Anna Bhagya: ಇಂತಹ ಜನರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಸ್ಥಗಿತ, ಸರ್ಕಾರದ ನಿರ್ಧಾರಕ್ಕೆ ಜನರು ಬೇಸರ.
ಅನ್ನಭಾಗ್ಯ ಯೋಜನೆಯಿಂದ ಹೊರಬಿದ್ದ ಕೆಲವು ಕುಟುಂಬಗಳು.
Anna Bhagya Scheme Money: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಗಳ ಸುರಿಮಳೆಯೇ ಸುರಿಯುತ್ತಿದೆ. ಶಕ್ತಿ ಭಾಗ್ಯ, ಗ್ರಹಲಕ್ಷ್ಮಿ, ಗ್ರಹ ಜ್ಯೋತಿ ಹಾಗು ಅನ್ನಭಾಗ್ಯ ಗಳಂತಹ ಯೋಜನೆಗಳನ್ನು ಕಾಣಬಹುದಾಗಿದೆ. ಆದರೆ ಈಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್ ಸರ್ಕಾರ ನೀಡಿದೆ.
ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವುದು ಸಾಧ್ಯವಿಲ್ಲ ಆದ್ದರಿಂದ ಅಕ್ಕಿಯ ಬದಲು ಪಡಿತರ ಚೀಟಿಯ ಯಜಮಾನಿಯ ಖಾತೆಗೆ ಹಣ ಹಾಕುದಗಿ ಘೋಷಣೆ ಮಾಡಲಾಗಿತ್ತು. ಅಲ್ಲದೇ ಜುಲೈ ಹಾಗು ಆಗಸ್ಟ್ ತಿಂಗಳ ಹಣ ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗಿತ್ತು.
ಕೆಲವು ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಖಾತೆಗೆ ಹಣ ಬಂದಿಲ್ಲ
ಅನ್ನಭಾಗ್ಯ ಯೋಜನೆಯಡಿ ಬರುವ ಹಣದ ನಿರೀಕ್ಷೆಯಲ್ಲಿದ್ದಂತ ರೇಷನ್ ಕಾರ್ಡ್ ದಾರರಿಗೆ ಕೆಲವು ಕಾರಣಗಳಿಂದ ಹಣ ಜಮಾ ಮಾಡಲಾಗಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಸುಮಾರು 29 ಲಕ್ಷ ಫಲಾನುಭವಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡದೇ ಬ್ರೇಕ್ ಹಾಕಿದೆ. ಸರ್ಕಾರದ ವಿವಿಧ ತಾಂತ್ರಿಕ ಕಾರಣದ ನೆಪ ಹೇಳಿ ಯೋಜನೆಯ ಅರ್ಹ ಫಲಾನುಭವಿ ಕುಟುಂಬಗಳಿಗೆ ಸವಲತ್ತು ನೀಡದೇ ವಂಚಿಸಿದೆ.
ಅನ್ನಭಾಗ್ಯ ಯೋಜನೆಯಿಂದ ಹೊರಬಿದ್ದ ಕುಟುಂಬಕ್ಕೆ ಸರ್ಕಾರ ಕೊಟ್ಟ ಕಾರಣಗಳು
ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು ತಾಂತ್ರಿಕ ದೋಷದ ಕಾರಣ 29 ಲಕ್ಷ ರೇಷನ್ ಕಾರ್ಡ್ ಕುಟುಂಬಗಳಿಗೆ ಡಿಬಿಟಿ ಸ್ಥಗಿತಗೊಳಿಸಿದ್ದೇವೆ. ಮೂರು ತಿಂಗಳಿಂದ ರೇಷನ್ ತಗೊಳ್ಳದೇ ಇರೋರು, ಗರಿಷ್ಠ ಕುಟುಂಬದ ಮಿತಿಯನ್ನು ಮೀರಿದವರಿಗೆ ಹೆಚ್ಚುವರಿ ಅಕ್ಕಿ ಹಣ ಜಮಾ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಸವಲತ್ತಿನಿಂದ ವಂಚಿತವಾಗಿರುವ ಫಲಾನುಭವಿ ಕುಟುಂಬಗಳು ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರೇ ಸರಿಪಡಿಸಿ ಸವಲತ್ತು ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಸತತ ಮೂರು ತಿಂಗಳಿಂದ ಪಡಿತರ ಪಡೆಯದ ಸುಮಾರು 5.40 ಲಕ್ಷ ಕುಟುಂಬಗಳಿಗೆ ಹಾಗೂ ಎಎವೈ ಯೋಜನೆಯ ಗರಿಷ್ಠ ಕುಟುಂಬ ಸದಸ್ಯರ ಮಿತಿ ದಾಟಿದಂತ 3.50 ಲಕ್ಷ ಕುಟುಂಬಗಳಿಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಿಲ್ಲ. ಹಣ ತಡೆ ಹಿಡಿದಿರುವ ಸರ್ಕಾರ ಪಡಿತರ ಮಾತ್ರ ವಿತರಿಸುತ್ತಿದೆ. ಈ ಮೂಲಕ ಅನ್ನಭಾಗ್ಯ ಫಲಾನುಭವಿಗಳಾಗಿದ್ದಂತ ಇವರಿಗೆ ಈ ನಿಯಮದಡಿ ಹೆಚ್ಚುವರಿ ಅಕ್ಕಿ ಹಣ ಖಾತೆಗೆ ಜಮಾ ಮಾಡಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.