Anna Bhagya: ಅನ್ನಭಾಗ್ಯ ಯೋಜನೆಯ ಇನ್ನೊಂದು ಘೋಷಣೆ, ಜನರ ಖಾತೆಗೆ ಈ ತಿಂಗಳು ಬರಲಿದೆ ಇಷ್ಟು ಹಣ.

ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಬಂಪರ್ ಆಫರ್, ಖಾತೆಗೆ ಬರಲಿದೆ ಹೆಚ್ಚುವರಿ ಅಕ್ಕಿ ಹಣ.

Anna Bhagya Money: ರಾಜ್ಯ ಸರ್ಕಾರದ 05 ಗ್ಯಾರೆಂಟಿಯಲ್ಲಿ ಅನ್ನ ಭಾಗ್ಯ (Anna Bhagya) ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಈಗಾಗಲೇ ಹಣ ಹಲವರ ಖಾತೆ ಗೆ ಜಮಾ ಆಗಿದೆ. ಅಕ್ಕಿ ಅಭಾವ ಇರುವುದರಿಂದ ಸರ್ಕಾರ ಅಕ್ಕಿಯ ಬದಲು ಹಣ ಪಡಿತರ ಪಡೆಯುವ ಕುಟುಂಬದ ಯಜಮಾನಿಗೆ ನೀಡುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 5 ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಒಟ್ಟು 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಪಾವತಿಸುವುದನ್ನು ಮುಂದುವರೆಸಿದೆ. ಅಷ್ಟೇ ಅಲ್ಲದೆ ಈ ಯೋಜನೆಯಡಿ ಹಣ ಇನ್ನು ಪಡೆಯದೇ ಇದ್ದ ಕುಟುಂಬಕ್ಕೂ ಸರಕಾರ ಆಶ್ವಾಸನೆ ನೀಡಿದೆ ಎನ್ನಲಾಗಿದೆ.

Anna bhagya money Latest Update
Image Credit: Hosakannada

ಈ ಯೋಜನೆಯಡಿ ಹಲವು ಕುಟುಂಬಕ್ಕೆ ಹಣ ಜಮೆ ಆಗಲಿಲ್ಲ

ಅಕ್ಕಿಯ ಬದಲು ಹಣವನ್ನು ಅನ್ನ ಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿದ್ದು. ಈ ಯೋಜನೆಯ ಹಣವನ್ನು ಡಿಬಿಟಿ ಮೂಲಕ ಪಡಿತರ ಚೀಟಿದಾರರ ಖಾತೆಗೆ ಜಮಾ ಮಾಡಲಾಗುತ್ತಿದೆ . ಆದ್ರೆ ಕೆಲವು ಕಾರಣಗಳಿಂದ ಹಲವು ಕುಟುಂಬಗಳು ಇನ್ನು ಹಣ ಪಡೆದಿಲ್ಲ ಎನ್ನಲಾಗುತ್ತಿದೆ .

ಆಧಾರ್ ಕಾರ್ಡ್ ಹಾಗು ಪಡಿತರಚೀಟಿ ಲಿಂಕ್ ಆಗದೆ ಇರುವವರಿಗೆ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವ ಪಡಿತರದಾರರಿಗೆ ಅಷ್ಟೇ ಅಲ್ಲದೆ ಎಲ್ಲಾ ಲಿಂಕ್ ಆಗಿದ್ದರು ಕೆಲವು ತಾಂತ್ರಿಕ ಕಾರಣದಿಂದ ಇನ್ನು ಹಣ ಜಮಾ ಆಗಿಲ್ಲ ಎನ್ನಲಾಗುತ್ತಿದೆ. ಈ ವಿಷಯವಾಗಿ ಸರ್ಕಾರ ಆದಷ್ಟು ಬೇಗ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಎಲ್ಲ ಪಡಿತರರಿಗೂ ಈ ಯೋಜನೆಯಲ್ಲಿ ಹಣ ದೊರೆಯುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದೆ.

Anna Bhagya Scheme New
Image Credit: Oneindia

ಡಿಬಿಟಿ ಮೂಲಕ ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಹಣ ವರ್ಗಾವಣೆ

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಪಡಿತರ ಚೀಟಿದಾರರ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡಲಾಗುವುದು. ಸೆಪ್ಟೆಂಬರ್ ತಿಂಗಳ ಹೆಚ್ಚುವರಿ ಅಕ್ಕಿ ಬದಲಿಗೆ ಇದುವರೆಗೆ 14 ಜಿಲ್ಲೆಗಳ 41.23 ಲಕ್ಷ ಪಡಿತರ ಚೀಟಿದಾರರಿಗೆ 240 ಕೋಟಿ ರೂಪಾಯಿ ಪಾವತಿಸಲಾಗಿದೆ.

ಡಿಬಿಟಿ ಮೂಲಕ ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ದಕ್ಷಿಣ ಕನ್ನಡ, ಧಾರವಾಡ, ರಾಯಚೂರು, ಮಂಡ್ಯ, ಕಲಬುರಗಿ, ಶಿವಮೊಗ್ಗ, ರಾಮನಗರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆಪ್ಟಂಬರ್ ತಿಂಗಳ ಹಣ ಪಾವತಿಸಲಾಗಿದೆ.

Leave A Reply

Your email address will not be published.