Anushka Shetty: ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಅನುಷ್ಕಾ ಶೆಟ್ಟಿ, ಮೆಚ್ಚುಗೆ ಹೊರಹಾಕಿದ ಫ್ಯಾನ್ಸ್.
ಮಹಿಳೆಯರಿಗೆಂದೇ ವಿಶೇಷ ಸೌಲಭ್ಯ ಮಾಡಿಕೊಟ್ಟ ಅನುಷ್ಕಾ ಶೆಟ್ಟಿ,
Anushka Shetty Latest: ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿದ ನಟಿ ಅನುಷ್ಕಾ ಶೆಟ್ಟಿಯವರ (Anushka Shetty) ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾ ಇದೆ 07 ರಂದು ಬಿಡುಗಡೆಗೊಂಡಿತು. ಮಂಗಳೂರಿನ ಚೆಲುವೆಯಾದ ಇವರು ತಮಿಳು ಚಿತ್ರರಂಗದಲ್ಲಿ ಯಶಸ್ಯು ಗಳಿಸಿದ್ದಾರೆ.
ಒಳ್ಳೆ ಸ್ಕ್ರಿಫ್ಟ್ ಸಿಕ್ಕರೆ ಕನ್ನಡದಲ್ಲೂ ಸಿನಿಮಾ ಮಾಡುವೆ ಎಂದ ನಟಿ ಇವರಾಗಿದ್ದು, ಇಲ್ಲಿಯವರೆಗೆ ಒಂದು ಕನ್ನಡ ಸಿನಿಮಾ ಕೂಡ ಮಾಡಿಲ್ಲ. ಸದ್ಯಕ್ಕೆ ಈಗ ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾದ ಗೆಲುವಿನ ಖುಷಿಯಲ್ಲಿ ಇದ್ದಾರೆ.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ
ಮೂರೂ ವರ್ಷಗಳ ನಂತರ ಈಗ ಮಹೇಶ್ ಬಾಬು ಪಿಚಿಗೊಲ್ಲ ಇವರ ನಿರ್ದೇಶನದಲ್ಲಿ ಮೂಡಿಬಂದ ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.ಅನುಷ್ಕಾ ಶೆಟ್ಟಿ ದೇಶವಲ್ಲದೆ ವಿದೇಶದಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಇವರು ಆಗಾಗ ಟ್ವೀಟ್ ಮಾಡುದರ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಇರುತ್ತಾರೆ.
ಮಹಿಳೆಯರಿಗೆಂದೇ ಶೋ ಮೀಸಲಿಟ್ಟ ನಟಿ
ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾದ ಗೆಲುವಿನಲ್ಲಿರುವ ಅನುಷ್ಕಾ ಶೆಟ್ಟಿ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಟ್ವೀಟ್ ನಲ್ಲಿ ಸಿನಿಮಾ ಗೆದ್ದಿರುವುದರ ಬಗ್ಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೆ ಸೆಪ್ಟೆಂಬರ್ 14 ರಂದು ಮಹಿಳೆರಿಗೆಂದೇ ಚಿತ್ರದ ಶೋ ಅನ್ನು ಆಯೋಜಿಸಿರುವುದಾಗಿ ತಿಳಿಸಿದ್ದು, ಆಂಧ್ರ ಪ್ರದೇಶ ಹಾಗು ತೆಲಂಗಾಣದ ಚಿತ್ರ ಮಂದಿರಗಳಲ್ಲಿ ಈ ಶೋ ನೆಡೆಯಲಿದೆ ಇದಕ್ಕೆ ಎಲ್ಲ ಮಹಿಳೆಯರು ತಪ್ಪದೆ ಬನ್ನಿ ಎಂದಿದ್ದಾರೆ.

ಮದುವೆ ಬಗ್ಗೆ ಪ್ರಕ್ರಿಯೆ ಕೊಟ್ಟ ಅನುಷ್ಕಾ ಶೆಟ್ಟಿ
ಕೆಲ ದಿನಗಳ ಹಿಂದೆ ಇದೆ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ನಿರೂಪಕಿ, ಅನುಷ್ಕಾ ಮೇಡಂ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆಮಾಡಿದ್ದಾರೆ. ಆಗ ಅನುಷ್ಕಾ ಶೆಟ್ಟಿ ಯವರು ನಿಜ ಹೇಳಬೇಕೆಂದರೆ ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ, ಸಮಯ ಕೂಡಿ ಬಂದಾಗ ಮದುವೆ ಆಗಲಿದೆ, ಮದುವೆ ಎನ್ನುವುದು ನನ್ನ ಪಾಲಿಗೆ ಅದಾಗಿಯೇ ಗತಿಸಬೇಕು ಅದಕ್ಕೆ ಅದರದೇ ಅದ ಸಮಯ ಬೇಕು ಎಂದು ನಾನು ನಂಬುತ್ತೇನೆ ಸದ್ಯಕ್ಕೆ ನನ್ನ ಬಳಿ ಉತ್ತರ ಇಲ್ಲ ಎಂದಿದ್ದಾರೆ. ಪ್ರೀತಿ ಹಾಗು ಭಾವನೆಗಳಿಲ್ಲದೆ ಮದುವೆ ಆಗುವುದರಲ್ಲಿ ಅರ್ಥವಿಲ್ಲಾ ಎಂದು ಹೇಳಿದ್ದಾರೆ.