APY: 210 ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 5000 ರೂ ಪಿಂಚಣಿ, ಇನ್ನೊಂದು ಪಿಂಚಣಿ ಯೋಜನೆ ಜಾರಿಗೆ.
ಇನ್ನೊಂದು ಹೊಸ ಪಿಂಚಣಿ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿಯನ್ನ ನೀಡಿದೆ.
Atal Pension Yojana Details: ದೇಶದಲ್ಲಿ ಹಿರಿಯ ನಾಗರಿಕರ ನಿವೃತ್ತಿಯ ನಂತರದ ಜೀವನವನ್ನು ಸುಖಮಯವಾಗಿರಿಸುವ ಸಲುವಾಗಿ ಸರ್ಕಾರ (Government) ಸಾಕಷ್ಟು ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ನೀವು ಪಿಂಚಣಿ (Pension) ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದನ್ನು ವೃದ್ದಾಪ್ಯದಲ್ಲಿ ಬಳಕೆ ಮಾಡಬಹುದಾಗಿದೆ. ಮುಂದಿನ ಜೀವನ ಸುಖಮಯವಾಗಿರಲು ಈಗಲೇ ಹೂಡಿಕೆಯನ್ನು ಆರಂಭಿಸಬೇಕಾಗುತ್ತದೆ.
ಸರ್ಕಾರದ ಈ ಯೋಜನೆಯು ನಿವೃತ್ತಿಯ ನಂತರ ಪಿಂಚಣಿಯನ್ನು ನೀಡುತ್ತದೆ. ವ್ಯಕ್ತಿಗೆ ಅವರ ಕೆಲಸದ ಒತ್ತಡಗಳನ್ನು ಮೀರಿ ಘನತೆ ಮತ್ತು ಸುರಕ್ಷಿತ ಭವಿಷ್ಯದ ಭರವಸೆಯನ್ನು ಈ ಯೋಜನೆ ನೀಡುತ್ತದೆ. ಹಾಗಾದರೆ ಈ ಯೋಜನೆ ಯಾವುದು, ಇದರಲ್ಲಿ ಹೂಡಿಕೆ ಮಾಡುವುದರಿಂದ ಪ್ರಯೋಜನ ಏನು ಎನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಅಟಲ್ ಪಿಂಚಣಿ ಯೋಜನೆ (Atal Pension Yojana)
ಜನರು ಹೆಚ್ಚಾಗಿ ಆಯ್ಕೆ ಮಾಡುವ ಸುರಕ್ಷತೆ ಮತ್ತು ಗರಿಷ್ಠ ಲಾಭ ನೀಡುವ ಯೋಜನೆಗಳಲ್ಲಿ ಈ ಅಟಲ್ ಪಿಂಚಣಿ ಯೋಜನೆ (APY) ಒಂದಾಗಿದೆ. ಇದೊಂದು ಸರ್ಕಾರಿ ಯೋಜನೆಯಾಗಿದೆ. ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ 18 ರಿಂದ 40 ವರ್ಷ ವಯಸ್ಸಿನ ಭಾರತೀಯರು ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.
ನೀವು ಈ ಯೋಜನೆಯಲ್ಲಿ 1000, 2000, 3000, 4000 ಮತ್ತು ಗರಿಷ್ಠ 5000 ವರೆಗೆ ಪಿಂಚಣಿ ಪಡೆಯಬಹುದು. ಹಾಗೇ ಇದರಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕಾಗುತ್ತದೆ.
ಪ್ರತಿ ತಿಗಳು 5000 ರೂಪಾಯಿ ಪಿಂಚಣಿ ಪಡೆಯಿರಿ
ಒಬ್ಬ ವ್ಯಕ್ತಿ 18 ನೇ ವಯಸ್ಸಿನಿಂದ ಅಟಲ್ ಪಿಂಚಣಿ ಯೋಜನೆಗೆ ಸೇರಿ ತಿಂಗಳಿಗೆ 210 ರೂ ಗಳನ್ನ ಠೇವಣಿ ಮಾಡಿದರೆ ಆತ 60 ವರ್ಷದ ನಂತರ 5000 ರೂಪಾಯಿಗಳನ್ನ ಪ್ರತಿ ತಿಂಗಳು ಪಿಂಚಣಿಯಾಗಿ ಪಡೆಯಬಹುದು. ನೀವು ಕೇವಲ ಒಂದು ಅಟಲ್ ಪಿಂಚಣಿ ಖಾತೆಯನ್ನು ತೆರೆಯಬಹುದು.
ಹಾಗೇ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವವವರು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ 1.5 ಲಕ್ಷ ದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಈ ಯೋಜಗೆ ಸೇರಿದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬದವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದುಬಹುದು.