Apple Watch: ಐಫೋನ್ 15 ಬೆನ್ನಲ್ಲೇ 9 ಸಿರೀಸ್ ವಾಚ್ ಕಡಿಮೆ ಬೆಲೆ ಲಾಂಚ್ ಮಾಡಿದ ಆಪಲ್, ಇಂದೇ ಬುಕ್ ಮಾಡಿ.

ವಿಭಿನ್ನ ವಿಷೇಶತೆಯೊಂದಿಗೆ ಹೊಸ Apple ವಾಚ್ ಮಾರುಕಟ್ಟೆಗೆ, ಇಂದೇ ಬುಕ್ ಮಾಡಿ.

Apple Watch 9 Series: ಆಪಲ್ (Apple) ಕಂಪನಿಯು ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಬುಧವಾರ ಆಪಲ್ ವಾಚ್(Apple Watch) ಸರಣಿ 9 ಬಿಡುಗಡೆಗೊಳಿಸಿದ್ದು, ಆಪಲ್ ವಾಚ್ ಸೀರೀಸ್ 9 ಹಾಗೂ ಆಪಲ್ ವಾಚ್ SE ಆವೃತ್ತಿಗಳು ಸೆಪ್ಟೆಂಬರ್ 22ರಿಂದ ಭಾರತದ ಮಾರುಕಟ್ಟೆಯಲ್ಲಿ ದೊರೆಯಲಿವೆ.

ಆಪಲ್ ವಾಚ್ 9ನೇ ಸರಣಿಯು 41mm ಹಾಗೂ 45mm ಗಾತ್ರಗಳಲ್ಲಿ, ಹೊಸದಾಗಿ ಗುಲಾಬಿ ಬಣ್ಣದ ಅಲ್ಯುಮಿನಿಯಂ ಕೇಸ್‌ನಲ್ಲಿ ಸ್ಟಾರ್‌ಲೈಟ್, ಮಿಡ್‌ನೈಟ್, ಸಿಲ್ವರ್, ಪ್ರಾಡಕ್ಟ್ ರೆಡ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇಷ್ಟೇ ಅಲ್ಲದೆ, ಗೋಲ್ಡ್, ಸಿಲ್ವರ್ ಮತ್ತು ಗ್ರಾಫೈಟ್ ಬಣ್ಣಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಕೇಸ್‌ಗಳೊಂದಿಗೆ ದೊರೆಯಲಿದೆ.

Apple Watch 9 Series
Image Source: CNET

ಈ ವಾಚ್ ನ ಬ್ಯಾಟರಿ ಪವರ್
ಹೊಚ್ಚ ಹೊಸ ಎಸ್9 ಚಿಪ್ ಜೊತೆಗೆ ದಿನಪೂರ್ತಿ ಬಳಸಿದರೆ 18 ಗಂಟೆಗಳ ಬ್ಯಾಟರಿ ಚಾರ್ಜ್ ಬಾಳಿಕೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.ವಾಚ್ ಅನ್ನು ಮುಟ್ಟದೆಯೇ, ಡಬಲ್ ಟ್ಯಾಪ್‌ನಿಂದಲೇ ಆಪಲ್ ವಾಚ್ 9 ಅನ್ನು ಒಂದೇ ಕೈಯಿಂದ ನಿಭಾಯಿಸಬಹುದು.ಇದರೊಂದಿಗೆ, ಆಪಲ್ ವಾಚ್ ಅಲ್ಟ್ರಾ 2 ಕೂಡ ಬಿಡುಗಡೆಯಾಗಿದ್ದು, ಇದು ಆಪಲ್ ವಾಚ್ ನ ಅತ್ಯಂತ ಶಕ್ತಿಶಾಲಿ ಸ್ಮಾರ್ಚ್ ವಾಚ್. ಸಾಮಾನ್ಯ ಬಳಕೆಯಲ್ಲಿ 36 ಗಂಟೆಗಳ ಬ್ಯಾಟರಿ ಚಾರ್ಜ್ ಮತ್ತು ಕಡಿಮೆ ವಿದ್ಯುತ್ ಬಳಕೆಯ ಮೋಡ್ ಬಳಸಿದರೆ 72 ಗಂಟೆಗಳ ಬಾಳಿಕೆ ಬರಲಿದೆ.

Apple Watch 9 Series
Image Source: Apple

ಆಪಲ್ ವಾಚ್ ನ ಬೆಲೆ 
Apple Watch Ultra 2 ಬೆಲೆ ₹89,900 ಆಗಿದ್ದು, ಸೆಪ್ಟೆಂಬರ್ 22ರಿಂದ ಲಭ್ಯವಾಗಲಿದೆ. ಇಷ್ಟೇ ಅಲ್ಲದೆ, ಮ್ಯಾಗ್‌ಸೇಫ್ ಚಾರ್ಜಿಂಗ್ ಇರುವ ಏರ್‌ಪಾಡ್ಸ್ ಪ್ರೊ (2ನೇ ಪೀಳಿಗೆ) – ಇಯರ್ ಪಾಡ್‌ಗಳನ್ನೂ ಆಪಲ್ ಘೋಷಿಸಿದೆ. ಇದಕ್ಕೆ USB C ಮಾದರಿಯ ಚಾರ್ಜಿಂಗ್ ಒದಗಿಸಲಾಗಿರುವುದು ವಿಶೇಷ. ಇದರ ಬೆಲೆ ‌₹24,900 ಆಗಿರುತ್ತದೆ.

Leave A Reply

Your email address will not be published.