾ ಆಗಲಿದೆ. ನೀವು ಮನೆಯಲ್ಲಿಯೇ ಕುಳಿತು ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿದೆ.

ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ಈರೀತಿಯಾಗಿ ಪರಿಶೀಲಿಸಿಕೊಳ್ಳಿ
*ಅನ್ನಭಾಗ್ಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ಪರಿಶೀಲಿಸಿಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/ ಭೇಟಿ ನೀಡಬೇಕು.
*ಬಳಿಕ https://ahara.kar.nic.in/Home/EServices ಲಿಂಕ್ ಕ್ಲಿಕ್ ಮಾಡಿ ಅಥವಾ ಇ- ಸೇವೆಗಳು ಆಯ್ಕೆಯ ಮೇಲೇ ಕ್ಲಿಕ್ ಮಾಡಿ.
*ಅಲ್ಲಿ ನಿಮ್ಮ ಜಿಲ್ಲೆಯ ಹೆಸರುಗಳನ್ನೂ ನೀಡಲಾಗುತ್ತದೆ. ನಿಮ್ಮ ಜಿಲ್ಲೆ ಯಾವುದು ಎನ್ನುವುದನ್ನು ಆರಿಸಿ. ಪಡಿತರ ಚೀಟಿ ಸಂಖ್ಯೆ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ನೀಡುವ ಮೂಲಕ ನೀವು ಸುಲಭವಾಗಿ ಹಣದ ಪರಿಶೀಲನೆಯನ್ನು ಮಾಡಿಕೊಳ್ಳಬಹುದು.