Anna Bhagya Amount: ಅನ್ನಭಾಗ್ಯ ಯೋಜನೆಯ ಹಣ ಇನ್ನುಮುಂದೆ ಗಂಡನ ಖಾತೆಗೆ ಜಮಾ ಆಗಲಿದೆ, ನಿಯಮ ಬದಲಾವಣೆ.

ಅನ್ನಭಾಗ್ಯ ಯೋಜನೆಯ ಕುರಿತಂತೆ ಇನ್ನೊಂದು ಬದಲಾವಣೆ ಜಾರಿಗೆ ತಂದ ಸರ್ಕಾರ.

Anna Bhagya Scheme Amount Credit: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬವು 05 ಕೆಜಿ ಅಕ್ಕಿಯ ಹಣವನ್ನು ಪಡೆಯುತ್ತಿದ್ದಾರೆ. ಸರಕಾರ ನೀಡಿದ ಭರವಸೆಯಲ್ಲಿ 05 ಕೆಜಿ ಅಕ್ಕಿ ನೀಡಬೇಕಿತ್ತು ಆದರೆ ಅಕ್ಕಿಯ ಕೊರತೆ ಇರುವುದರಿಂದ 05 ಕೆಜಿ ಅಕ್ಕಿಯ ಬದಲು ಮನೆಯ ಯಜಮಾನರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ಈಗ ಫಲಾನುಭವಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಯಜಮಾನರು ಇಲ್ಲದೇ ಇದ್ರೂ, 2ನೇ ವ್ಯಕ್ತಿ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಯಜಮಾನರು ಬೇರೆ ಊರಿನಲ್ಲಿದ್ದರೆ ಅಥವಾ ಬೇರೆ ಏನಾದರೂ ಸಮಸ್ಯೆಗಳಿದ್ದರೆ ಅದರ ಕುರಿತು ಪರಿಶೀಲಿಸಿ ಅಂಥವರ ಹಣವನ್ನು ಅವರ ಮನೆಯ ಇನ್ನೊಬ್ಬ ಹಿರಿಯ ವ್ಯಕ್ತಿಗೆ ನೀಡಲಾಗುತ್ತದೆ.

Anna Bhagya Scheme Amount Credit
Image Credit: Oneindia

ಅನ್ನಭಾಗ್ಯ ಯೋಜನೆ ಹಲವು ಕುಟುಂಬಗಳಿಗೆ ಸಹಕಾರಿಯಾಗಿದೆ

ಅನ್ನಭಾಗ್ಯ ಯೋಜನೆಯಡಿ ಹಲವು ಕುಟುಂಬಗಳು ಅಕ್ಕಿಯ ಹಣವನ್ನು ಪಡೆಯುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರದಂದು ಅವರ ಅಧ್ಯಕ್ಷತೆಯಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಸಭೆ ನಡೆಸಿದರು.

ಈ ಸಭೆಯ ಬಳಿಕ ಮಾತನಾಡಿದಂತ ಅವರು, ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್‌ ತಿಂಗಳಲ್ಲಿ 1,10,96,413 ಕಾರ್ಡುದಾರರಿಗೆ ಡಿಬಿಟಿ ಮಾಡಲಾಗಿದೆ. ಈ ವರೆಗೆ ಒಟ್ಟು 2,444.11 ಕೋಟಿ ರೂ. ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದರು.12.95 ಲಕ್ಷ ಚೀಟಿದಾರರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡುವ ಮೂಲಕ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. 2.60 ಲಕ್ಷ ಹೊಸ ಖಾತೆಗಳನ್ನು ಅಂಚೆ ಕಚೇರಿಗಳಲ್ಲಿ ತೆರೆಯಲಾಗಿದೆ ಎಂದು ತಿಳಿಸಿದರು.

Anna Bhagya Scheme Amount
Image Credit: Original Source

ಮನೆಯ ಇತರ ಸದಸ್ಯರ ಖಾತೆಗೆ ಹಣ ಜಮಾ ಆಗಲಿದೆ

ಅನ್ನಭಾಗ್ಯ ಯೋಜನೆಯನ್ನು ಡಿಸೆಂಬರ್‌ 31 ರೊಳಗೆ ಎಲ್ಲ ಅರ್ಹರಿಗೆ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.ಬಹುತೇಕ ಪ್ರಕರಣಗಳಲ್ಲಿ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಆಗಿರುವುದರಿಂದ, ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸುವ ಕುರಿತಂತೆ ಸಚಿವ ಸಂಪುಟದ ಮುಂದೆ ಮಂಡಿಸಲು ಸೂಚಿಸಿದರು. 7.67 ಲಕ್ಷ ಅನರ್ಹ ಪಡಿತರ ಚೀಟಿಗಳ ವಿಷಯದಲ್ಲಿ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Leave A Reply

Your email address will not be published.